ಶಾಲೆಯಲ್ಲಿ ಮುಖ್ಯ ಶಿಕ್ಷಕ ಹೀಗೆ ಮಾಡೋದಾ – ವೈರಲ್ ಆಗಿದೆ ಶಾಲೆಯಲ್ಲಿ ಶಿಕ್ಷಕ ಮಾಡಿಕೊಂಡ ಕೆಲಸ…..

Suddi Sante Desk

ಕೊಪ್ಪಳ –

ಸಾಮಾನ್ಯವಾಗಿ ಶಾಲೆ ಅಂದರೆ ಆ ಕಾರ್ಯಕ್ರಮ ಈ ಕಾರ್ಯಕ್ರಮ ಮಾಡೋದು ಸಾಮಾನ್ಯ ಇದನ್ನು ನೋಡಿ ದ್ದೇವೆ ಕೇಳಿದ್ದೇವೆ ಆದರೆ ಇಲ್ಲೊಂದು ಶಾಲೆಯಲ್ಲಿ ಶಿಕ್ಷಕ ರೊಬ್ಬರು ವಿವಾಹದ ವಾರ್ಷಿಕೊತ್ಸವವನ್ನು ಆಚರಣೆ ಮಾಡಿಕೊಂಡು ಈಗ ಸುದ್ದಿಯಾಗಿದ್ದಾರೆ.ಹೌದು ಇಂಥಹ ದೊಂದು ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದ ಕಸ್ತೂರ ಬಾ ಶಾಲೆಯ ಮುಖ್ಯ ಶಿಕ್ಷಕ ಟಿ.ಶ್ರೀಧರ್ ತಮ್ಮ ಹತ್ತನೇ ವಿವಾಹ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಶಾಲೆಯ ಕೊಠಡಿಯೊಂದರಲ್ಲಿ ಆಚರಿಸಿಕೊಂಡಿ ರುವುದು ಈಗ ಚರ್ಚೆಗೆ ಹಾಗೇ ವಿವಾದಕಕ್ಕೆ ಕಾರಣವಾಗಿದೆ

ವಿವಾಹದ ವಾರ್ಷಿಕೊತ್ಸವದ ಹಿನ್ನಲೆಯಲ್ಲಿ ದಂಪತಿಯು ಕೇಕ್ ಕಟ್ ಮಾಡಿದ ಫೋಟೋ-ವಿಡಿಯೋಗಳು ಸಧ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಶಿಕ್ಷಕ ಟಿ.ಶ್ರೀಧರ್,ತಮ್ಮ ಹತ್ತನೇ ವಿವಾಹ ವಾರ್ಷಿಕೋತ್ಸ ವವನ್ನು ತಮ್ಮ ಹೆಂಡ್ತಿ ಹಾಗೂ ಬಂಧು ಬಳಗದವರ ಜೊತೆಗೆ ಆಚರಣೆ ಮಾಡಿಕೊಂಡಿರುವುದರ ವಿರುದ್ದ ಸಾರ್ವಜನಿಕರಿಂದ ಆಕ್ರೋಶ ಕೇಳಿ ಬಂದಿದ್ದು ಶಾಲೆಯಲ್ಲಿ ಇವರು ಹೀಗ್ಯಾಕೆ ಮಾಡಿದರು.ಇದು ಮಾವನ ಮನೆಯೋ ಶಾಲೆಯೋ ಅಂತಾ ಈ ಸಾರ್ವಜನಿಕರು ಶಿಕ್ಷಕರನನ್ನು ಪ್ರಶ್ನೆ ಮಾಡುತ್ತಿದ್ದಾರೆ. ಮುಂದೆ ಒಂದು ದಿನ ಶಾಲೆಯನ್ನು ಬೆಡ್‌ ರೂಮ್‌ ಆಗಿ ಶಿಕ್ಷಕ ಟಿ.ಶ್ರೀಧರ್ ಮಾಡಿಕೊಂಡರೇ ಗತಿ ಏನು ಅಂತ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.ಕೂಡಲೇ ಶಿಕ್ಷಕ ಟಿ.ಶ್ರೀಧರ್ ವಿರುದ್ದ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಸ್ಥಳೀಯ ಜನತೆ ಒತ್ತಾಯ ಮಾಡಿದ್ದು ಈ ಕುರಿತಂತೆ ಮೇಲಾಧಿಕಾರಿಗಳಿಗೂ ಕೂಡಾ ದಾಖಲೆ ಸಮೇತವಾಗಿ ದೂರನ್ನು ನೀಡಿದ್ದು ಅಧಿಕಾರಿಗಳು ಯಾವ ಕ್ರಮವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.