ಬಳ್ಳಾರಿ –
ಅರಣ್ಯ ಸಚಿವ ಆನಂದಸಿಂಗ್ ಹಾಗೂ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಐಷಾರಾಮಿ ಮನೆಗಳನ್ನ ನಿರ್ಮಿಸಿಕೊಂಡಿರೋದಕ್ಕೆ ಸಮಾಜ ಪರಿವರ್ತನಾ ಸಮುದಾಯದ ಹಿರಿಯ ಮುಖಂಡ ಎಸ್.ಆರ್.ಹಿರೇಮಠ ಗರಂ ಆಗಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಮಾತನಾಡಿ, ಇವರೇನು? ಬೆವರು ಸುರಿಸಿ ದುಡಿದು ಇಂಥಹ ಐಷಾರಾಮಿ ಮನೆಗಳನ್ನ ಕಟ್ಟಿದ್ದಾರೋ ಅಥವಾ ಪಿತ್ರಾರ್ಜಿತ ಆಸ್ತಿಯಿಂದ ಕೋಟ್ಯಾಂತರ ರೂ.ಗಳ ಬೆಲೆಬಾಳುವ ಐಷಾರಾಮಿ ಮನೆಗಳನ್ನ ಹೊಂದಿದ್ದಾರೆ ಎಂಬೋದನ್ನ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂದು ಒತ್ತಾಯ ಮಾಡಿದ್ರು.

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಈ ಇಬ್ಬರು ಸಚಿವರು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರೋದು ಈಗ ಜಗಜ್ಜಾಹೀರಾಗಿದೆ. ಈ ಕೂಡಲೇ ಬಿಎಸ್ ವೈ ಇವರಿಬ್ಬರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಹಿರೇಮಠ ಆಗ್ರಹಿಸಿದರು. ಬಳ್ಳಾರಿಯಲ್ಲಿ ಮತ್ತೆ ಎನ್ ಎಂಡಿಸಿ ಕಂಪನಿಯಿಂದ ಗಣಿಗಾರಿಕೆ ಪುನರಾರಂಭವಾಗಿದೆ. ಹೊಸ ಒಪ್ಪಂದ ದಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಲಿದೆ. ಶೇಕಡ 80 ರಷ್ಟು ಪ್ರೀಮಿಯಂ ಹಣ ಖೋತಾ ಆಗಿದೆ. ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿಕೊಂಡು ಪರವಾನಗಿ ಕೊಡೋ ಅಗತ್ಯ ಏನಿತ್ತು? ಎಂದು ಎಸ್.ಆರ್.ಹಿರೇಮಠ ಅವರು ರಾಜ್ಯ ಸರ್ಕಾರವನ್ನ ಪ್ರಶ್ನಿಸಿದ್ದಾರೆ. ಭಾರತ ಬಂದ್ ಗೆ ಸಂಪೂರ್ಣ ಬೆಂಬಲ ಇದೆ: ಡಿಸೆಂಬರ್ 8 ರಂದು ನಡೆಯಲಿರುವ ಭಾರತ ಬಂದ್ ಗೆ ಸಮಾಜ ಪರಿವರ್ತನಾ ಸಮುದಾಯದ ಸಂಪೂರ್ಣ ಬೆಂಬಲ ಇದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯಿದೆ ವಿರುದ್ಧ ದೆಹಲಿ ಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು. ಇನ್ನೂ ಕೇಂದ್ರ ಸರ್ಕಾರದ ನಡೆಯನ್ನು ಇಡೀ ದೇಶವೇ ನೋಡುತ್ತಿದೆ. ಭಾರತ ಬಂದ್ ಅನ್ನ ನಾವು ಸಮಗ್ರವಾಗಿ ಬೆಂಬಲಿಸುತ್ತೇವೆ. ದೆಹಲಿ ಯಲ್ಲಿ ಕೇಂದ್ರ ಸರ್ಕಾರಕ್ಕೆ ನಮ್ಮ ರೈತರು ಸಮರ್ಥ ಉತ್ತರ ಕೊಟ್ಟಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಐತಿಹಾಸಿಕವಾಗಿದೆ .ರೈತರ ಹೋರಾಟವನ್ನ ಅವಮಾನಿಸುವುದು ಸರಿಯಲ್ಲ. ಕೇಂದ್ರ ಸರ್ಕಾರ ರೈತ ಮತ್ತು ಕಾರ್ಮಿಕ ವಿರೋಧಿಯಾಗಿದೆ. ಅವತ್ತು ಇಂದಿರಾ ಗಾಂಧಿಯವರಿಗೆ ಕಲಿಸಿದ ಪಾಠವನ್ನೇ ಜನ ನಿಮಗೂ ಪಾಠ ಕಲಿಸುತ್ತಾರೆ.ಈ ದೇಶದ ನಿಜವಾದ ಮಾಲೀಕರು ಈಗ ಎಚ್ಚೆತ್ತಿದ್ದಾರೆ.ಇದೀಗ ಈ ದೇಶದ ಆತ್ಮ ಎಚ್ಚೆತ್ತುಕೊಂಡಿದೆ. ರೈತರು ಜಾಗೃತಿ ಗಂಟೆ ಬಾರಿಸಿದ್ದಾರೆ. ಈಗಲಾದರು ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಸಲಹೆ ಹಿರೇಮಠ ಸಲಹೆ ನೀಡಿದ್ರು.