ಬೆಂಗಳೂರು –
ಹೌದು ಕಡೆಗೆ ವಿದ್ಯಾರ್ಥಿಗಳ ಸಮವಸ್ತ್ರ ವಿಚಾರ ನ್ಯಾಯಾ ಲಯದ ಕಟಕಟೆಯಲ್ಲಿ ಇರುವಾಗಲೇ ಮತ್ತೊಂದು ವಿಚಾರ ದೊಡ್ಡ ಚರ್ಚೆಗೆ ವೇದಿಕೆ ಮಾಡಿದೆ.ಶಾಲೆಯಲ್ಲಿ ಹಿಜಾಬ್ ಧರಿಸಬಹುದೇ,ಧರಿಸಬಾರದೇ ಎಂಬ ಬಗ್ಗೆ ವಾದ ವಿವಾದ ನಡೆಯುತ್ತಿದೆ.ಈ ನಡುವೆ ರಾಜ್ಯದ ಕೆಲವು ಖಾಸಗಿ ಅನುದಾನರಹಿತ ಶಾಲೆಗಳು ಪೋಷಕರಿಗೆ ಡ್ರೆಸ್ ಕೋಡ್ ಸಿದ್ಧ ಮಾಡಿವೆ.

ಹಲವಾರು ಪಾಲಕರು ತಮ್ಮ ಮಕ್ಕಳನ್ನು ಶಾಲೆಯಲ್ಲಿ ಬಿಡುವಾಗ ಅಥವಾ ಶಾಲೆಯಿಂದ ಕರೆದುಕೊಂಡು ಹೋಗುವಾಗ ಅನೌಪಚಾರಿಕ ಉಡುಪುಗಳಲ್ಲಿ ಬರುವು ದನ್ನು ಗಮನಿಸಿರುವ ಖಾಸಗಿ ಶಾಲೆಗಳು ಈ ತೀರ್ಮಾನಕ್ಕೆ ಬಂದಿದೆ.ಕೆಲವು ಖಾಸಗಿ ಅನುದಾನರಹಿತ ಶಾಲೆಗಳು ಪೋಷಕರಲ್ಲಿಯೇ ಶಿಸ್ತು ತರಲು ಹೊರಟಿವೆ.ಖಾಸಗಿ ಶಾಲೆಗಳು ಈ ರೀತಿಯ ಸುತ್ತೋಲೆ ಹೊರಡಿಸಿವೆ ಎನ್ನು ವುದು ಗೊತ್ತಾಗಿದೆ.ಮಕ್ಕಳನ್ನು ಶಾಲೆಯಲ್ಲಿ ಬಿಡುವಾಗ ಅಥವಾ ಶಾಲೆಯಿಂದ ಕರೆದುಕೊಂಡು ಹೋಗುವಾಗ ಪೋಷಕರು ಅಥವಾ ಪಾಲಕರು ಬರ್ಮುಡಾ,ಶಾರ್ಟ್ಸ್, ಸ್ಪೋರ್ಟ್ಸ್ ವೇರ್,ಹೌಸ್ ವೇರ್,ಸ್ಲೀವ್‌ಲೆಸ್ ಮತ್ತು ಟ್ರ್ಯಾಕ್ ಪ್ಯಾಂಟ್ ಇತ್ಯಾದಿಗಳನ್ನು ಧರಿಸುವುದನ್ನು ನಿರ್ಬಂಧಿಸಿ ಸುತ್ತೋಲೆ ಹೊರಡಿಸಲಾಗಿದೆ.ಶಾಲೆಗಳು ಕಳುಹಿಸಿರುವ ಸುತ್ತೋಲೆಯಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ಮಕ್ಕಳನ್ನು ಶಾಲೆಯಲ್ಲಿ ಬಿಡುವಾಗ ಅಥವಾ ಶಾಲೆಯಿಂದ ಕರೆದುಕೊಂಡು ಹೋಗುವಾಗ ಪೋಷಕರು ಅಥವಾ ಪಾಲಕರು ಬರ್ಮುಡಾ, ಶಾರ್ಟ್ಸ್,ಸ್ಪೋರ್ಟ್ಸ್ ವೇರ್,ಹೌಸ್ ವೇರ್,ಸ್ಲೀವ್‌ಲೆಸ್ ಮತ್ತು ಟ್ರ್ಯಾಕ್ ಪ್ಯಾಂಟ್ ಇತ್ಯಾದಿಗಳನ್ನು ಧರಿಸುವುದನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಕೆಲವು ಶಾಲೆಗಳು ಸುತ್ತೋಲೆಯನ್ನು ಹೊರಡಿಸಿದ್ದು ರಾಜ್ಯ ಸರ್ಕಾರಕ್ಕೆ ಅನುಮತಿ ಗಾಗಿ ಕಾಯುತ್ತಿವೆ.