ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ನುಡಿದ ಭವಿಷ್ಯ ಏನು ಗೊತ್ತಾ…..

Suddi Sante Desk

ಮೈಲಾರ –

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ಐತಿಹಾಸಿಕ ‘ಶ್ರೀ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವ ನಡೆಯಿತು‌.ಇನ್ನೂ ಈ ಒಂದು ಕಾರ್ಣಿಕೋತ್ಸವದಲ್ಲಿ ಗೊರವಯ್ಯ ನುಡಿಯುವ ಭವಿಷ್ಯ ಕೇಳಲು ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು.

ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಬಿಲ್ಲನೇರಿ ಗೊರವಯ್ಯ ಕಾರ್ಣಿಕ ವಾಣಿ ನುಡಿದಿದ್ದು, ಮುತ್ತಿನರಾಶಿ ಮೂರು ಭಾಗ ಆದಿತಲೆ ಪರಾಕ್ ಎಂದರು. ಅಂದ್ರೆ ಈ ಬಾರಿ ರಾಜ್ಯ ರಾಜಕಾರಣ ಮೂರು ಭಾಗ ಆಗುತ್ತೆ. ರೈತರು ಬೆಳೆದ ಬೆಳೆ ಕೂಡ ಮೂರು ಪಾಲಾಗುತ್ತೆ ಎಂದು ಕಾರ್ಣಿಕವನ್ನು ವಿಶ್ಲೇಷಿಸಲಾಗಿದೆ.

ಐತಿಹಾಸಿಕ ಮೈಲಾರದಲ್ಲಿ ಮೈಲಾರಲಿಂಗೇಶ್ವರನ ಕಾರ್ಣಿಕ ನಡೆಯುತ್ತೆ.ಈ ಕಾರ್ಣಿಕೆಯನ್ನ ಕೇಳಲು ಸಾವಿರಾರು ಜನ ಸೇರ್ತಾರೆ.ಇನ್ನೂ ಗೋರವಯ್ಯ ನುಡಿಯುವ ಈ ಕಾರ್ಣಿಕೆಯನ್ನ ವರ್ಷದ ಭವಿಷ್ಯವಾಣಿಯೆಂದೇ ನಂಬಲಾಗುತ್ತದೆ‌.ಏನೇ ಆಗಲಿ ಕಾರ್ಣಿಕೋತ್ಸವ ಸಾಂಗವಾಗಿ ನಡೆಯಿತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.