ಬೆಂಗಳೂರು –
ಎಷ್ಟು ವರ್ಷ ಸರ್ಕಾರಿ ನೌಕರಿ ಮಾಡಿ ನಿವೃತ್ತಿ ಪಡೆಯಬಹುದು ಗೊತ್ತಾ – ನಿವೃತ್ತಿಯ ನಂತರ ಏನೇನು ಸೌಲಬ್ಯಗಳು ಸಿಗಲಿವೆ ನೋಡಿ ಒಂದಿಷ್ಟು ಮಾಹಿತಿ
ಸಾಮಾನ್ಯವಾಗಿ ಸರ್ಕಾರಿ ನೌಕರಿಗೆ ಸೇರಿಕೊಂಡ ನಂತರ ನಿವೃತ್ತಿಯವರೆಗೂ ಕಡ್ಡಾಯವಾಗಿ ನೌಕರಿ ಮಾಡಬೇಕು ಎಂಬ ಷರತ್ತು ಇಲ್ಲ.ಕನಿಷ್ಠ 15 ವರ್ಷ ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡಿದ ವರು ಕೂಡಾ ಸ್ವಯಂಪ್ರೇರಿತವಾಗಿ ಸರ್ಕಾರಿ ಹುದ್ದೆಯಿಂದ ನಿವೃತ್ತಿ ಪಡೆಯುವ ಅವಕಾಶವಿದೆ
ಇಂಥವರು ವಿಆರ್ಎಸ್ ಪಡೆದರೆ ವೇತನ ಆಧಾರದ ಮೇರೆಗೆ ಪಿಂಚಣಿ, ಗ್ರಾಚ್ಯುಟಿ, ಪರಿವರ್ತಿತ ವೇತನ ಸೇರಿ ಇತರ ಸರ್ಕಾರಿ ಸೌಲಭ್ಯಗಳು ಸಿಗುತ್ತದೆ.ಕಡಿಮೆ ವೇತನ ಪಡೆಯುತ್ತಿರುವವರು ವಿಆರ್ಎಸ್ ಪಡೆದರೆ ಕಡಿಮೆ ವೇತನ ಆಧಾರದಲ್ಲಿ ಪಿಂಚಣಿ ಸೇರಿ ಸರ್ಕಾರಿ ಸೌಲಭ್ಯವೂ ದೊರೆಯಲಿದೆ.ನಿವೃತ್ತಿಯ ನಂತರ ವೇತನದ ಆಧಾರದ ಮೇಲೆ ಅವರ ನಿವೃತ್ತಿಯ ಸೌಲಭ್ಯಗಳು ಸೇರಿದಂತೆ ಪ್ರತಿ ಯೊಂದು ನಿರ್ಧಾರವಾಗಲಿದ್ದು ಅವುಗಳ ಆಧಾರದ ಮೇಲೆಯೆ ಅವರಿಗೆ ಪಿಂಚಣಿ ಸೇರಿದಂತೆ ನಿವೃತ್ತಿಯ ನಂತರ ಸಿಗಬಹುದಾದದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..