ನವದೆಹಲಿ –
ಈ ಬಾರಿ ಎಷ್ಟು DA ಹೆಚ್ಚಳವಾಗಲಿದೆ ಗೊತ್ತಾ ನಿರೀಕ್ಷೆಯಲ್ಲಿ ಸರ್ಕಾರಿ ನೌಕರರು ಹೋಳಿ ಹಬ್ಬದಲ್ಲಿ ಸಿಗಲಿದೆ ನೌಕರರಿಗೆ ರಂಗು ಹೌದು
ಕೇಂದ್ರ ಸರಕಾರಿ ನೌಕರರು ಕ್ರಮವಾಗಿ ಡಿಎ ಮತ್ತು ಡಿಆರ್‌ನಲ್ಲಿ ಶೇ 4ರಷ್ಟು ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ.
ಇದು ಘೋಷಣೆಯಾದರೆ ಕೇಂದ್ರ ಸರಕಾರಿ ನೌಕರರ ಹೊಸ ಡಿಎ ದರ ಶೇ.42ಕ್ಕೆ ಏರಿಕೆ ಯಾಗಲಿದೆ.ಕೊನೆಯ ಡಿಎ ಹೆಚ್ಚಳದ ವಿವರ ಗಳನ್ನು ಪರಿಶೀಲಿಸಿದರೆ ಕೇಂದ್ರ ಸರಕಾರವು ಅಕ್ಟೋಬರ್ 3, 2022 ರಂದು ಅಧಿಕೃತ ಆದೇಶ ದಲ್ಲಿ ಡಿಎಯನ್ನು ಹೆಚ್ಚಿಸಿತ್ತು.
ತುಟ್ಟಿ ಭತ್ಯೆಯು 1ನೇ ಜುಲೈ 2022 ರಿಂದ ಅನ್ವಯವಾಗುವಂತೆ ಮೂಲ ವೇತನದ ಶೇ.34 ರಿಂದ ಶೇ.38 ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಸರಕಾ ರದ ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಶೇ.34 ರಿಂದ ಶೇ.38 ಕ್ಕೆ ಹೆಚ್ಚಿಸಲಾಗಿದೆ.
ಡಿಎ ಲೆಕ್ಕಾಚಾ ರಕ್ಕೆ ಮೂಲ ವೇತನವು 7 ನೇ ವೇತನ ಆಯೋಗದ ಶಿಫಾರಸುಗಳನ್ನು ಆಧರಿ ಸಿದೆ ಎಂಬುದನ್ನು ನೌಕರರು ಗಮನಿಸಬೇಕು. ಏರುತ್ತಿರುವ ಹಣದುಬ್ಬರದಿಂದಾಗಿ ಅವರ ಸಂಬಳ,ಪಿಂಚಣಿ ಆದಾಯದ ಮೌಲ್ಯದಲ್ಲಿನ ಸವೆತವನ್ನು ಸರಿದೂಗಿಸಲು ಕೇಂದ್ರವು ಉದ್ಯೋ ಗಿಗಳಿಗೆ ಮತ್ತು ಪಿಂಚಣಿದಾರರಿಗೆ ಡಿಎ ಡಿಆರ್‌ನ್ನು ಒದಗಿಸುತ್ತದೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..