ಬೆಂಗಳೂರು –
ಕಳೆದ ಒಂದೂವರೆ ವರ್ಷಗಳಿಂದ ಬಂದ್ ಮಾಡಿದ್ದ ರಾಜ್ಯದಲ್ಲಿನ ಶಾಲೆಗಳ ಆರಂಭಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು ಆಗಸ್ಟ್ 23 ರಿಂದ ಆರಂಭ ಮಾಡಲು ನಿರ್ದಾರವನ್ನು ತಗೆದುಕೊಂಡಿದೆ. ಹೌದು ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದು ಆಗಸ್ಟ್ 23 ರಿಂದ ಆರಂಭ ಮಾಡೊದಾಗಿ ಹೇಳಿದರು.ಇನ್ನೂ ಕರೋನಾ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿರುವ ಶಾಲಾ- ಕಾಲೇಜು ಗಳನ್ನು ಆಗಸ್ಟ್ 23ರಿಂದ ಆರಂಭಿಸಲಾಗುತ್ತದೆ.
ರಾಜ್ಯದಲ್ಲಿ ಎರಡು ಹಂತದಲ್ಲಿ ಶಾಲೆ ಆರಂಭಿಸಲು ನಿರ್ಧರಿಸಲಾಗಿದ್ದು ಅದರಂತೆ ಆಗಸ್ಟ್ 23ರಿಂದ 9, 10, 11, 12ನೇ ತರಗತಿಗಳು ಆರಂಭವಾಗಲಿವೆ. ಬ್ಯಾಚ್ ವೈಸ್ ಶಾಲೆ ಆರಂಭಿಸಲು ನಿರ್ಧರಿಸಿರುವ ಸರ್ಕಾರದ ಮುಂದೆ ಇದೆ ಕೊರೋನಾ ತೀವ್ರತೆ ಯನ್ನು ನೋಡಿಕೊಂಡು ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು.ಪ್ರಾಥಮಿಕ ಶಾಲಾ ಆರಂಭಿ ಸುವ ಸಂಬಂಧ ಆಗಸ್ಟ್ ಕೊನೆಯ ವಾರಾದಲ್ಲಿ ಸಭೆ ನಡೆಸಿ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ