ಧಾರವಾಡ –
ಜಿಲ್ಲಾ ಗೃಹರಕ್ಷಕ ದಳ ಡಾ. ಸತೀಶ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಪದಕ ಗೌರವ ಲಭಿಸಿದೆ ಹೌದು ಜಿಲ್ಲೆಯ ಗೃಹರಕ್ಷಕ ದಳದ ಸತೀಶ ಇರಕಲ್ ಅವರು ಧಾರವಾಡ ಜಿಲ್ಲೆಯ ಗೃಹರಕ್ಷಕ ದಳದಲ್ಲಿ ಸಲ್ಲಿಸಿದ ಉತ್ತಮ ಸೇವೆಗೆ 2024 ನೇ ಸಾಲಿನ ರಾಷ್ಟ್ರಪತಿಗಳ ಶ್ಲಾಘನೀಯ ಪದಕ ಲಭಿಸಿದೆ.
ಧಾರವಾಡ ಜಿಲ್ಲೆಗೆ ಮತ್ತು ಗೃಹರಕ್ಷಕ ದಳದ ಇಲಾಖೆಗೆ ಕೀರ್ತಿಯನ್ನು ತಂದಿದ್ದಾರೆ. ಆದ್ದರಿಂದ ಧಾರವಾಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ರಾದ ಸುನೀಲ್ ಸರೂರ ಮತ್ತು ಕಛೇರಿ ಸಿಬ್ಬಂದಿ ವರ್ಗದವರು ಹಾಗೂ ಧಾರವಾಡ ಘಟಕದ ಘಟಕಾಧಿಕಾರಿಗಳು,ಗೃಹರಕ್ಷಕ ಅಧಿಕಾರಿಗಳು, ಗೃಹರಕ್ಷಕರು ಹಾಗೂ ಗೃಹರಕ್ಷಕಿಯರು ಅಭಿನಂದಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..