ಬೆಂಗಳೂರು –

ಮಹಾಮಾರಿ ಕರೋನಾದ ಆತಂಕದ ನಡುವೆ ರಾಜ್ಯಾದ್ಯಂತ ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭಗೊಂಡಿವೆ.ಒಂದು ಕಡೆಗೆ ಬಿಟ್ಟು ಬಿಡಲಾರದ ಮಳೆರಾಯನ ಆರ್ಭಟ ಮತ್ತೊಂದು ಕಡೆಗೆ ಕರೋನ ಕಾಟ ಇದರ ನಡುವೆ ರಾಜ್ಯದಲ್ಲಿ ಪರೀಕ್ಷೆಗಳು ಆರಂಭಗೊಂಡಿದ್ದು ಶಿಕ್ಷಣ ಇಲಾಖೆ ಅದರಲ್ಲೂ ಶಿಕ್ಷಕರ ಕಾಳಜಿ ಮೆಚ್ಚುವಂತಹದ್ದು.
ಇನ್ನೂ ಪರೀಕ್ಷೆಯ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರ ಗಳಿಗೆ ಆಗಮಿಸಿದ ವಿದ್ಯಾರ್ಥಿಗಳ ಸ್ವಾಗತ ಮಾತ್ರ ಎಂದು ಮರೆಯಲಾರದಂತದ್ದು.

ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಶೇಷ ರೀತಿಯಲ್ಲಿ ಪರೀಕ್ಷೆಗಳನ್ನು ಮಾಡಲಾಗುತ್ತಿದ್ದು ಹೀಗಾಗಿ ಆತಂಕದ ನಡುವೆಯೂ ಕೂಡಾ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಅದ್ದೂರಿಯಾಗಿ ಅದರಲ್ಲೂ ವಿಶೇಷವಾಗಿ ಬರಮಾಡಿಕೊಂಡು ಸ್ವಾಗತ ಮಾಡಲಾಯಿತು.

ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಮೊದಲು ಸ್ಯಾನಿಟೈಜರ್ ಮಾಡಿ ನಂತರ ದೇಹದ ಉಷ್ಣತೆಯನ್ನು ಪರೀಕ್ಷೆ ಮಾಡಿ ತದನಂತರ ಅವರಿಗೆ ಆರತಿಯನ್ನು ಮಾಡಿ ಗುಲಾಬಿ ಹೂ ನೀಡಿ ಸಾಲ ದಂತೆ ಸೆಲ್ಯೂಟ್ ವೊಂದನ್ನು ಹೊಡೆದು ಬರಮಾಡಿ ಕೊಂಡು ಪರೀಕ್ಷಾ ಕೇಂದ್ರಗಳಿಗೆ ಕಳಿಸಿಕೊಡಲಾ ಯಿತು.

ಇಂತಹ ಚಿತ್ರಣ ರಾಜ್ಯದ ಎಲ್ಲಾ ಕಡೆಗಳಲ್ಲಿ ಕೊಪ್ಪಳ ಸೇರಿದಂತೆ ಹಲವೆಡೆ ಕಂಡು ಬಂದಿತು. ಇದರೊಂ ದಿಗೆ ಪರೀಕ್ಷಾ ಕೇಂದ್ರಗಳನ್ನು ತಳಿಲು ತೋರಣಗ ಳಿಂದ ವಿಶೇಷವಾಗಿ ಶೃಂಗಾರ ಮಾಡಲಾಗಿತ್ತು.

ಜೊತೆಯಲ್ಲಿ ಸ್ಯಾನಿಟೈಜರ್, ಮಾಸ್ಕ್ ವಿತರಣೆ ಮಾಡಿ ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯವನ್ನು ತುಂಬಿದ ಅಧಿಕಾರಿಗಳು ಪರೀಕ್ಷೆಗೆ ಕಳುಹಿಸಿಕೊಟ್ಟ ಚಿತ್ರಣ ಕಂಡು ಬಂದಿತು.