ಕುಡಿಯುವ ನೀರಿನ ಮಿತ ಬಳಕೆಗೆ ಮಹಾನಗರ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಸಾರ್ವಜನಿಕರಲ್ಲಿ ಮನವಿ – ನೀರನ್ನು ಮಿತವ್ಯಯವಾಗಿ ಬಳಸಿ ನೀರಿನ ಉಳಿತಾಯ ಮಾಡಿ ಆಯುಕ್ತರ ಸಂದೇಶ…..

Suddi Sante Desk
ಕುಡಿಯುವ ನೀರಿನ ಮಿತ ಬಳಕೆಗೆ ಮಹಾನಗರ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಸಾರ್ವಜನಿಕರಲ್ಲಿ ಮನವಿ – ನೀರನ್ನು ಮಿತವ್ಯಯವಾಗಿ ಬಳಸಿ ನೀರಿನ ಉಳಿತಾಯ ಮಾಡಿ ಆಯುಕ್ತರ ಸಂದೇಶ…..

ಹುಬ್ಬಳ್ಳಿ

ಕುಡಿಯುವ ನೀರಿನ ಮಿತ ಬಳಕೆಗೆ ಮಹಾನಗರ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಸಾರ್ವಜನಿಕರಲ್ಲಿ ಮನವಿ – ನೀರನ್ನು ಮಿತವ್ಯ ಯವಾಗಿ ಬಳಸಿ ನೀರಿನ ಉಳಿತಾಯ ಮಾಡಿ ಆಯುಕ್ತರ ಸಂದೇಶ ಹೌದು

ಪ್ರಸಕ್ತ ಸಾಲಿನಲ್ಲಿ ಸವದತ್ತಿಯ ರೇಣುಕಾ ಜಲಾಶಯದ ಹಾಗೂ ದುಮ್ಮವಾಡ ನೀರಸಾಗರ ಜಲಾಶಯದ ಜಲಾನಯನದ ಪ್ರದೇಶದಲ್ಲಿ ವಾಡಿಕೆಯಂತೆ ಮಳೆ ಆಗದೇ ಇರುವುದರಿಂದ, ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಗಣನೀಯವಾಗಿ ನೀರಿನ ಪ್ರಮಾಣ ಕಡಿಮೆಯಾ ಗಿದೆ.ಲಭ್ಯವಿರುವ ನೀರನ್ನೇ ಮಳೆಯಾಗುವವರೆಗೆ ನಿರ್ವಹಣೆ ಮಾಡಬೇಕಾಗಿರುವುದರಿಂದ ನಾಗರಿ ಕರು ನೀರನ್ನು ಮಿತವ್ಯಯವಾಗಿ ಬಳಸಿ ನೀರಿನ ಉಳಿತಾಯ ಮಾಡಿ ಮುಂದಿನ ದಿನಗಳಲ್ಲಿ ತೊಂದರೆಯಾಗುವುದನ್ನು ತಪ್ಪಿಸಲು ಮಹಾ ನಗರ ಪಾಲಿಕೆಯಿಂದ ವಿನಂತಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಯಿಂದ ಮಲಪ್ರಭಾ ನೀರನ್ನು ಖಾಸಗಿ ಬಳಕೆಗೆ ನೀಡುವುದನ್ನು ಈಗಾಗಲೇ ಬಂದ್ ಮಾಡಲಾ ಗಿದೆ. ಹೋಳಿ ಹಬ್ಬ ಹಾಗೂ ರಂಗಪಂಚಮಿ ಆಚರಣೆ ಸಂದರ್ಭದಲ್ಲಿ ಖಾಸಗಿ ಬೋರವೆಲ್‌ ನವರು ಮತ್ತು ಅವಳಿನಗರದ ಜನತೆ ನೀರಿನ ಮಿತಬಳಕೆಗೆ ಹೆಚ್ಚು ಆದ್ಯತೆ ನೀಡಬೇಕು. ಸಾರ್ವ ಜನಿಕರು ಕುಡಿಯುವ ನೀರಿಗೆ ಮಾತ್ರ ಟ್ಯಾಂಕರ್ ನೀರನ್ನು ಒದಗಿಸಲು ಕೋರುವುದು.

ಟ್ಯಾಂಕರ್ ನೀರನ್ನು ಕುಡಿಯಲು ಮಾತ್ರ ಬಳಸುವುದು. ಅಗತ್ಯವಿರುವಷ್ಟೇ ನೀರನ್ನು ಮಾತ್ರ ಬಳಸಿ. ನೆಲಮಟ್ಟದ ಟ್ಯಾಂಕ್ ಹಾಗೂ ಸಿಂಟೆಕ್ಸ್ ಟ್ಯಾಂಕ್‌ಗಳು ತುಂಬಿ ನೀರು ಪೋಲಾ ಗುವುದನ್ನು ತಡೆಯಬೇಕು.ಕುಡಿಯುವ ನೀರಿ ನಿಂದ ಪೈಪ್ ಹಿಡಿದು ಕಾರು ಮತ್ತು ಇತರ ವಾಹನಗಳನ್ನು ತೊಳೆಯಬೇಡಿ.

ಕುಡಿಯುವ ನೀರಿನಿಂದ ಗಾರ್ಡನ್ ಗಳಿಗೆ ನೀರನ್ನು ಬಳಸಬೇಡಿ.ಮನೆ ಅಂಗಳ ಸ್ವಚ್ಛಗೊ ಳಿಸಲು ನೀರನ್ನು ವ್ಯರ್ಥ ಮಾಡಬೇಡಿ. ಮನೆಯ ನಳಗಳಲ್ಲಿ ನೀರಿನ ಸೋರಿಕೆ ಇದ್ದರೆ ಅದನ್ನು ಕೂಡಲೇ ಸರಿಪಡಿಸಿಕೊಳ್ಳಿ. ನಗರದ ಯಾವುದೇ ಭಾಗದಲ್ಲಿ ನೀರಿನ ಪೈಪಿಗೆ ಹಾನಿಯಾಗಿ ನೀರು ಸೋರಿಕೆಯಾಗುತ್ತಿದ್ದರೆ,

ಅಥವಾ ವಾಲ್ ಗಳಲ್ಲಿ ಸೋರಿಕೆ ಕಂಡು ಬಂದರೆ ಹಾಗೂ ಯಾರಾದರೂ ಅನಗತ್ಯವಾಗಿ ನೀರು ಪೋಲು ಮಾಡುವುದನ್ನು ಗಮನಿಸಿದರೆ ನೀರು ಸರಬರಾಜು ಸಹಾಯವಾಣಿ ಕೇಂದ್ರಕ್ಕೆ 7996666247 ಕರೆ ಮಾಡುವಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ರಾದ ಡಾ. ಈಶ್ವರ ಉಳ್ಳಾಗಡ್ಡಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.