ಬೆಂಗಳೂರು –
ಹಳೆ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು – ಹಳೆಯ ಪಿಂಚಣಿ ಯೋಜನೆ ಕುರಿತಂತೆ ರಾಜ್ಯ ಸರ್ಕಾರಿ ನೌಕರರಿ ಗಾಗಿ ಒಂದಿಷ್ಟು ಮಹತ್ವದ ಮಾಹಿತಿ…..
ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಒತ್ತಾಯಿಸಿ ಈಗಾಗಲೇ ರಾಜ್ಯಾಧ್ಯಂತ ದೊಡ್ಡ ಪ್ರಮಾಣದಲ್ಲಿ ಕೂಗು ಜೋರಾಗುತ್ತಿದೆ. ಇನ್ನೂ ಇದನ್ನು ನಾವು ಪಡೆಯುತ್ತೇವೆ ಎಂಬ ಪಟ್ಟನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರು ಇಟ್ಟುಕೊಂಡಿದ್ದು ಈ ನಡುವೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ ಒಂದಿಷ್ಟು ಮಾಹಿತಿಯನ್ನು ನೀಡಲಾಗಿದೆ
ಹೌದು ‘ಹಳೆಯ ಪಿಂಚಣಿ’ ಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯವಾಗಿವೆ. ದಿನಾಂಕ 01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.ದಿನಾಂಕ: 01.04.2006ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗಾಗಿ ಹೊರಡಿಸಿದ ನೇಮಕಾತಿ ಅಧಿಸೂಚನೆಗಳ ಮೇರೆಗೆ ಆಯ್ಕೆ ಹೊಂದಿ ದಿನಾಂಕ: 01.04.2006ರಂದು ಅಥವಾ ಆ ದಿನಾಂಕದ ನಂತರ ಸೇವೆಗೆ ಸೇರಿರುವ ಕಾರಣ ದಿಂದ ನೂತನ ಅಂಶದಾಯಿ ಕೊಡುಗೆ
ಯೋಜನೆಯ (ರಾಷ್ಟ್ರೀಯ ಪಿಂಚಣಿ ಯೋಜನೆ) ವ್ಯಾಪ್ತಿಗೊಳಪಟ್ಟಿರುವ ಸರ್ಕಾರಿ ನೌಕರರನ್ನು ಸರ್ಕಾರವು ಅವರ ಅಭಿಮತದ ಮೇರೆಗೆ ಕೆಲವು ಷರತ್ತುಗಳಿಗೊಳಪಟ್ಟು ಒಂದು ಬಾರಿಯ ಕ್ರಮ ವಾಗಿ ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಯ ವ್ಯಾಪ್ತಿಗೊಳಪಡಿಸಲು ಒಪ್ಪಿಗೆ ನೀಡಿ ಆದೇಶಿ ಸಲಾಗಿದೆ.
ಹಳೆಯ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ
1) ಹುದ್ದೆಗಳ ಭರ್ತಿಗಾಗಿ ಪ್ರಕಟಿಸಲಾದ ನೇಮಕಾತಿ ಅಧಿಸೂಚನೆ ದಿನಾಂಕ ಪ್ರತಿ
2) ನೇಮಕಾತಿಯ ನಂತರ ಇಲಾಖೆ ಬದಲಾವಣೆಯಾಗಿದೆಯೇ? ವಿವರಗಳನ್ನು ನೀಡಬೇಕು
3) ಸಂಬಂಧಪಟ್ಟ ಆಯ್ಕೆ ಪಟ್ಟಿ ದಿನಾಂಕದ ಪ್ರತಿ
4) ನೇಮಕಾತಿ ಆದೇಶ ದಿನಾಂಕ ಪ್ರತಿ
5) ಪ್ರಸ್ತುತ ವೇತನ ಚೀಟಿ
6) ಕೆಜಿಐಡಿ (KGID)ಸಂಖ್ಯೆ
7) NPS ಪ್ರಾನ್ ಸಂಖ್ಯೆ
8) ಕೆಲಸ ಮಾಡುತ್ತಿರುವ ಕಚೇರಿ ವಿಳಾಸ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……