ಅಯೋಧ್ಯೆ ಹೋರಾಟಕ್ಕಾಗಿ ಬಂಧನ ವಿಚಾರ ಕುರಿತಂತೆ ಜಗದೀಶ್ ಶೆಟ್ಟರ್ ಹೇಳಿದ್ದೇನು ಗೊತ್ತಾ – ಸರ್ಕಾರಕ್ಕೆ ಕಿವಿ ಹಿಂಡಿದ ಜಗದೀಶ್ ಶೆಟ್ಟರ್ ಕೊಟ್ಟ ಸಂದೇಶವೇನು ನೋಡಿ…..

Suddi Sante Desk
ಅಯೋಧ್ಯೆ ಹೋರಾಟಕ್ಕಾಗಿ ಬಂಧನ ವಿಚಾರ ಕುರಿತಂತೆ ಜಗದೀಶ್ ಶೆಟ್ಟರ್ ಹೇಳಿದ್ದೇನು ಗೊತ್ತಾ – ಸರ್ಕಾರಕ್ಕೆ ಕಿವಿ ಹಿಂಡಿದ ಜಗದೀಶ್ ಶೆಟ್ಟರ್ ಕೊಟ್ಟ ಸಂದೇಶವೇನು ನೋಡಿ…..

ಬೆಂಗಳೂರು

ಅಯೋಧ್ಯೆ ಹೋರಾಟಕ್ಕಾಗಿ ಬಂಧನ ವಿಚಾರ ಕುರಿತಂತೆ ಜಗದೀಶ್ ಶೆಟ್ಟರ್ ಹೇಳಿದ್ದೇನು ಗೊತ್ತಾ ಸರ್ಕಾರಕ್ಕೆ ಕಿವಿ ಹಿಂಡಿದ ಜಗದೀಶ್ ಶೆಟ್ಟರ್ ಕೊಟ್ಟ ಸಂದೇಶವೇನು ನೋಡಿ ಹೌದು ಅಯೋಧ್ಯೆ ಹೋರಾಟ ವಿಚಾರವಾಗಿ ದಾಖ ಲಾದ ಪ್ರಕರಣವನ್ನು ಈ ಕೂಡಲೇ ಸರ್ಕಾರ ಹಿಂದೆ ಪಡೆಯುವಂತೆ ವಿಧಾನ ಪರಿಷತ್ ಸದಸ್ಯ ಕಾಂಗ್ರೇಸ್ ಪಕ್ಷದ ಮುಖಂಡ ಜಗದೀಶ್ ಶೆಟ್ಟರ್ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಈ ಕೂಡಲೇ ಈ ಒಂದು ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆಯುವಂತೆ ಒತ್ತಾಯವನ್ನು ಮಾಡಿದರು.ಇತ್ತ ಅಯೋಧ್ಯೆಯಲ್ಲಿ ರಾಮಲ ಲ್ಲಾನ ವಿಗ್ರಹ ಪ್ರತಿಷ್ಠಾಪನೆಗೆ ದಿನಗಣನೆಯ ನಡುವೆ ಇತ್ತ 32 ವರ್ಷಗಳ ಹಳೆಯ ಪ್ರಕರಣ ವನ್ನು ಸಧ್ಯ ರೀ ಓಪನ್ ಮಾಡಿ ಹುಬ್ಬಳ್ಳಿಯಲ್ಲಿ ರಾಮ ಜನ್ಮಭೂಮಿಗಾಗಿ ಹೋರಾಟ ನಡೆಸಿದ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಾಗಿದೆ.

ಇದು ಹಿಂದೂ ಸಂಘಟನೆಗಳು ಹಾಗೂ ವಿಪಕ್ಷ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿರುವ ನಡುವೆ ಜಗದೀಶ್ ಶೆಟ್ಟರ್ ಸರ್ಕಾರ ಕೂಡಲೇ ಪ್ರಕರಣ ವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ ಸರ್ಕಾರ ಕೂಡಲೇ ಪ್ರಕರಣವನ್ನು ಹಿಂಪಡೆಯಲಿ ಇದರಲ್ಲಿ ರಾಜಕೀಯ ಬೇಡ ಎಂದಿದ್ದಾರೆ.ಬಂಧನ ಮಾಡಿ ಅಂತಾ ಸರ್ಕಾರ ಹೇಳಿರುವುದಿಲ್ಲ.

ಕೋರ್ಟ್ ಆದೇಶ ಆಗಿರಬಹುದು ಆದರೆ ಪೊಲೀಸರೇ ಇದನ್ನು ನಿರ್ಧರಿಸಿರಬಹುದು ಆದರೆ ಸರ್ಕಾರವೇ ಇದನ್ನು ಮಾಡಿಸಿದೆ ಅಂದರೆ ನಾನು ಒಪ್ಪುವುದಿಲ್ಲ.ಈ ವಿಚಾರದಲ್ಲಿ ಬಿಜೆಪಿ ‌ಪ್ರತಿಭಟನೆ ಮಾಡಿದರೆ ಮಾಡಲಿ ಹಿಂದೆ ಬಿಜೆಪಿ ಸರ್ಕಾರವಿತ್ತು ಆಗ ರದ್ದು ಮಾಡಿದ್ದರೆ ಮುಗಿದು ಹೋಗುತ್ತಿತ್ತು ಎಂದರು.ಹಿಂದೆ ಅಯೋಧ್ಯೆ ವಿಚಾರದಲ್ಲಿ ಗಲಭೆಗಳಾದರೆ ರೌಡಿಶೀಟ್‌ ಓಪನ್‌ ಮಾಡುತ್ತಿದ್ದರು

ರೌಡಿಶೀಟ್‌ ಓಪನ್‌ ಆದವರ ಪೈಕಿ 50-60 ವರ್ಷದವರಿದ್ದಾರೆ.ವಯಸ್ಸಾದವರನ್ನು ರೌಡಿಶೀಟ್‌ನಿಂದ ತೆಗೆಯಿರಿ ಅಂತಾ ನನಗೆ ಶುಭಕೋರಲು ಬರುವ ಎಲ್ಲಾ ಕಮಿಷನರ್‌ಗಳಿಗೆ ಹೇಳುತ್ತಿದ್ದೆ. ಸಚಿವ ಸಂಪುಟಕ್ಕೆ ಈ ವಿಚಾರ ತಂದು ಪ್ರಕರಣ ವಾಪಸ್ ಮಾಡಿಸುವ ಪ್ರಯತ್ನ ಮಾಡಿದ್ದೇನೆ ಎಂದರು.

ಹುಬ್ಬಳ್ಳಿಯಲ್ಲಿ ನಾನೇ ಇದರ ನೇತೃತ್ವವನ್ನು ವಹಿಸಿಕೊಂಡಿದ್ದೆ ಅಯೋಧ್ಯೆಯಲ್ಲಿ ರಾಮಮಂ ದಿರ ನಿರ್ಮಾಣಕ್ಕೆ ಅಡ್ವಾಣಿ ಕೊಡುಗೆ ಅಪಾರ ವಾಗಿದೆ.ಮಾಧ್ಯಮಗಳಲ್ಲಿ ಬಂದ ಬಳಿಕ ಟ್ರಸ್ಟ್‌ ನವರು ಹೋಗಿ ಅಡ್ವಾಣಿ ಅವರಿಗೆ ಆಹ್ವಾನ ನೀಡಿದ್ದಾರೆ.

ನನಗಿರುವ ಮಾಹಿತಿ ಪ್ರಕಾರ ಎಲ್‌.ಕೆ. ಅಡ್ವಾಣಿ ರವರಿಗೆ ಆಹ್ವಾನ ಕೊಟ್ಟು ವಯಸ್ಸಾಗಿದೆ ಮನೆ ಯಲ್ಲೇ ಕುಳಿತು ವೀಕ್ಷಿಸಿ ಅಂದಿದ್ದಾರಂತೆ ಇದು ಕೊಟ್ಟಂತೆಯೂ ಆಗಬೇಕು ಕೊಡದಂತೆಯೂ ಆಗಬೇಕು ಆಹ್ವಾನ ಪತ್ರಿಕೆ ಕೊಟ್ಟು ಪರೋಕ್ಷ ವಾಗಿ ಬರಬೇಡಿ ಅಂದರೆ ಏನರ್ಥ ಎಂದು ಬಿಜೆಪಿ ಯವರನ್ನು ಪ್ರಶ್ನಿಸಿದರು.

ರಾಮ ಮಂದಿರಕ್ಕೆ ನಾನೂ 2 ಕೋಟಿಯಷ್ಟು ಹಣ ಸಂಗ್ರಹ ಮಾಡಿಕೊಟ್ಟಿದ್ದೆ.ಪಕ್ಷ ಬದಲಿಸಿದ ಮೇಲೆ ನಾವು ರಾಮ ಭಕ್ತರೇ ಅಲ್ಲವೆಂದು ಹೇಳುತ್ತಾರೆ ಎಂದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.