ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಡಾ.ಸುರೇಶ್ ಶರ್ಮಾ ನಾಮಪತ್ರ ಸಲ್ಲಿಕೆ – ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಕೆ ಶಕ್ತಿ ಪ್ರದರ್ಶನ…..

Suddi Sante Desk
ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಡಾ.ಸುರೇಶ್ ಶರ್ಮಾ ನಾಮಪತ್ರ ಸಲ್ಲಿಕೆ – ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಕೆ ಶಕ್ತಿ ಪ್ರದರ್ಶನ…..

ಕಲಬುರಗಿ

ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಡಾ.ಸುರೇಶ್ ಶರ್ಮಾ ನಾಮಪತ್ರ ಸಲ್ಲಿಸಿದರು ಹೌದು
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರರಾದ ಡಾ.ಸುರೇಶ್ ಶರ್ಮಾ ಅವರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.

ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಬೆಂಬಲಿಗರೊಂದಿಗೆ ಕರ್ನಾಟಕ ಸರಕಾರಿ ಭವನಕ್ಕೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದರು ಇದೆ ವೇಳೆ ಮಾತನಾಡಿದ ಅವರು ಸರಕಾರಿ ನೌಕರರ ಒತ್ತಾಯದ ಮೇರೆಗೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಜಿಲ್ಲೆಯ ಸರಕಾರಿ ನೌಕರರು ನನ್ನನ್ನು ಆಯ್ಕೆ ಮಾಡುತ್ತಾರೆ ಎಂಬ ಭರವಸೆ ಇದೆ ಎಂದು ಅಭಿಲಾಷೆಯನ್ನು ವ್ಯಕ್ತಪಡಿಸಿದರು.

ಇನ್ನು ಈ ವೇಳೆ ಅನೇಕ ಸರಕಾರಿ ನೌಕರರ ಸಂಘಟ ನೆಯ ಮುಖಂಡರು ಭಾಗವಹಿಸಿ ಸುರೇಶ ಶರ್ಮಾ ಅವರ ಜನಪರ ಕಾಳಜಿ ಹಾಗೂ ಸೇವೆಗಳನ್ನ ಕೊಂಡಾಡಿದರು.ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ರಾಜು ಲೆಂಗಟಿ, ನಾಗಪ್ಪ ಹೊನ್ನಳ್ಳಿ, ಮಲ್ಲಯ್ಯ ಗುತ್ತೇದಾರ್, ಶಿವಪುತ್ರ ಕಾರಣಿಕ್, ಮಹೇಶ್ ಬಸರಕೋಡ್, ಸುನಿಲ್ ಕುಲಕರ್ಣಿ, ವಿಜಯಕುಮಾರ್ ನಾಗೂರ್, ಶಶಿಕಾಂತ್, ವೆಸ್ಲಿ ವೇದರಾಜ್ ಸೇರಿದಂತೆ ಇತರರು ಇದ್ದರು.

ಸುದ್ದಿ ಸಂತೆ ನ್ಯೂಸ್ ಕಲಬುರಗಿ….

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.