ಬೆಂಗಳೂರು –
ರಾಜ್ಯ ಸರ್ಕಾರವು ಯಾವುದೇ ಧರ್ಮದ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸವನ್ನು ಮಾಡಿಲ್ಲ.ಅಂತಹ ಆಲೋಚನೆಗಳು ಕೂಡ ಸರ್ಕಾರದ ಮುಂದೆ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ. ಕೆ. ಸುಧಾಕರ್ ಹೇಳಿದರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು ಸರ್ಕಾರವು ಪ್ರತಿಯೊಂದು ಧರ್ಮವನ್ನೂ ಸಮಾನವಾಗಿ ಕಾಣುತ್ತಿದೆ.ಯಾರೊಬ್ಬರು ಕೂಡ ಮೇಲೂ ಅಲ್ಲ,ಕೀಳೂ ಅಲ್ಲ ಅವರವರ ಧರ್ಮ ಮತ್ತು ಆಚರಣೆಗೆ ಕಾನೂನಿನಲ್ಲಿ ಅವಕಾಶವಿದೆ.ಭಾವೈಕ್ಯತೆಗೆ ಧಕ್ಕೆ ತರುವ ಕೆಲಸವನ್ನು ಮಾಡುವುದಿಲ್ಲ ಎಂದರು

ಹಿಜಾಬ್,ಹಲಾಲ್‌ನಂತಹ ವಿಷಯಗಳಲ್ಲಿ ಸರ್ಕಾರದ ಪಾತ್ರವಿಲ್ಲ.ಆದರೆ ಕೆಲವು ಮಾಧ್ಯಮಗಳು ಇದನ್ನು ಸರ್ಕಾರದ ಪ್ರಾಯೋಜಿತ ಎಂದು ಹೇಳುತ್ತಿವೆ. ಸಂಘಟನೆ ಗಳು ಹೋರಾಟ ನಡೆಸುವುದಕ್ಕೂ ನಮಗೂ ಸಂಬಂಧ ವಿಲ್ಲ.ನಾನೊಬ್ಬ ಸಚಿವನಾಗಿ ಸರ್ಕಾರದ ನಿಲುವು ಏನೆಂಬು ದನ್ನು ಹೇಳುತ್ತೇನೆ.ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ.ಇತ್ತೀಚಿನ ಘಟನೆ ಗಳಿಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಪುನರುಚ್ಚಿ ಸಿದರು.

ನಾನು ಸರ್ಕಾರದ ಪರವಾಗಿ ಇರುವ ಭಾವನೆಯನ್ನು ಹೇಳುತ್ತಿದ್ದೇನೆ.ಯಾರೋ ಹೇಳಿಕೆ ಕೊಡವುದಕ್ಕೆಲ್ಲಾ ಪ್ರತಿಕ್ರಿ ಯಿಸಲು ಸಾಧ್ಯವಿಲ್ಲ.ಈಗಾಗಲೇ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರು ಕೂಡ ಸರ್ಕಾರದ ನಿಲುವನ್ನು ಹೇಳಿದ್ದಾರೆ.ಇದು ಕೇವಲ ಒಂದು ಧರ್ಮದ ಸರ್ಕಾರವಲ್ಲ. ರಾಜ್ಯದಲ್ಲಿರುವ ಆರೂವರೆ ಕೋಟಿ ಜನರ ಧರ್ಮಗಳನ್ನೂ ಗೌರವದಿಂದ ಕಾಣುತ್ತದೆ.ಜಾತ್ಯತೀಯ ನಿಲುವಿನಲ್ಲಿ ಬದಲಾವಣೆ ಇಲ್ಲ.ಇದು ಸರ್ಕಾರದ ನಿಲುವು ಕೂಡ ಆಗಿದೆ ಹಲಾಲ್ ನಿಷೇಧದ ಹಿಂದೆ ಯಾರಿದ್ದಾರೋ ನನಗೂ ಗೊತ್ತಿಲ್ಲ ಆದರೆ ಖಂಡಿತವಾಗಿಯೂ ಇದರಲ್ಲಿ ಸರ್ಕಾರದ ಪಾತ್ರ ಎಳ್ಳಷ್ಟೂ ಇಲ್ಲ.ಇದರ ಹಿಂದೆ ಯಾರಿದ್ದಾರೆ ಎಂಬು ದರ ಬಗ್ಗೆ ತನಿಖೆ ನಡೆಯಬೇಕಾದ ಅವಶ್ಯಕತೆ ಇದೆ ಎಂದರು


ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಮುಗ್ಧ ಹುಡುಗಿ. ಆದರೆ ಜನರ ಮುಗ್ಧತೆಯನ್ನು ಅಸ್ತ್ರವನ್ನಾಗಿ ಅಲ್ ಖೈದಾ ಭಯೋತ್ಪಾದಕರು ಬಳಸುತ್ತಾರೆ.ಇಂತಹ ಭಯೋತ್ಪಾದಕ ಸಂಘಟನೆಗಳಿಂದ ಹೆಚ್ಚು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯಿಸಿದರು. ಭಯೋತ್ಪಾ ದಕರಿಂದ ಜನರಲ್ಲಿ ಭಯ ಹುಟ್ಟಿಸಲಷ್ಟೇ ಸಾಧ್ಯ. ದುರದೃ ಷ್ಟವಶಾತ್ ಮುಸ್ಕಾನ್ ಯಾಕೆ ಈ ರೀತಿ ಹೇಳಿಕೆ ಕೊಟ್ಟಳು ಎನ್ನುವುದು ಗೊತ್ತಿಲ್ಲ.ನಾವು, ಯಾವತ್ತು ಕಾನೂನು ಪಾಲನೆ ಮಾಡಬೇಕು.ನೆಲದ ಕಾನೂನನ್ನು ಗೌರಿಸಬೇಕಿದೆ ಎಂದು ಹೇಳಿದರು.