ಬೆಂಗಳೂರು –
ಶಿಕ್ಷಕರ ವರ್ಗಾವಣೆ ಅಂದುಕೊಂಡಂತೆ ಆಗಿದ್ದರೆ ಆರಂಭವಾಗುತ್ತಿತ್ತು ಆದರೆ ಯಾವ ಇಲಾಖೆ ಗೂಯಾರಿಗೂ ಇಲ್ಲದ ವರ್ಗಾವಣೆ ನೀತಿ ನಿಯಮ ಗಳಿಂದ ಶಿಕ್ಷಣ ಇಲಾಖೆಯ ಅದರಲ್ಲೂ ಶಿಕ್ಷಕರು ವರ್ಗಾವಣೆ ಸಿಗದೇ ಬೇಸತ್ತಿದ್ದಾರೆ.ಇನ್ನೂ ಸಧ್ಯ ಇನ್ನೇನು ವರ್ಗಾವಣೆ ಆರಂಭವಾಗುತ್ತದೆ ಎನ್ನುವ ಷ್ಟರಲ್ಲಿ ಹೆಚ್ಚುವರಿ ಶಿಕ್ಷಕರಿಂದ ತಡೆಯಾಜ್ಞೆ ಇದನ್ನು ಬಿಟ್ಟು ವರ್ಗಾವಣೆ ಮಾಡುತ್ತೇವೆ ಎನ್ನುತ್ತಲೆ ಶಿಕ್ಷಣ ಇಲಾಖೆಯಿಂದ ತಡೆಯಾಜ್ಞೆ ಹಿನ್ನಲೆಯಲ್ಲಿ ಮುಂದೂಡಿಕೆ.ಚನ್ನಾಗಿ ಇದೆ ಅಲ್ವಾ ಪ್ರಹಸನ ಇದೆಲ್ಲದರ ವರ್ಗಾವಣೆ ಕುರಿತು ಶಿಕ್ಷಕ ಮಾಲತೇಶ್ ಬಬ್ಬಜ್ಜಿ ಅದ್ಭುತವಾಗಿ ಬರೆದಿದ್ದಾರೆ.
ಶಿಕ್ಷಕರ ವರ್ಗಾವಣೆ ಪ್ರಹಸನ ಧಾರಾವಾಹಿ ಸತತ 13 ವರ್ಷದಿಂದ ಯಶಸ್ವಿ ಪಯಣ
2019 ವರ್ಗಾವಣೆ ಇಲ್ಲ
2020 ವರ್ಗಾವಣೆ ಇಲ್ಲ
2021ಅರ್ಜಿ ಆಹ್ವಾನ (ಜೂನ್-ಜುಲೈ)
ಅರ್ಜಿ ಸಲ್ಲಿಕೆ (1 ತಿಂಗಳು ಆಗಸ್ಟ್)
ವರ್ಗಾವಣೆ (ಟೈಮ್ ಟೇಬಲ್) ಪರಿಷ್ಕೃತ (ಸೆಪ್ಟೆಂಬರ್ ತಿಂಗಳು ಪೂರ್ತಿ)
ಶಿಕ್ಷಣ ಸಚಿವರು ಬದಲಾವಣೆ
ಶಿಕ್ಷಕರು ಕೋರ್ಟಿಗೆ
ಹೊಸ ಶಿಕ್ಷಣ ಸಚಿವರ ಆಗಮನ
ಕೆ.ಎ.ಟಿ ತಡೆಯಾಜ್ಞೆ (ಸೆಪ್ಟೆಂಬರ್ ತಿಂಗಳು)
ಹೈಕೋರ್ಟಿಗೆ ಸರ್ಕಾರದ ಮೇಲ್ಮನವಿ ಇತ್ಯರ್ಥ (ಆಕ್ಟೊಬರ್-ನವೆಂಬರ್)
ಯಾವುದಾದರೂ ಚುನಾವಣೆ ಘೋಷಣೆ (ಡಿಸೆಂಬರ್)
ಚುನಾವಣೆ ನೀತಿ ಸಂಹಿತೆ 2 ತಿಂಗಳು (ಜನವರಿ-ಫೆಬ್ರುವರಿ)
ವರ್ಗಾವಣೆ ಮುಂದೂಡಿಕೆ…..
ಮಕ್ಕಳಿಗೆ ಪರೀಕ್ಷಾ ನೆಪ ಒಡ್ಡಿ (ಮಾರ್ಚ್ ತಿಂಗಳು) ವರ್ಗಾವಣೆ ಮುಂದೂಡಿಕೆ
2022
ಜೂನ್ ಜುಲೈ ವರ್ಗಾವಣೆ ಮತ್ತೆ ಪತ್ರಿಕಾ ಪ್ರಕಟಣೆ
ಶಿಕ್ಷಕರಿಗೆ ವರ್ಗಾವಣೆ ಸುಗ್ಗಿ
ಪೋಷಕರು/ಶಿಕ್ಷಣ ತಜ್ಞರ ವಾದ ಶುರು..
ಮಕ್ಕಳ ಶೈಕ್ಷಣಿಕ ಹಿತಾಸಕ್ತಿಗೆ ಧಕ್ಕೆ ಆಗಲಿದೆ ಎಂಬ ವಾದ
ವರ್ಗಾವಣೆ ಪ್ರಕ್ರಿಯೆ ಸ್ಥಗಿತ ಗೊಳಿಸಲು ಒತ್ತಡ..
ಕಳೆದ 13 ವರ್ಷದಿಂದ ಧಾರಾವಾಹಿ ತರ ವರ್ಗಾವಣೆ ಪ್ರಹಸನ ಯಶಸ್ವಿ ಪಯಣ….
ಕಳೆದ 13 ವರ್ಷದಿಂದ ಅರ್ಜಿ ಹಾಕಿ ವರ್ಗಾವಣೆಗೆ ಕಾಯುತ್ತಿರುವ ಶಿಕ್ಷಕ
✍️ಶ್ರೀ ಮಾಲತೇಶ್ ಬಬ್ಬಜ್ಜಿ