ಧಾರವಾಡ –
ಧಾರವಾಡ ಧ್ವನಿ ಸಂಘಟನೆಯಿಂದ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಮಷಿನ್ ಗಳ ಕೊಡುಗೆ – ಈಶ್ವರ ಶಿವಳ್ಳಿ ನೇತ್ರತ್ವದಲ್ಲಿ ಸಂಘಟನೆಯಿಂದ ಜಿಲ್ಲಾಸ್ಪತ್ರೆಗೆ ಗಿಪ್ಟ್
ಹುಬ್ಬಳ್ಳಿ ಧಾರವಾಡದಲ್ಲಿನ ಸಾರ್ವಜನಿಕರ ಸಮಸ್ಯೆಗಳ ಕುರಿತಂತೆ ಧ್ವನಿ ಎತ್ತುವ ಉದ್ದೇಶದಿಂದ ನೊಂದು ಕೊಂಡಿರುವ ಜನರಿಗೆ ನ್ಯಾಯ ದೊರಕಿಸಿ ಕೊಡುವ ಉದ್ದೇಶದಿಂದ ಹುಟ್ಟಿಕೊಂಡಿರುವ ಧಾರವಾಡ ಧ್ವನಿ ಸಂಘಟನೆ ಈಗಾಗಲೇ ಹಲವಾರು ಸಮಸ್ಯೆಗಳ ಕುರಿತಂತೆ ಹೋರಾಟದ ಮೂಲಕ ಕೆಲಸವನ್ನು ಮಾಡುತ್ತಿದ್ದು ಇದರೊಂದಿಗೆ ಸಾಮಾಜಿಕ ಕಾಳಜಿಯ ಕೆಲಸವನ್ನು ಮಾಡಿದೆ
ಹೌದು ಧಾರವಾಡದಲ್ಲಿನ ಜಿಲ್ಲಾ ಆಸ್ಪತ್ರೆಗೆ ಸಾಕಷ್ಟು ಪ್ರಮಾಣದಲ್ಲಿ ಆರ್ಥಿಕವಾಗಿ ಹಿಂದುಳಿದವರು ಬಡವರು ಬರುತ್ತಾರೆ ಹೀಗಿರುವಾಗ ಇವರಿಗೆ ನೆರವಾಗಲು ಎಂಬ ಉದ್ದೇಶದಿಂದ ಈ ಒಂದು ಸಂಘಟನೆಯಿಂದ ಆಕ್ಸಿಜನ್ ಮಷಿನ್ ವೊಂದನ್ನು ಗಿಪ್ಟ್ ನೀಡಲಾಯಿತು ಹೌದು ಸಂಘಟನೆಯ ಅಧ್ಯಕ್ಷ ಈಶ್ವರ ಶಿವಳ್ಳಿ ಯವರ ನೇತ್ರತ್ವದಲ್ಲಿ ಜಿಲ್ಲಾಸ್ಪತ್ರೆಗೆ ಮಷಿನ್ ವೊಂದನ್ನು ಕೊಡುಗೆಯಾಗಿ ನೀಡಲಾಯಿತು.
ಧಾರವಾಡ ಧ್ವನಿ ಸಂಘಟನೆಯ ವತಿಯಿಂದ ಈ ಒಂದು ಯಂತ್ರವನ್ನು ನೀಡಲಾಯಿತು ಧಾರವಾಡ ಜಿಲ್ಲಾ ಸಿವಿಲ್ ಹಾಸ್ಪಿಟಲ್ ಗೆ ಸಾಮಾನ್ಯವಾಗಿ ಬಡವರೆ ಹೆಚ್ಚಾಗಿ ಬರುವುದರಿಂದ ಅಲ್ಲಿರುವ ಮಕ್ಕಳಿಗೆ ಸಹಾಯವಾಗಲಿ ಅನುಕೂಲವಾಗಿ ಎಂಬ ಉದ್ದೇಶ ದಿಂದಾಗಿ ಮತ್ತು ಆಕ್ಸಿಜನ್ ಮಷಿನ್ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಧಾರವಾಡ ಧ್ವನಿ ಸಂಘಟನೆಯ ವತಿಯಿಂದ ಐದು ಆಕ್ಸಿಜನ್ ಮಷಿನ್ ಗಳನ್ನು ನೀಡಲಾಯಿತು.
ಧಾರವಾಡ ಜಿಲ್ಲಾ ಆಸ್ಪತ್ರೆಯ ಸರ್ಜನ್ ಸಂಗಪ್ಪಾ ಗಾಬಿ ಅವರಿಗೆ ಸಂಘಟನೆಯ ಅಧ್ಯಕ್ಷರಾದ ಈಶ್ವರ ಶಿವಳ್ಳಿ .ಮಂಜುನಾಥ ನೀರಲಕಟ್ಟಿ .ಸಂತೋಷ ಪಟ್ಟಣಶೆಟ್ಟಿ. ಶರಣು ಗಿರಡ್ಡಿ.ವೆಂಕಟೇಶ ರಾಯ್ಕರ.ಮುರಗೇಶ ಧನಶೆಟ್ಟಿ.ಪರಮೇಶ ಉಳವಣ್ಣವರ.ಆನಂದ ಗಡೇಕರ. ಬಸವರಾಜ ತಿಧಿ.ಇಮ್ರಾನ ತಾಳಿಕೋಟಿ. ಮಂಜುನಾಥ ನಡಟ್ಟಿಸೇರಿದಂತೆ ಹಲವರು ಸಮ್ಮುಖದಲ್ಲಿ ಈ ಒಂದು ಯಂತ್ರಗಳನ್ನು ನೀಡಲಾಯಿತು.ಈ ಒಂದು ಸಂದರ್ಭ ದಲ್ಲಿ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು
ಸುದ್ದಿ ಸಂತೆ ನ್ಯೂಸ್ ಧಾರವಾಡ…..