PST ಶಿಕ್ಷಕರ ಅನ್ಯಾಯದ ವಿರುದ್ದ ಸಿಡಿದೆದ್ದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ – ರಾಷ್ಟ್ರೀಯ ಅಧ್ಯಕ್ಷ ಡಾ.ಲತಾ.ಎಸ್.ಮುಳ್ಳೂರ ತಗೆದುಕೊಡರು ಗಟ್ಟಿ ನಿರ್ಧಾರ……

Suddi Sante Desk
PST ಶಿಕ್ಷಕರ ಅನ್ಯಾಯದ ವಿರುದ್ದ ಸಿಡಿದೆದ್ದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ – ರಾಷ್ಟ್ರೀಯ ಅಧ್ಯಕ್ಷ ಡಾ.ಲತಾ.ಎಸ್.ಮುಳ್ಳೂರ ತಗೆದುಕೊಡರು ಗಟ್ಟಿ ನಿರ್ಧಾರ……

ಧಾರವಾಡ

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ- ಧಾರವಾಡ ವತಿಯಿಂದ ರಾಜ್ಯದ ಪಿಎಸ್ ಟಿ ಶಿಕ್ಷಕರ ಸಮಸ್ಯೆ ಕುರಿತು ಗಟ್ಟಿ ಯಾದ ನಿರ್ಧಾರ ವನ್ನು ತಗೆದುಕೊಳ್ಳಲಾಗಿದೆ ಹೌದು ಅಂಚೆ ಪತ್ರ ಚಳುವಳಿ ಮತ್ತುಭಿ ತ್ತಿ ಪತ್ರ ಪ್ರದರ್ಶನದ ಚಳುವಳಿಗೆ ಸಿದ್ಧತೆಯನ್ನು ಮಾಡಿ ಕೊಳ್ಳಲಾಗಿದೆ.

ರಾಜ್ಯದ ಸೇವಾನಿರತ ಸರ್ಕಾರಿ ಪ್ರಾಥಮಿಕ ಪದವೀಧರ (ಪಿ‌ ಎಸ್ ಟಿ) ಶಿಕ್ಷಕ ಶಿಕ್ಷಕಿಯರಿ ಗಾಗಿರುವ ಅನ್ಯಾಯದ ಬಗ್ಗೆ ಸರ್ಕಾರದ ಗಮನ ಸೆಳೆಯಲು* ರಾಜ್ಯಾದ್ಯಂತ ಅಂಚೆ ಪತ್ರ ಚಳುವಳಿ ಹಾಗೂ ಭಿತ್ತಿ ಪತ್ರ ಪ್ರದರ್ಶನ ಚಳುವಳಿ ಹಮ್ಮಿ ಕೊಳ್ಳಲು ಸಿದ್ದತೆ ನಡೆಸಿದೆ.

ಶಾಲಾ ಶಿಕ್ಷಕರ ನೇಮಕಾತಿ ನಿಯಮಾವಳಿಗೆ ಸಂಬಂಧಿಸಿದಂತೆ 2017 ರಲ್ಲಿ ಜಾರಿಗೆ ಬಂದ ಹೊಸ ಸಿ ಅಂಡ್ ಆರ್ ನಿಯಮದಲ್ಲಿ (ಜಿ ಪಿ.ಟಿ 6-8ನೇ ತರಗತಿ ) ಪದವೀಧರ ಪ್ರಾಥಮಿಕ ಶಿಕ್ಷಕರು ಎಂಬ ಹೊಸ ವೃಂದವನ್ನು ಸೃಷ್ಟಿ ಮಾಡಿ ಹೊಸ ನೇಮಕಾತಿ ಮಾಡುತ್ತಿರುವುದರಿಂದ ಹಾಲಿ ಸರ್ಕಾರಿ ಶಾಲೆಗಳಲ್ಲಿ ಪದವಿಯನ್ನು ಹೊಂದಿ ರುವ ಸೇವಾನಿರತ ಶಿಕ್ಷಕರನ್ನು ಕಡೆಗಣಿಸಿರುವು ದಲ್ಲದೇ

1-8 ನೇ ತರಗತಿಗೆ ನೇಮಕಗೊಂಡು ಬೋಧಿ ಸುತಿದ್ದ ಅವರಿಗೆ 1-5 ನೇ ತರಗತಿಗೆ ಸೀಮಿತ ಮಾಡಿ ಹಿಂಬಡ್ತಿ ನೀಡಿದಂತಾಗಿದೆ.ಹೊಸ ವೃಂದವಾದ ಜಿಪಿಟಿ ಶಿಕ್ಷಕರಿಗೆ ಇರುವಂತೆಯೇ ಸರಿಸಮಾನ ವಿದ್ಯಾರ್ಹತೆ ಪಿ ಎಸ್ ಟಿ ಶಿಕ್ಷಕರೂ ಹೊಂದಿರುವುದಲ್ಲದೆ, ಬಹಳಷ್ಟು ಸೇವಾ‌ ಅನು ಭವ ಕೂಡ ಇದೆ. ಆದರೂ

ಅವರನ್ನು 1-5 ನೇ ತರಗತಿಗೆ ಸೀಮಿತ ಮಾಡಿ ಹಿಂಬಡ್ತಿ ಮಾಡಿರುವುದು ಬಹು ದೊಡ್ಡ ಅನ್ಯಾಯವಾಗಿದೆ.ಈ ಸಮಸ್ಯೆಯನ್ನು ಸರಿಪಡಿಸಿ ಅವರಿಗೆ ಸೂಕ್ತ ನ್ಯಾಯ ಒದಗಿಸುವಂತೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಯ ಸೇವಾನಿರತ ಮತ್ತು ಪದವಿಯನ್ನು ಪಡೆದಿರುವ ಪಿ.ಎಸ್.ಟಿ ಶಿಕ್ಷಕ ಶಿಕ್ಷಕಿಯರ ಪರವಾಗಿ ನಮ್ಮ ಸಂಘಟನೆಯ ಪ್ರತೀ

ಜಿಲ್ಲೆ ಪ್ರತೀ ತಾಲ್ಲೂಕು ಘಟಕಗಳಿಂದ
ರಾಜ್ಯದ ಮುಖ್ಯಮಂತ್ರಿಗಳಿಗೆ, ಶಾಲಾ ಶಿಕ್ಷಣ ಸಚಿವರಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಪತ್ರವನ್ನು ರಿಜಿಸ್ಟರ್
ಅಂಚೆ ಮೂಲಕ ರವಾನಿಸುವ ಮೂಲಕ ಹಾಗೂ ಅಯಾಯ ತಾಲ್ಲೂಕು ವಿಧಾನಸಭಾ ಕ್ಷೇತ್ರದ ಶಾಸಕರುಗಳಿಗೂ ಸಹಾ ಮನವಿ ಪತ್ರ ಸಲ್ಲಿಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಅಂಚೆ ಪತ್ರ ಚಳುವಳಿಯನ್ನು ರಾಜ್ಯಾದ್ಯಂತ ಹಮ್ಮಿ ಕೊಳ್ಳಲಾಗುವುದು

ಎಂದು ಡಾ.ಲತಾ.ಎಸ್. ಮುಳ್ಳೂರ ರಾಷ್ಟ್ರೀಯ ಅಧ್ಯಕ್ಷರು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ)ನವದೆಹಲಿ ಹಾಗೂ ಸಂಸ್ಥಾಪಕ ರಾಜ್ಯಾಧ್ಯಕ್ಷರು ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡರವರು ತಿಳಿಸಿದ್ದಾರೆ.

ಅಲ್ಲದೇ ಇದರ ಸಂಬಂಧ ಭಿತ್ತಿ ಪತ್ರ ಚಳುವಳಿ ಕೂಡ ಹಮ್ಮಿಕೊಳ್ಳಲಾಗುತ್ತಿದ್ದು, ತಮಗಾಗಿರುವ ಅನ್ಯಾಯವನ್ನು ಅರ್ಥೈಸುವಂತ ಒಂದು ಭಿತ್ತಿ ಪತ್ರ ಪ್ರದರ್ಶನ ಮಾಡುವ ಮೂಲಕ ಅದರ ಪೋಟೊ ತೆಗೆದು ಮಾನ್ಯ ಮುಖ್ಯಮಂತ್ರಿಗಳ , ಶಿಕ್ಷಣ ಸಚಿವರುಗಳ ಮತ್ತು ಸ್ಥಳೀಯ ಶಾಸಕ ರುಗಳ ಫೇಸ್ಬುಕ್,ಟ್ವಿಟರ್,ಎಕ್ಸ್ ,ಮೊದಲಾದ ಸಾಮಾಜಿಕ ಅಪ್ಲಿಕೇಶನ್ಗಳಲ್ಲಿ ಟ್ಯಾಗ್ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಯೋಚನೆ ಕೂಡ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.