ಮೈಸೂರು –
ಕುಡಿದ ಅಮಲಿನಲ್ಲಿ ಮಧ್ಯ ವ್ಯಸನಿಯೊಬ್ಬ ತನ್ನ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಹೌದು ಅತಿಯಾಗಿ ಮದ್ಯ ವ್ಯಸನ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಂದ ಈ ಒಂದು ಧಾರುಣ ಘಟನೆ ನಡೆದಿದೆ.ಕುಡಿದ ಅಮಲಿನಲ್ಲಿ ತನ್ನ ಕುಟುಂಬವನ್ನೇ ಈ ಮಹಾಶಯ ಸರ್ವನಾಶ ಮಾಡಿದ್ದಾನೆ.

ಮನೆಯಲ್ಲಿ ಮಲಗಿದ್ದ ಅತ್ತೆ, ಹೆಂಡತಿ,ಇಬ್ಬರು ಮಕ್ಕ ಳನ್ನು ಕೊಲೆಗೈದಿದ್ದಾನೆ ಈ ಪಾಪಿ.ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಸಾಯಿಸಿದ್ದಾನೆ ಎಂಬ ಶಂಕೆಯ ನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮಣಿಕಂಠಸ್ವಾ ಮಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದಾರೆ ಆರೋ ಪಿ

ಅತ್ತೆ ಕೆಂಪಾಜಮ್ಮ(60), ಗರ್ಭಿಣಿ ಪತ್ನಿ ಗಂಗಾ(28), ಇಬ್ಬರು ಗಂಡು ಮಕ್ಕಳಾದ ರೋಹಿತ್(4) ಮತ್ತು ಸಾಮ್ರಾಟ್(2) ಮೃತ ದುರ್ದೈವಿಗಳಾಗಿದ್ದಾರೆ.ಇನ್ನೂ ಚಾಮೇಗೌಡನಹುಂಡಿ ಗ್ರಾಮದಲ್ಲಿ ಈ ಒಂದು ಘಟ ನೆ ನಡೆದಿದೆ.ಇನ್ನೂ ಸುದ್ದಿ ತಿಳಿದ ಸರಗೂರು ಪೊಲೀ ಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದರು.

ಘಟನಾ ಸ್ಥಳಕ್ಕೆ ಸರಗೂರು ಪಿಎಸ್ಐ ದಿವ್ಯಾ ಭೇಟಿ ನೀಡಿ ಈಕುರಿತಂತೆ ಪ್ರಕರಣವನ್ನು ದಾಖಲು ಮಾಡಿ ಕೊಂಡು ಆರೋಪಿಯ ಬಂಧನಕ್ಕೆ ಜಾಲವನ್ನು ಬೀಸಿದ್ದಾರೆ.