ರಾಯಚೂರು –
ಮಸ್ಕಿ ತಾಲೂಕಿನ ದಿಗ್ಗನಾಯಕನಭಾವಿ ಗ್ರಾಮದ ಸ ಕಿ ಪ್ರಾ ಶಾಲೆಯ ಶ್ರಮ ಬಿಂದು ಗ್ರಂಥಾಲಯಕ್ಕೆ ಬೆಂಗಳೂರಿನ IWCB ( ಇನ್ನರ್ ವ್ಹೀಲ್ ಕ್ಲಬ್ ಆಫ್ ಬೆಂಗಳೂರು ಹೆಚ್.ಬಿ.ಆರ್ )ಮಹಿಳಾ ತಂಡದವ ರು ಒಂದು ಸಾವಿರ ಪುಸ್ತಕಗಳನ್ನು ದೇಣಿಗೆ ನೀಡಿದ್ದಾರೆ.

ಈ ಒಂದು ವಿಚಾರವನ್ನು ಶಾಲೆಯ ಮುಖ್ಯ ಗುರುಗಳಾದ ವರದೇಂದ್ರ ಅವರು ತಿಳಿಸಿದ್ದಾರೆ. ನಮ್ಮ ಶಾಲೆಯ ಮಕ್ಕಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಯುವಕ/ಯುವತಿಯರಿಗೆ ಸದುಪಯೋಗವಾಗುವ ಅನೇಕ ಪುಸ್ತಕಗಳಿವೆ. ಹಾಗೂ ಅನೇಕ ಕಥೆ ಕವನಗಳ ಪುಸ್ತಕಗಳು ಇದ್ದು ಸಾಹಿತ್ಯಾಸಕ್ತಿಯನ್ನು ಬೆಳೆಸುತ್ತವೆ ಎಂಬ ಖುಷಿ ವಿಚಾರವನ್ನು ಶಿಕ್ಷಕ ಪರಮಾನಂದ ಅವರು ಹಂಚಿಕೊಂಡರು.

ದೇಣಿಗೆ ನೀಡಿದ ಮಹಿಳಾ ತಂಡದ ಅಧ್ಯಕ್ಷರಾದ ಶ್ರೀಮತಿ ಸೌಂದರ್ಯ ನಾರಾಯಣ್ ಅವರಿಗೆ ಮತ್ತು
ಸ್ಥಾಪಕ ಅಧ್ಯಕ್ಷರಾದ- ಶ್ರೀಮತಿ ವೀಣಾ ಪ್ರಮೋದ್ ಅವರಿಗೆ ಹಾಗೂ ಕಾರ್ಯದರ್ಶಿ-ಶ್ರೀಮತಿ ಪದ್ಮಶ್ರೀ ರಮೇಶ್ ಅವರಿಗೆ ಹಾಗೂ ಎಲ್ಲ ಸದಸ್ಯ ಸಹೋದರಿ ಯರಿಗೆ ಶಾಲೆಯ ಪರವಾಗಿ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಶಾಲೆಯ ಪರವಾಗಿ ಶಿಕ್ಷಕರು ಸಲ್ಲಿಸಿದ್ದಾರೆ