ಸಚಿವ ಸಂತೋಷ ಲಾಡ್ ಶಾಸಕ ಅರವಿಂದ ಬೆಲ್ಲದ ನಡುವೆ ಕಾದಾಟ – ಹೇಗಿತ್ತು ಗೊತ್ತಾ ಇಬ್ಬರು ನಾಯಕರ ನಡುವೆ ಬಿಗ್ ಪೈಟ್ ಗೆದ್ದವರು ಯಾರು ಸೋತವರು ಯಾರು ನೋಡಿ…..

Suddi Sante Desk
ಸಚಿವ ಸಂತೋಷ ಲಾಡ್ ಶಾಸಕ ಅರವಿಂದ ಬೆಲ್ಲದ ನಡುವೆ ಕಾದಾಟ – ಹೇಗಿತ್ತು ಗೊತ್ತಾ ಇಬ್ಬರು ನಾಯಕರ ನಡುವೆ ಬಿಗ್ ಪೈಟ್ ಗೆದ್ದವರು ಯಾರು ಸೋತವರು ಯಾರು ನೋಡಿ…..

ಧಾರವಾಡ

ಜಿಲ್ಲಾ ಲಾನ್ ಟೆನಿಸ್ ಕ್ರೀಡಾಂಗಣದಲ್ಲಿ ಆಯೋಜಿಸಲಿರುವ ಅಂತರಾಷ್ಟ್ರೀಯ ಪಂದ್ಯಾವಳಿಯನ್ನು ಯಶಸ್ವಿಯಾಗಿ ಸಂಘಟಿಸಲು ಪ್ರಯತ್ನಿಸೋಣ ಧಾರವಾಡ ದ ಕೀರ್ತಿ ಹೆಚ್ಚಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು

ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆಯ ಆತಿಥ್ಯದಲ್ಲಿ ಅಕ್ಟೋಬರ್-2023ರಲ್ಲಿ ಜರುಗಲಿ ರುವ ಅಂತರಾಷ್ಟ್ರೀಯ ಲಾನ್ ಟೆನಿಸ್ ಪಂದ್ಯಾ ವಳಿಯನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರದ ಕೀರ್ತಿ ಯನ್ನು ಹೆಚ್ಚಿಸೋಣ.ಈ ಪಂದ್ಯಾವಳಿಗೆ ಸರ್ಕಾರ ದಿಂದ ಮತ್ತು ತಮ್ಮ ವೈಯಕ್ತಿಕ ನೆರವು ನೀಡಲಾ ಗುವುದು ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು.

ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆಯ ಕ್ರೀಡಾಂಗಣದ ರಾಜ್ಯಾಧ್ಯಕ್ಷ ಪೆವಿಲಿಯನ್‍ದಲ್ಲಿ ನಿರ್ಮಿಸಿರುವ ನೂತನ ಸೌಲಭ್ಯಗಳನ್ನು ಉದ್ಥಾಟಿಸಿ ಮಾತನಾಡಿದರು.ಧಾರವಾಡ ಮಹಾನಗರವು ಶೈಕ್ಷಣಿಕ ಕಾಶಿಯೊಂದಿಗೆ ಕ್ರೀಡಾಕ್ಷೇತ್ರದ ಪ್ರತಿಭಾವಂತರಿಗೆ ಉತ್ತಮ ಸೌಲಭ್ಯಗಳನ್ನು ನೀಡುವ ನೆಲೆಯಾಗಿದೆ.ಇಲ್ಲಿ ವಿದ್ಯಾ ದಾನದೊಂದಿಗೆ ವಿವಿಧ ಕ್ರೀಡೆಗಳನ್ನು ಮಕ್ಕಳಿಗೆ ಆಸಕ್ತರಿಗೆ ಕಲಿಸಲಾಗುತ್ತಿದೆ.

ಇಂತಹ ತರಬೇತಿ ಸಂಸ್ಥೆಗಳಲ್ಲಿ ಲಾನ್ ಟೆನಿಸ್ ಸಂಸ್ಥೆಯು ಒಂದಾಗಿದೆ.ಈಗಾಗಲೇ ಒಂದೆರಡು ಸಲ ಅಂತರಾಷ್ಟ್ರೀಯ ಮಟ್ಟದ ಪಂದ್ಯಾವಳಿಗ ಳನ್ನು ಆಯೋಜಿಸಿದ್ದ ಅನುಭವ ಇರುವ ಈ ಸಂಸ್ಥೆಗೆ 17 ವರ್ಷಗಳ ನಂತರ ಮತ್ತೆ ಅಂತರಾ ಷ್ಟ್ರೀಯ ಮಟ್ಟದ ಲಾನ್ ಟೆನಿಸ್ ಪಂದ್ಯಾವಳಿ ಯನ್ನು ಆಯೋಜಿಸುವ ಸುವರ್ಣ ಅವಕಾಶ ಸಿಕ್ಕಿದೆ.

ಈ ಅವಕಾಶವನ್ನು ಬಳಸಿಕೊಂಡು ಪಂದ್ಯಾವಳಿ  ಯನ್ನು ಯಶಸ್ವಿಗೊಳಿಸುವುದರೊಂದಿಗೆ ಧಾರವಾಡ ವಿಶೇಷತೆಗಳನ್ನು, ಇಲ್ಲಿನ ಸಾಧಕರ ನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಗೊಳಿ ಸಲು ಪ್ರಯತ್ನಿಸೋಣ ಎಂದರು.ಪಂದ್ಯಾವಳಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು, ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಮಾಡಿಕೊಳ್ಳ ಬೇಕು. ಇದ್ದಕ್ಕೆ ರಾಜ್ಯ ಸರ್ಕಾರದಿಂದ ಮತ್ತು ತಮ್ಮ ವೈಯಕ್ತಿಕ ನೆರವನ್ನು ನೀಡುವುದಾಗಿ ಸಚಿವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಅವರು ಮಾತನಾಡಿ,ಧಾರವಾ ಡದಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಲು ಕ್ರೀಡಾ ಸೌಕರ್ಯಗಳನ್ನು, ಕ್ರೀಡಾ ಸಂಕಿರ್ಣಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆಯ ಅಧ್ಯಕ್ಷರು ಆಗಿರುವ ಜಿಲ್ಲಾಧಿ ಕಾರಿ ಗುರುದತ್ತ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಹಿರಿಯ ಅಧಿಕಾರಿ ಇಬ್ರಾಹಿಂ ಮೈಗೂರ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಸಂತೋಷ ಬಿರಾದಾರ ಸೇರಿದಂತೆ ಇತರರು ವೇದಿಕೆಯಲ್ಲಿ ಇದ್ದರು.

ಕಾರ್ಯದರ್ಶಿ ಸಂದೀಪ ಬಣವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಮತ್ತು ಕ್ರೀಡಾ ಅಭಿಮಾನಿಗಳು ಭಾಗವಹಿಸಿದ್ದರು.ಇದೇ ವೇಳೆ ಸಚಿವ ಸಂತೋಷ ಲಾಡ್ ಶಾಸಕ ಅರವಿಂದ್ ಬೆಲ್ಲದ ಮೈದಾನ ದಲ್ಲಿ ಟೆನಿಸ್ ಆಡುವ ಮೂಲಕ ಎಲ್ಲರ ಗಮನ ಸೆಳೆದರು……

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.