ವಿಜಯಪುರ –
ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಇಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಇಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಬಂಥನಾಳ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.

35 ವರ್ಷದ ರುದ್ರಪ್ಪ ಆಲಮೇಲ ಹಾಗೂ 30 ವರ್ಷದ ಈರಮ್ಮ ಆಲಮೇಲ ಕೊಲೆಯಾದವರಾಗಿದ್ದಾರೆ.
ಈರಮ್ಮಳು ತನ್ನ ಮೈದುನ ರುದ್ರಪ್ಪ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

ಕಳೆದ ರಾತ್ರಿ ತೊಟದ ಮನೆಯಲ್ಲಿ ರುದ್ರಪ್ಪ ಮತ್ತು ಈರಮ್ಮ ಒಟ್ಟಿಗೆ ಇದ್ದಿದ್ದನ್ನ ಕಂಡ ಈರಮ್ಮಳ ಪತಿ ಲಕ್ಷ್ಮಣ, ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಇನ್ನೂ ಸ್ಥಳಕ್ಕೆ ಇಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಟ್ಟಾರೆ ಗಂಡ ಇದ್ದರೂ ಮತ್ತೊಬ್ಬನ ಜೊತೆಯಲ್ಲಿ ಕಳೆದ ಹಲವು ದಿನಗಳಿಂದ ಕದ್ದು ಮುಚ್ಚಿ ಮಂಚದಾಟವಾಡುತ್ತಿದ್ದ ಇಬ್ಬರಿಗೂ ಲಕ್ಷ್ಮಣ ಮಾರಕಾಸ್ತ್ರಗಳಿಂದ ಸರಿಯಾದ ಉತ್ತರ ನೀಡಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.