ಕಲಘಟಗಿ –
ಡಾ ಗಿರೀಜಾ ಪಲ್ಲಕ್ಕಿ ಮತ್ತು ಡಾ ರವಿ ಸೋಮಣ್ಣ ವರ ದಂಪತಿಗಳು ಸಮಾಜವೇ ಮೆಚ್ಚುವಂತಹ ಕೆಲಸವನ್ನು ಮಾಡಿ ಈಗ ದೇಶಕ್ಕೆ ಮಾದರಿಯಾಗಿ ದ್ದಾರೆ.ಹೌದು ವೈದ್ಯರು ಅಂದರೆ ಸಾಕಷ್ಟು ಬಿಡುವಿ ಲ್ಲದ ಕೆಲಸ ಕಾರ್ಯಗಳು ಇಧ್ದೇ ಇರುತ್ತವೆ ಒತ್ತಡದ ಕೆಲಸ ಬಿಡುವಿಲ್ಲದ ಓಡಾಟ ಇವೆಲ್ಲದರ ನಡುವೆ ಈ ವೈದ್ಯ ದಂಪತಿಗಳು ಈಗ ನಾಲ್ಕಾರು ಜನ ಮೆಚ್ಚುವಂತಹ ಕೆಲಸವನ್ನು ಮಾಡಿ ಇತರ ರಿಗೆ ಮಾದರಿಯಾಗಿದ್ದಾರೆ.
ಹೌದು ಅಪೌಷ್ಟಿಕ ಮಕ್ಕಳನ್ನು ದತ್ತು ಪಡೆದು ಕೊಂಡಿದ್ದಾರೆ.ಧಾರವಾಡ ಜಿಲ್ಲೆಯ ಕಲಘಟಗಿ ಯ ವೈದ್ಯ ದಂಪತಿಗಳಾಗಿರುವ ಇವರು ಪ್ರಾಥಮಿಕ ಆರೋಗ್ಯ ಕೇಂದ್ರ ಮುಕ್ಕಲ್ ಮತ್ತು ಗ್ರಾಮ ಪಂಚಾಯತ ಮುಕ್ಕಲ್ ಅವರ ಸಹಯೋ ಗದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅಕುಶಲ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಈ ಒಂದು ಘೋಷಣೆಯನ್ನು ಮಾಡಿದ್ದಾರೆ.
ಮುಕ್ಕಲ್ ಗ್ರಾಮದ ಅಂಬೇಡ್ಕರ್ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಶಿಬಿರದಲ್ಲಿ ಸುಮಾರು 300ಕ್ಕು ಹೆಚ್ಚು ಅಕುಶಲ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಲಾ ಯಿತು. ಶಿಬಿರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದ ಪಂಚಾಯತ ಅಭಿವೃದ್ಧಿ ಅಧಿಕಾರಿ ನಾಗರಾಜ್ ಬಿದರಳ್ಳಿ ಅವರಿಗೆ ವೈದ್ಯಾಧಿಕಾರಿ ಡಾ ರವಿ ಸೋಮಣ್ಣವರ್ ಅಭಿನಂದನೆ ಸಲ್ಲಿಸಿದರು.
ಅಂತೆಯೇ ಶಿಬಿರವನ್ನು ಯಶಸ್ವಿಗೊಳಿಸಲು ಸಹಕರಿಸಿದ ಗ್ರಾಮ ಪಂಚಾಯತ ಅಧ್ಯಕ್ಷ ಸಹದೇವ ಹೊರಕೇರಿ ಮತ್ತು ಸರ್ವ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.ಇದೆ ಸಮಯ ದಲ್ಲಿ ಡಾ ಗಿರಿಜಾ ಪಲ್ಲಕ್ಕಿ ಮತ್ತು ಡಾ ರವಿ ಸೋಮಣ್ಣವರ್ (ಜಂಟಿ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಧಾರವಾಡ) ಅವರು ಪ್ರಾಥಮಿಕ ಆರೋಗ್ಯ ಕೇಂದ್ರ ಮುಕ್ಕಲ್ ಮತ್ತು ಗಂಜಿಗಟ್ಟಿ ಅಡಿಯಲ್ಲಿ ಬರುವ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲು ತ್ತಿರುವ ಮಕ್ಕಳನ್ನು ಸ್ವಯಂ ಪ್ರೇರಿತರಾಗಿ ದತ್ತು ತೆಗೆದುಕೊಂಡು ಚಿಕಿತ್ಸೆ ನೀಡಲಾಗುವದು ಎಂದು ತಿಳಿಸಿದರು.
ಸದರಿ ದತ್ತು ತೆಗೆದುಕೊಂಡ ಮಕ್ಕಳಿಗೆ ಹೆಚ್ಚುವರಿ ಪೂರಕ ಆಹಾರ ಮತ್ತು ಹೆಚ್ಚಿನ ಅವಶ್ಯಕ ಚಿಕಿತ್ಸೆಗೆ ಸ್ಪಂದಿಸಲಾಗುವುದು ಎಂದು ತಿಳಿಸಿದರು. ಇದು ಒಂದು ಸ್ವಯಂ ಪ್ರೇರಿತ ಪ್ರಾಯೋಗಿಕ ಯೋಜನೆ ಯಾಗಿದ್ದು ಮುಂಬರುವ ದಿನಗಳಲ್ಲಿ ತಾಲೂಕಿನಾ ದ್ಯಂತ ವಿಸ್ತರಿಸಲಾಗುವುದು ಎಂದು ವೈದ್ಯ ದಂಪತಿ ತಿಳಿಸಿದರು.
ಇದರೊಂದಿಗೆ ಈ ವೈದ್ಯ ದಂಪತಿಗಳು ಇತರರಿಗೆ ಮಾದರಿಯಾಗಿದ್ದಾರೆ.ಸಾಮಾನ್ಯವಾಗಿ ಹೇಳೊದು ಆದರೆ ಮಾಡಿ ತೊರಿಸೊದು ತುಂಬಾ ಕಷ್ಟಕರವಾದ ಇಂದಿನ ಪರಸ್ಥಿತಿಯಲ್ಲಿಸಾಮಾಜಿಕ ಜವಾಬ್ದಾರಿ ನಮ್ಮದೇನು ಎಂಬೊ ದನ್ನು ಈ ಮೂಲಕ ವೈದ್ಯ ದಂಪತಿಗಳು ತೋರಿಸಿ ಕೊಟ್ಟಿ ದ್ದಾರೆ.ಇಂತಹದೊಂದು ಕೆಲಸ ಸರ್ಕಾರ ಗಳದ್ದು ಅಲ್ಲ ನಮ್ಮದು ಇದೆ ಕೈ ಜೋಡಿಸಿದಾಗ ಅದು ಸಾಧ್ಯ ಎಂಬೊದನ್ನು ಈ ಮೂಲಕ ಇವರು ತೋರಿಸಿಕೊಟ್ಟು ಮಾದರಿಯಾಗಿದ್ದಾರೆ.
ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಕಲಘಟಗಿ…..