ಹುಬ್ಬಳ್ಳಿ ಧಾರವಾಡ –
ಅವಳಿ ನಗರದ ಕೆರೆಗಳ ಸಂರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ – ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ,ವಿಜಯಕುಮಾರ್ ನೇತ್ರತ್ವದಲ್ಲಿ ಆರಂಭ ಗೊಂಡಿತು ಪ್ರಾಯೋಗಿಕ ಪರೀಕ್ಷೆ…..ಕಳೆ ಮುಕ್ತವಾಗಲಿವೆ ಹುಬ್ಬಳ್ಳಿ ಧಾರವಾಡದ 40 ಕೆರೆಗಳು ಹೌದು ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿನ ಕೆರೆಗಳ ಸಂರಕ್ಷಣೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿಯವರ , ಉಪ ಆಯುಕ್ತ ವಿಜಯಕುಮಾರ್ ಯವರು ಈ ಒಂದು ಮಹಾನ್ ಕಾರ್ಯಕ್ಕೆ ಮುಂದಾಗಿದ್ದಾರೆ.
ಇತ್ತೀಚಿಗೆ ಅವಳಿ ನಗರದಲ್ಲಿನ ಕೆರೆಗಳು ಕಳೆಯಿಂದ ತುಂಬಿ ಕೊಳ್ಳುತ್ತಾ ಹಾಳಾಗುತ್ತಿದ್ದು ಹೀಗಾಗಿ ಇದನ್ನು ಅರಿತ ಡಾ ರುದ್ರೇಶ ಘಾಳಿಯವರು ವಿಜಯಕುಮಾರ್ ಅವರೊಂದಿಗೆ ಒಳ್ಳೇಯ ತೀರ್ಮಾನವನ್ನು ಕೈಗೊಂಡು ಹುಬ್ಬಳ್ಳಿ-ಧಾರವಾಡದ ನೈಸರ್ಗಿಕ ಸೌಂದರ್ಯದ ಕೊಂಡಿಗಳಂತಿರುವ ಕೆರೆಗಳನ್ನು ಸಂರಕ್ಷಿಸಲು ಮುಂದಾಗಿದ್ದಾರೆ.ಕೆರೆಗಳನ್ನು ಸದಾ ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಧಾರವಾಡದ ಐತಿಹಾಸಿಕ ಕೆಲಗೇರಿ ಕೆರೆಯಲ್ಲಿನ ‘ಜಲ ಕಳೆ ತೆಗೆಯುವ ಯಂತ್ರ’ದ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು.ಅನಗತ್ಯ ಜಲ ಸಸ್ಯಗಳನ್ನು ಅತ್ಯಂತ ವೇಗವಾಗಿ ತೆರವುಗೊಳಿಸುವ ಸಾಮರ್ಥ್ಯವನ್ನು ಈ ಯಂತ್ರ ಹೊಂದಿದ್ದು, ಅವಳಿನಗರದ ಒಟ್ಟು 40 ಕೆರೆಗಳನ್ನು ಕಳೆಮುಕ್ತಗೊಳಿಸಿ ನಿರ್ಮಲವಾಗಿರಿಸಲು ಪಾಲಿಕೆಯು ಈ ಯಂತ್ರವನ್ನು ಖರೀದಿಸಲು ನಿರ್ಧರಿಸಿದೆ.
ಈ ಮಹತ್ವದ ಪ್ರಾಯೋಗಿಕ ಪರೀಕ್ಷೆ ಆರಂಭಗೊಂಡಿದೆ. ಇದೆ ವೇಳೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ ಘಾಳಿ ಹಾಗೂ ಉಪ ಆಯುಕ್ತ ರಾದ (ಅಭಿವೃದ್ಧಿ) ವಿಜಯ್ ಕುಮಾರ್ ಆರ್ ಎಕ್ಸಿಕ್ಯುಟಿವ್ ಎಂಜಿನಿಯರ್ ರಿಯಾಜ್ ಹಾಗೂ ಕಿರಿಯ ಎಂಜಿನಿಯರ್ ಶ್ರೀಮತಿ ಉಷಾ ಸೇರಿದಂತೆ ಹಲವರು ಈ ಒಂದು ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪಾಲಿಕೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಾ ಚರಣೆಯು ಮುಂಬರುವ ದಿನಗಳಲ್ಲಿ ನಗರದ ಎಲ್ಲಾ ಕೆರೆಗಳಿಗೆ ಕಾಯಕಲ್ಪ ನೀಡುವ ಭರವಸೆ ಮೂಡಿಸಿದೆ. ಪರಿಸರ ಸ್ನೇಹಿ ತಂತ್ರಜ್ಞಾನದ ಬಳಕೆಯಿಂದ ಕೆರೆಗಳ ಆವರಣವು ಸಾರ್ವಜ ನಿಕರಿಗೆ ಆಕರ್ಷಕ ಪ್ರವಾಸಿ ತಾಣವಾಗಿ ಮಾರ್ಪಾಡಾಗಲಿವೆ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ



