ಬೆಂಗಳೂರು –
ಈ ಬಾರಿ ರಾಜ್ಯದಲ್ಲಿ ಶಾಲೆಗಳು ಮುಂಚಿತವಾಗಿ ಆರಂಭ ವಾಗಲಿದ್ದು ಈಗಾಗಲೇ ಈ ಒಂದು ಕುರಿತು ಹೊಸ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಕೂಡಾ ಬಿಡುಗಡೆ ಆಗಿದ್ದು ಇನ್ನೂ ಶಿಕ್ಷಕರು ಮೇ 14 ಮತ್ತು 15ರಂದು ಶಾಲಾ ಸ್ವಚ್ಛತೆ, ಸುರಕ್ಷತೆ ಪರಿಶೀಲನೆ,ಪೂರ್ಣಭಾವಿ ಸಭೆ,ತರಬೇತಿ, ಸಮಾ ಲೋಚನಾ ಸಭೆಗಳೊಂದಿಗೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಮೇ 16ಕ್ಕೆ ಶಾಲೆ ಪ್ರಾರಂಭೋತ್ಸವ ನಡೆಸಿ ಮಕ್ಕಳನ್ನು ಸ್ವಾಗತಿಸಬೇಕು ಎಂಬ ಸೂಚನೆ ಯನ್ನು ಇಲಾಖೆಯ ಆಯುಕ್ತರು ಮಾಡಿದ್ದಾರೆ
ಶಾಲಾ ಪ್ರಾರಂಭೋತ್ಸವಕ್ಕೆ ಪೋಷಕರನ್ನು ಆಹ್ವಾನಿಸ ಬೇಕು ಎಂದು ಸೂಚಿಸಿದೆ. ಪ್ರಾರಂಭೋತ್ಸವದ ದಿನ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಆಕರ್ಷ ಣೀಯಗೊಳಿಸಬೇಕು.ಆರಂಭದ ದಿನವೇ ಮೊದಲ ಎರಡು ತರಗತಿ ಮಕ್ಕಳನ್ನು ಆಹ್ವಾನಿಸುವ ಕಾರ್ಯಕ್ರಮ ನಂತರ ಶೈಕ್ಷಣಿಕ ಚಟುವಟಿಕೆ ಆರಂಭಿಸಬೇಕು. ಬಿಸಿಯೂ ಟದಲ್ಲಿ ಮೊದಲ ದಿನ ಸಿಹಿ ಊಟ ತಯಾರಿಸಿ ಬಡಿಸಬೇ ಕು ಎಂದು ಸೂಚಿಸಲಾಗಿದೆ.