ಬಾಗಿಲು ತೆರೆದವು ಶಾಲೆಗಳು ಉತ್ಸಾಹದಿಂದ ಶಾಲೆಗಳತ್ತ ಮಕ್ಕಳು – ರಾಜ್ಯಾದ್ಯಂತ ಕಲಿತಾ ಚೇತರಿಕೆಯೊಂದಿಗೆ ಶಾಲಾ ಪ್ರಾರಂಭೊತ್ಸವ ಹೇಗಿದೆ ಗೊತ್ತಾ ಶಿಕ್ಷಕರು ಮಕ್ಕಳನ್ನು ಹೇಗೆ ಬರಮಾಡಿಕೊಂಡರು ಕಂಪ್ಲೀಟ್ ಮಾಹಿತಿ…..

Suddi Sante Desk

ಬೆಂಗಳೂರು –

ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಪುನಃ ಪ್ರಾರಂಭ ವಾಗಿದೆ ಬೇಸಿಗೆ ರಜೆಯನ್ನು ಮುಗಿಸಿಕೊಂಡು ಮಕ್ಕಳು ಶಾಲೆಗಳತ್ತ ಮುಖ ಮಾಡಿದ್ದು ಇನ್ನೂ ಶಾಲಾ ಆರಂಭದ ಹಿನ್ನಲೆಯಲ್ಲಿ ಈಗಾಗಲೇ ಶಾಲೆಗಳನ್ನು ಸ್ವಚ್ಚತೆ ಮಾಡಿ ತಳಿಲು ತೋರಣಗಳಿಂದ ಶೃಂಗರಿಸಿ ಅದ್ದೂರಿಯಾಗಿ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು.

ಇನ್ನೂ ರಜೆಯಲ್ಲಿ ಆಟದಲ್ಲೇ ಮೈಮರೆತಿದ್ದ ಮಕ್ಕಳು ಇಂದಿನಿಂದ ಮತ್ತೆ ಪಾಠದೊಳಕ್ಕೆ ಬ್ಯೂಜಿ ಆಗಲಿದ್ದಾರೆ. ರಾಜ್ಯಾದ್ಯಂತ ಇಂದಿನಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆ ಗಳು ಆರಂಭವಾಗಿವೆ.ಕೊರೋನಾ ಕಾರಣಕ್ಕೆ ಎರಡು ವರ್ಷಗಳಿಂದ ಶಾಲೆಗಳು ಸರಿಯಾಗಿ ನಡೆದಿರಲಿಲ್ಲ. ಹೀಗಾಗಿ ಬೇಸಿಗೆ ರಜೆಯನ್ನು ಈ ಬಾರಿ 15 ದಿನ ಮೊಟಕುಗೊಳಿಸಲಾಗಿದೆ.

ವಾಡಿಕೆಯಂತೆ ಜೂನ್ 1ರ ಬದಲಾಗಿ ಇಂದಿನಿಂದಲೇ ಅಂದರೆ ಮೇ 16 ರಿಂದಲೇ ಶಾಲೆ ಆರಂಭಿಸಲಾಗಿದೆ. ಇಂದು ಮೊದಲ ದಿನದಿಂದಲೇ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗಲಿದೆ. ಅಲ್ಲದೇ ಇಂದಿನಿಂದ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೂ ಚಾಲನೆ ಸಿಗಲಿದೆ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ.

ಸಂತೋಷದಿಂದಲೇ ಶಾಲೆಗೆ ಬಂದ ಮಕ್ಕಳು

ಇಂದಿನಿಂದ ಆರಂಭಗೊಂಡ ಶಾಲೆಗಳಿಗೆ ಮಕ್ಕಳು ತುಂಬಾ ಉತ್ಸಾಹ ಸಂತೋಷದಿಂದ ಶಾಲೆಗಳತ್ತ ಮಕ್ಕಳು ಮುಖ ಮಾಡಿ ಬಂದಿದ್ದಾರೆ.ಪ್ರಸಕ್ತ ಸಾಲಿನ ವರ್ಷದ ಶಾಲೆ ಆರಂಭ ವಾಗಿದೆ.ಮೊದಲ ದಿನವಾದ ಇಂದು ಪುಟಾಣಿಗಳೆಲ್ಲ ಶಾಲೆಗೆ ಬಂದು ಸಂಭ್ರಮಿಸಿದ್ದಾರೆ.

ಬೇಗ ಆರಂಭವಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ಮಕ್ಕಳು, ಗೆಳೆಯ, ಗೆಳತಿಯರೊಡನೆ ಮೊದಲ ದಿನವೇ ಆಡಿ ಖುಷಿ ಪಟ್ಟಿದ್ದಾರೆ.ರಾಜ್ಯಾದ್ಯಂತ ಈ ಒಂದು ವಾತಾವರಣ ಕಂಡು ಬಂದಿತು. ಹೆಗಲಿಗೆ ಬ್ಯಾಗ್ ಹಾಕಿಕೊಂಡು ಶಾಲೆಗಳತ್ತ ಮುಖ ಮಾಡಿದ್ದಾರೆ ತುಂಬಾ ಉತ್ಸಾಹದಿಂದ ಶಾಲೆಗಳಿಗೆ ಮಕ್ಕಳು ರಾಜ್ಯಾದ್ಯಂತ ಬಂದಿದ್ದಾರೆ

ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ

ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಆರಂಭಗೊಂಡಿದ್ದು ಮೊದಲ ದಿನ ಶಾಲಾ ಪ್ರಾರಂಭೊತ್ಸವ ಹಿನ್ನಲೆಯಲ್ಲಿ ತಳಿಲು ತೋರಣಗಳಿಂದ ಶಾಲೆಗಳನ್ನು ಶೃಂಗಾರ ಮಾಡ ಲಾಗಿತ್ತು ಎಂದಿನಂತೆ ಶಾಲೆಗೆ ಬಂದ ಮಕ್ಕಳನ್ನು ರಾಜ್ಯಾಂ ದ್ಯಂತ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ.

ಶಾಲೆಗೆ ಬರ್ತಿದ್ದಂತೆ ಶಿಕ್ಷಕ, ಶಿಕ್ಷಕಿಯರು ಮಕ್ಕಳನ್ನು ಅಪ್ಪಿ ಸ್ವಾಗತಿಸಿದ್ದಾರೆ.ವಿದ್ಯಾರ್ಥಿಗಳ ದೇಹದ ಟೆಂಪರೇಚರ್ ಚೆಕ್ ಮಾಡಿ, ಅವರನ್ನು ಶಾಲೆಯೊಳಗೆ ಬರಮಾಡಿಕೊಂಡಿದ್ದಾರೆ ಕೆಲವೆಡೆ ಚಾಕಲೇಟ್ ಸೇರಿದಂತೆ ಬೇರೆ ಬೇರೆ ವಸ್ತುಗಳನ್ನು ಮಕ್ಕಳಿಗೆ ನೀಡಿ ಪ್ರೀತಿಯಿಂದ ಬರಮಾಡಿಕೊಂಡರು.

ಶಾಲೆಗೆ ತಳಿರು ತೋರಣ ಕಟ್ಟಿ ಸ್ವಾಗತ ಕೋರಿದರು
ಇಲಾಖೆಯ ಮಾರ್ಗಸೂಚನೆ ಮತ್ತು ಆದೇಶದಂತೆ ರಾಜ್ಯಾಂದ್ಯಂತ ಸರ್ಕಾರಿ ಶಾಲೆಗಳನ್ನು ಶಿಕ್ಷಕರು ಶಾಲೆಗೆ ತಳಿರು- ತೋರಣಗಳಿಂದ ಶೃಂಗರಿಸಿ ಶಿಕ್ಷಕರು ಹಾಗೂ ಶಾಸಕರು ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡಿದ್ದಾರೆ. ಮಕ್ಕಳು ಬರುತ್ತಿದ್ದಂತೆ ಮಕ್ಕಳಿಗೆ ಹೂ, ಚಾಕಲೇಟು ಹಾಗು ಆರತಿ ಎತ್ತಿ ಶಾಸಕರು ಬರಮಾಡಿಕೊಂಡಿದ್ದಾರೆ.ಈ ಒಂದು ವಾತಾವರಣ ರಾಜ್ಯದ ತುಂಬೆಲ್ಲಾ ವಿಶೇಷವಾಗಿ ಕಂಡು ಬಂದಿತು

ಪೊರಕೆ ಹಿಡಿದು ಶಾಲೆ ಸ್ವಚ್ಛ ಮಾಡಿದ ಶಿಕ್ಷಕರು

ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರೇ ಪೊರಕೆ ಹಿಡಿದು ಶಾಲೆಯ ಆವರಣ ಸ್ವಚ್ಛಗೊಳಿಸಿದ್ದಾರೆ.ಈ ಒಂದು ಚಿತ್ರಣವು ರಾಜ್ಯದ ತುಂಬೆಲ್ಲಾ ಇಂದು ಕಂಡು ಬಂದಿತು ತಾವೇ ಸ್ವತಃ ಪೊರಕೆ ಹಿಡಿದು ಶಾಲೆಯ ಇಡೀ ಆವರಣ ಸ್ವಚ್ಛಗೊಳಿಸಿ, ತೆಂಗಿನಗರಿ ಕಟ್ಟಿ, ರಂಗೋಲಿ ಹಾಕಿದ್ದಾರೆ. ಈ ಮೂಲಕ ಅದ್ಧೂರಿಯಾಗಿ ವಿದ್ಯಾರ್ಥಿಗಳನ್ನು ಸ್ವಾಗತಿ ಸಿದ್ರು.ಗುಲಾಬಿ ಹೂವು ಕೊಟ್ಟು ಮಕ್ಕಳಿಗೆ ಶುಭ ಕೋರಿದ್ರು

ಗಡಿ ಜಿಲ್ಲೆ ಚಾಮರಾಜನಗರದಲ್ಲೂ ಸರ್ಕಾರಿ ಶಾಲೆಗಳ ಸಂಭ್ರಮದ ಆರಂಭವಾಗಿದೆ. ತಳಿರು ತೋರಣ ಕಟ್ಟಿ ರಂಗೋಲಿ ಬಿಡಿಸಿ ಸಂಭ್ರಮದ ವಾತಾವರಣ ನಿರ್ಮಾಣ ಮಾಡಿ, ವಿದ್ಯಾರ್ಥಿಗಳಿಗೆ ಗುಲಾಬಿ ಹೂ, ಸಿಹಿ ನೀಡಿ ಶಿಕ್ಷಕರು ಬರಮಾಡಿಕೊಂಡಿದ್ದಾರೆ. ಶಾಲೆಗೆ ಬಂದ ಮಕ್ಕಳಿಗೆ ಮೊದಲ ದಿನವೇ ಪಠ್ಯ-ಪುಸ್ತಕ ವಿತರಣೆ ಮಾಡಿ, ಹಾಲು, ಬಿಸ್ಕಿಟ್ ನೀಡಿ ಮಕ್ಕಳಲ್ಲಿ ಉತ್ಸಾಹ ತುಂಬಿದ್ದಾರೆ. ಜಿಲ್ಲೆಯಲ್ಲಿ 975 ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ 230 ಸರ್ಕಾರಿ ಪ್ರೌಢಶಾಲೆಗಳು ಇಂದಿನಿಂದ ಆರಂಭವಾಗಿವೆ.

ಮೊದಲ ದಿನವೇ ಪಠ್ಯ-ಪುಸ್ತಕ ವಿತರಣೆ

ಡೊಳ್ಳು ಬಾರಿಸಿ ವಿದ್ಯಾರ್ಥಿಗಳಿಗೆ ಸ್ವಾಗತ

ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿವೆ.ವಿವಿಧೆಡೆ ಶಾಲೆಗೆ ಬಂದ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಲಾಗಿದೆ. ಶಾಲೆಯಲ್ಲಿ ಮಕ್ಕಳ ಮೇಲೆ ಹೂ ಹಾಕಿ,ಡೊಳ್ಳು ಬಾರಿ ಸುತ್ತಾ ಶಿಕ್ಷಕರು ಶಾಲೆಗೆ ಸ್ವಾಗತಿಸಿದ್ದಾರೆ.ಆದರೆ ಶಾಲಾ ಆರಂಭದ ಮೊದಲ ದಿನ ಶಾಲೆಗೆ ಬೆರಳೆಣಿಕೆಯಷ್ಟು ಮಕ್ಕಳು ಹಾಜರಾಗಿದ್ರು.

ಬಿಸಿಲಿನಿಂದಾಗಿ ಶಾಲೆಗೆ ಬರಲು ಮಕ್ಕಳ ಹಿಂದೇಟು

ಯಾದಗಿರಿ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾದ ಹಿನ್ನಲೆ ಶಾಲೆಗೆ ಬರಲು ವಿದ್ಯಾರ್ಥಿಗಳು ಹಿಂದೇಟು ಹಾಕಿದ್ದಾರೆ.ಕಲ್ಯಾಣ ಕರ್ನಾಟಕ ಭಾಗದ ರಾಯಚೂರು,ಯಾದಗಿರಿ, ಕಲಬುರ ಗಿಯಲ್ಲಿ ಬಿಸಿಲಿನ ತಾಪ ಹೆಚ್ಚಳವಾಗಿದೆ. ಹೀಗಾಗಿ ಬಿಸಿಲು ಹೆಚ್ಚಾದ ಹಿನ್ನಲೆ ಶಾಲೆಯತ್ತ ಮಕ್ಕಳು ಮುಖ ಮಾಡಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕಾಲ್ ಮಾಡಿದ ಶಿಕ್ಷಕರು ಅವರನ್ನು ಶಾಲೆಗೆ ಕರೆದಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.