ಹೊಸಪೇಟೆ –
ಕಾರ್ ರೇಸ್ ನಲ್ಲಿ ಕಾರೊಂದು ಅಪಘಾತಕ್ಕಿಡಾಗಿದೆ. ಅಪಘಾತದ ನಡೆದ ಭಯಾನಕ ಘಟನೆಯೊಂದು ಹೊಸಪೇಟೆ ಯಲ್ಲಿ ನಡೆದಿದೆ.

ನೋಡ ನೋಡುತಿದ್ದಂತೆ ಗಾಳಿಯಲ್ಲಿ ತೇಲಿ ಬಂದು ಕಾರು ಪಲ್ಟಿಯಾಗಿದೆ.

ಮೊದಲನೆ ಸುತ್ತು ಮುಗಿದು ಎರಡನೆ ಸುತ್ತಿನಲ್ಲಿ ರಾಂಪ್ ಜಂಪ್ ಮಾಡುವ ಸಂದರ್ಭದಲ್ಲಿ ಈ ಒಂದು ಘಟನೆ ನಡೆದಿದೆ.

ಕಾರ್ ನ ಮುಂಬಾಗ ಸಂಪೂರ್ಣ ಜಖಂ ಆಗಿದೆ.ಆದರೆ ಕಾರ್ ಚಾಲಕನಿಗೆ ಯಾವುದೇ ಗಾಯಗಳಿಲ್ಲ.ಮೂಡಿಗೇರಿಯ ಮೊಹಮದ್ ಸಾಹಿಲ್ ಚಲಾಯಿಸುತಿದ್ದ ಕಾರು ಅಪಘಾತಕ್ಕಿಡಾಗಿದೆ.
ಕಾಸರಗೊಡಿನ ಮೂಜಿಬ್ ಮತ್ತು ಮೂಡಿಗೇರಿಯ ಮೊಹಮದ್ ಸಾಹಿಲ್ ನಡುವೆ ಈ ಒಂದು ಸ್ಪರ್ಧೆ ನಡೆದಿತ್ತು.ಈ ಸುತ್ತಿನಲ್ಲಿ ಇಬ್ಬರು ಸ್ಪರ್ಧಿಗಳು ಸುತ್ತನ್ನ ಪೂರ್ಣಗೊಳಿಸದೆ ಹಿನ್ನಲೆಯಲ್ಲಿ ಗೆಲುವು ಬೇರೆಯವರ ಮಡಿಲಿಗೆ ಆಯಿತು.1600 ಸಿ.ಸಿ. ಸಾಮರ್ಥ್ಯದ ಕಾರ್ ಓಡಿಸುವ ಕೊನೆಯ ಸುತ್ತು ಇದಾಗಿತ್ತು.ಒಟ್ಟಾರೆ ಏನೇ ಆಗಲಿ ನೋಡು ನೋಡುತ್ತಿದ್ದಂತೆ ಕಾರೊಂದು ಹೀಗೆ ಅಪಘಾತಕ್ಕಿಡಾಗಿ ಅದರಲ್ಲಿದ್ದ ಕಾರು ಚಾಲಕ ಪಾರಾಗಿದ್ದಾರೆ.