ಬೆಂಗಳೂರು –
ಸರ್ಕಾರಿ ನೌಕರರಿಗೆ DA ಯಾಕೆ ಕೊಡಲಾಗುತ್ತದೆ ಗೊತ್ತಾ ಹೌದು ಇದೊಂದು ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಗಳಲ್ಲಿ ಒಂದಾಗಿದೆ ಡಿಎ ಎಂದರೆ ಡಿಯರ್ನೆಸ್ ಅಲೋಯನ್ಸ್, ಅಥವಾ ತುಟ್ಟಿ ಭತ್ಯೆ.
ಪ್ರತೀ ವರ್ಷವೂ ದೈನಂದಿನ ಬಳಕೆಯ ವಸ್ತುಗಳ ಬೆಲೆ ಸಾಕಷ್ಟು ಹೆಚ್ಚುತ್ತಿರುತ್ತದೆ.ಸಂಬಳದಲ್ಲಿ ಕೆಲಸ ಮಾಡುವ ನೌಕರರಿಗೆ ಈ ಬೆಲೆ ಏರಿಕೆಯ ಬಿಸಿ ಅಷ್ಟಾಗಿ ತಾಕಬಾರದು ಎಂಬ ಉದ್ದೇಶ ದಿಂದ ಆಗಾಗ್ಗೆ ಕಾಲ ಕಾಲಕ್ಕೆ ತಕ್ಕಂತೆ ಹೆಚ್ಚಳ ಮಾಡಿ ನೀಡಿಕೊಂಡು ಬರಲಾಗುತ್ತಿದೆ
ಹೀಗಾಗಿ ಡಿಎ ಹೆಚ್ಚಳ ಮಾಡಲಾಗುತ್ತಿರುತ್ತದೆ ಈಗ ಶೇ. 38ರಷ್ಟು ಡಿಎ ಇದೆ ಎಂದರೆ ಅದು ನೌಕರನ ಮೂಲ ಸಂಬಳದ ಶೇ 38ರಷ್ಟು ಮೊತ್ತವಾಗುತ್ತದೆ.ಉದಾಹರಣೆಗೆ ನೌಕರನ ಬೇಸಿಕ್ ಸ್ಯಾಲರಿ 25,000 ರೂ ಇದ್ದರೆ ಅವರಿಗೆ ಶೇ. 38ರಷ್ಟು ಡಿಎ ಎಂದರೆ ಅದು 9,500 ರೂ ಆಗುತ್ತದೆ.
ಡಿಎ ಶೇ. 42ಕ್ಕೆ ಹೆಚ್ಚಳವಾದರೆ ಇದೇ ನೌಕರನಿಗೆ ಸಿಗುವ ಡಿಎ 10,500 ರೂ ಆಗುತ್ತದೆ. ಸಾಮಾನ್ಯ ವಾಗಿ ಸರ್ಕಾರ ಪ್ರತೀ ವರ್ಷ ಎರಡು ಬಾರಿ ಡಿಎ ಮತ್ತು ಡಿಆರ್ ಹೆಚ್ಚಳ ಮಾಡುತ್ತದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..