ಹುಬ್ಬಳ್ಳಿ –
ಜಾಡಿಸಿ ಒದ್ದರೆ ಎಲ್ಲಿಗೋಗಿ ಬಿದ್ದಿರ್ತಿಯಾ ಗೊತ್ತಾ.ರಾಸ್ಕಲ್ ಇಲ್ಲೇನು ಕತ್ತೆ ಕಾಯಲಿಕ್ಕೇ ಬರತೀರಾ ನಾಚಿಕೆ ಆಗೊದಿಲ್ವಾ ಹೀಗಂತ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅಧಿಕಾರಿಯೊಬ್ಬರಿಗೆ ತರಾಟೆಗೆ ತಗೆದುಕೊಂಡಿದ್ದಾರೆ.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅಧಿಕಾರಿಯೊಬ್ಬರನ್ನು ಸಭೆಯಲ್ಲಿ ಹೀಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತಮ್ಮ ಸೂಚನೆಯನ್ನು ನಿರ್ಲಕ್ಷ್ಯ ಮಾಡಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗದ ಎಇಇ ರಂಗಸ್ವಾಮಿ ಅವರು ಸಚಿವ ಮಾಧುಸ್ವಾಮಿ ಕೋಪಕ್ಕೆ ತುತ್ತಾದ ಅಧಿಕಾರಿಯಾಗಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸಗಳು ನಡೆದೇ ಇಲ್ಲ, ಡಿಸೆಂಬರ್ 4 ರಂದೇ ನಾನು ಸೂಚನೆ ನೀಡಿದ್ದೆ, ಆದ್ರೂ ಯಾಕೆ ನೀವು ಕಂಟ್ರಾಕ್ಟರ್ ನ ಕರೆಸಿ ಕೆಲಸ ಒಪ್ಪಿಸಲಿಲ್ಲ. ಜಾಡ್ಸಿ ಒದ್ದರೆ ಎಲ್ಲಿಗೋಗ್ತಿಯಾ ಗೊತ್ತಾ ನೀನು,ರಾಸ್ಕಲ್, ಕತ್ತೆ ಕಾಯೋಕೆ ಬಂದಿದ್ದಿಯಾ ಇಲ್ಲಿಗೆ ಎಂದು ಲೆಫ್ಟ್ ಅಂಡ್ ರೈಟ್ ತೆಗೆದುಕೊಂಡಿದ್ದಾರೆ.
ನಿನ್ ಹೆಂಡ್ತಿಗೆ ಯಾವ್ ಸೋಪ್ ತಗೊಂಡೋಗ್ತೀಯಾ? ಈ ನನ್ಮಕ್ಕಳನ್ನು ಎಲ್ಲರನ್ನೂ ಸಸ್ಪೆಂಡ್ ಮಾಡ್ರಿ ಅಂತಾ ಇದೇ ವೇಳೆ ಮಾಧುಸ್ವಾಮಿ ಕೆಂಡಾಮಂಡಲರಾದರು.ಬಳಿಕ ಈ ಅಧಿಕಾರಿ ವಿರುದ್ದ ರೆಸಲ್ಯೂಷನ್ ಮಾಡಿ ಸಸ್ಪೆಂಡ್ ಮಾಡಿ ಅಂತಾ ಸಭೆಯಲ್ಲಿ ಜಿಪಂ ಸಿಇಓಗೆ ಸೂಚನೆ ನೀಡಿದ್ದಾರೆ.
ಇನ್ನೂ ಇವೆಲ್ಲದರ ನಡುವೆ ಅಧಿಕಾರಿ ಸಚಿವರು ಹೇಳಿದರು ಕೆಲಸ ಮಾಡಿಲ್ಲ ಸರಿ ತಪ್ಪು ಮಾಡಿದ್ದಾರೆ ಹೇಳಿದ ಕೆಲಸ ಮಾಡಿಲ್ಲ ಅಂದಾಕ್ಷಣ ಹೀಗೆ ತುಂಬಿದ ಸಭೆಯಲ್ಲಿ ಕಾನೂನು ಸಚಿವರು ಹೀಗೆ ತುಂಬಿದ ಸಭೆಯಲ್ಲಿ ಅಧಿಕಾರಿಗೆ ಮಾತನಾಡಿ ಅದರಲ್ಲೂ ಕೆಲ ಅಸಂಭದ್ದ ಪದಗಳನ್ನು ಬಳಸಿದ್ದು ವಿಷಾದದ ಸಂಗತಿ.