ಧಾರವಾಡ –
ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿ ಮತ್ತೆ ಡಾ ಬಸನಗೌಡ ಕರಿಗೌಡರ ಅಧಿಕಾರವನ್ನು ವಹಿಸಿ ಕೊಂಡಿದ್ದಾರೆ.ಹೌದು ಕಳೆದ ವರ್ಷ ಜನೆವರಿ 13 ರಂದು ಧಾರವಾಡ DHO ಆಗಿ ಅಧಿಕಾರವನ್ನು ವಹಿಸಿಕೊಂಡ ನಂತರ 1-10-22 ರಲ್ಲಿ ಇವರನ್ನು ವರ್ಗಾವಣೆ ಮಾಡಿ ಇವರ ಜಾಗೆಗೆ ಶ್ರೀಮತಿ ಪಾಟೀಲ ಶಶಿ ಇವರನ್ನು ನೇಮಕ ಮಾಡಿ ಆದೇಶ ವನ್ನು ಮಾಡಲಾಗಿತ್ತು.
ಇನ್ನೂ ಅವಧಿ ಮುನ್ನವೇ ನನ್ನನ್ನು ವರ್ಗಾವಣೆ ಮಾಡಿದ್ದಾರೆಂದು ಡಾ ಕರಿಗೌಡರು ಕೆಎಟಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.ಈ ಕುರಿತಂತೆ ಸುಧೀರ್ಘವಾಗಿ ವಿಚಾರಣೆ ಮಾಡಿದ ನ್ಯಾಯಾಲಯ ಸಧ್ಯ ಅಧಿಕಾರಿದಲ್ಲಿದ್ದ ಡಾ ಶಶಿ ಪಾಟೀಲ ಅವರ ನೇಮಕಾತಿಗೆ ತಡೆಯಾಜ್ಞೆ ಯನ್ನು ನೀಡಿ ಮತ್ತೆ ಕರಿಗೌಡರಿಗೆ ಧಾರವಾಡ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಯನ್ನಾಗಿ ಮುಂದುವರೆಯುವಂತೆ ಆದೇಶವನ್ನು ಮಾಡಲಾ ಗಿದ್ದು ಅತ್ತ ನ್ಯಾಯಾಲಯದಿಂದ ಆದೇಶ ಬರುತ್ತಿ ದ್ದಂತೆ ಇತ್ತ ಡಾ ಬಸನಗೌಡ ಕರಿಗೌಡರ ಸಂಜೆ 5 30 ಗಂಟೆಗೆ ಏಕಾಎಕಿಯಾಗಿ ಧಾರವಾಡದ ಕಚೇರಿಗೆ ಆಗಮಿಸಿ ಅಧಿಕಾರವನ್ನು ವಹಿಸಿಕೊಂ ಡರು.
ಇತ್ತ ಕಚೇರಿ ಸಮಯ ಮುಗಿಯಿತು ಎಂದು ಕೊಂಡು ಡಿಎಚ್ಒ ಡಾ ಶಶಿ ಪಾಟೀಲ ಅವರು ಮನೆಯತ್ತ ಹೋದರು ನಂತರ ಕಚೇರಿಗೆ ಬಂದ ಡಾ ಬಸನಗೌಡ ಕರಿಗೌಡರ ಅಧಿಕಾರವನ್ನು ವಹಿಸಿಕೊಂಡರು.ನ್ಯಾಯಾಲಯ ಆದೇಶ ಮಾಡಿದ್ದು ನಾನು ಕಚೇರಿಗೆ ಬರುತ್ತಿದ್ದೇನೆ ಅಧಿಕಾರ ಹಸ್ತಾಂತರ ಮಾಡಿ ಇಲ್ಲವೇ ನ್ಯಾಯಾ ಲಯ ಆದೇಶದ ನಂತರ ಅದನ್ನು ತಗೆದುಕೊಂಡು ಸರಕಾರದ ಪ್ರಧಾನ ಕಾರ್ಯದರ್ಶಿ ಇವರಿಂದ ಹೊಸದೊಂದು ಆದೇಶದ ನಂತರವೂ ಅಧಿಕಾರ ವನ್ನು ವಹಿಸಿಕೊಳ್ಳಬೇಕಾಗಿತ್ತು ಆದರೆ ನ್ಯಾಯಾಲಯದ ಆದೇಶವನ್ನಿಟ್ಟುಕೊಂಡು ಕರಿಗೌಡರು ಸಧ್ಯ ಅಧಿಕಾರವನ್ನು ವಹಿಸಿಕೊಂಡಿ ದ್ದಾರೆ.
ಇನ್ನೂ ಕಚೇರಿಗೆ ಆಗಮಿಸಿದ ಸಮಯದಲ್ಲಿ ಇಲಾಖೆಯ ಯಾರೊಬ್ಬರು ಕಚೇರಿಯಲ್ಲಿ ಇಲ್ಲದಿರೊದು ಕಂಡು ಬಂದಿತು.ಈ ಒಂದು ಬೆಳವಣಿಯ ನಡುವೆ ನಾಳೆ ಡಾ ಶ್ರೀಮತಿ ಪಾಟೀಲ ಶಶಿ ಅವರು ಯಾವ ನಿರ್ಧಾರವನ್ನು ಕೈಗೊಳ್ಳುತ್ತಾರೆ ಮುಂದಿನ ನಡೆ ಏನು ಎಂಬೊ ದನ್ನು ಕಾದು ನೋಡಬೇಕಿದೆ.
ವರದಿ – ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಹಿರಿಯ ವರದಿಗಾರರು