ಬೆಂಗಳೂರು –
ಇನ್ನೇನು ಬೇಸಿಗೆ ರಜೆ ಮುಗಿಯಲು ಬಂದಿದ್ದು ಇಷ್ಟು ದಿನವೂ ಬೇಸಿಗೆ ರಜೆ ಮಜಾದಲ್ಲಿ ಮುಳುಗಿದ್ದ ಮಕ್ಕಳು ಮತ್ತೆ ಶಾಲೆಯತ್ತ ಮುಖ ಮಾಡುತ್ತಿದ್ದಾರೆ.ಹೌದು ಮೇ 29ರಂದು ರಾಜ್ಯಾ ದ್ಯಂತ ಸರ್ಕಾರಿ ಶಾಲೆಗಳು ಆರಂಭವಾಗಲಿವೆ.
ಈ ಶೈಕ್ಷಣಿಕ ವರ್ಷವನ್ನು ಉತ್ತಮವಾಗಿ ಆರಂಭಿಸಲು ರಾಜ್ಯ ಶಿಕ್ಷಣ ಇಲಾಖೆ ಕೂಡ ಸಜ್ಜಾಗಿದೆ ಆಯಾ ಶಾಲೆಗಳ ಸಿಬ್ಬಂದಿ ಮೇ 28 ರಂದೇ ಶಾಲೆ ತೆರೆದು ಸ್ವಚ್ಛವಾಗಿಟ್ಟುಕೊಳ್ಳಬೇಕು.
ಬಿಸಿಯೂಟದ ಪರಿಕರಗಳಾದ ಅಕ್ಕಿ, ಬೇಳೆ, ಎಣ್ಣೆ ಹಾಗೂ ದಿನ ಬಳಕೆ ವಸ್ತುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಮುಖ್ಯ ಶಿಕ್ಷಕರಿಗೆ ಈಗಾಗಲೇ ಇಲಾಖೆ ಸೂಚಿಸಿದೆ.
ಶಾಲೆ ಆರಂಭದ ಸಿದ್ಧತೆಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಶೀಘ್ರ ಪೂರ್ವಭಾವಿ ಸಭೆ ಯನ್ನು ಕೂಡಾ ನಡೆಸಲು ನೋಡಲ್ ಅಧಿಕಾರಿ ಗಳು ಸೂಚಿಸಿದ್ದು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರಿವೀಕ್ಷಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಶಾಲೆಯಲ್ಲಿ ಪ್ರಖರ ಶಿಕ್ಷಣಕ್ಕಾಗಿ ಯಾವೆಲ್ಲ ಅಂಶ ಅಳವಡಿಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಯ ಲಿದೆ. ತಾಲೂಕು ಮಟ್ಟದಲ್ಲಿ ಮುಖ್ಯ ಶಿಕ್ಷಕರು ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..