ಕೊಪ್ಪಳ –
ಶಾಲೆಯಲ್ಲಿ ಮಕ್ಕಳಿಗೆ ನೀಡುವ ರೇಷನ್ ನೀಡುವ ವಿಷಯದಲ್ಲಿ ಪಾಲಕರೊಬ್ಬರು ಕುಡಿದು ಬಂದು ಶಿಕ್ಷಕರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಗಲಾಟೆ ಮಾಡಿದ ಘಟನೆ ಕೊಪ್ಪಳ ದಲ್ಲಿ ನಡೆದಿದೆ.
ಹೌದು ಪಾಲಕನೊಬ್ಬ ಶಿಕ್ಷಕರಿಗೆ ಅವಾಚ್ಯ ಪದಗ ಳಿಂದ ನಿಂದಿಸಿ ಗಲಾಟೆ ಮಾಡಿದ ಘಟನೆ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಜರುಗಿದೆ.ಕೊಪ್ಪಳದ ಗಡಿ ಯಾರ ಕಂಬ ರಸ್ತೆಯ ಕೇಂದ್ರ ಮಾದರಿ ಪ್ರಾಥಮಿಕ ಶಾಲೆ ಮುಂದೆ ಈ ಒಂದು ಘಟನೆ ನಡೆದಿದೆ.
ಕುಡುಕ ಪಾಲಕನೊಬ್ಬ ತನ್ನ ಮಗನ ಹಿಂದೆ ಬಂದಿ ದ್ದಾನೆ.ಕುಡಿದ ಅಮಲಿನಲ್ಲಿ ಶಿಕ್ಷಕರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾನೆ.ಇದರಿಂದ ಶಿಕ್ಷಕರ ಹಾಗೂ ಕುಡುಕನ ಮಧ್ಯ ಗಲಾಟೆಯಾಗಿದೆ.
ಶಾಲೆಯಲ್ಲಿ ಹೀಗೆ ಮಾಡುತ್ತಿದ್ದಂತೆ ವಿಚಾರ ತಿಳಿದ ಸಾರ್ವಜನಿಕರು ಯುವಕರು ಆಗಮಿಸಿ ಬುದ್ಧಿ ಹೇಳಿ ದರು.ಯಾವುದಕ್ಕೂ ತಲೆಯನ್ನು ಕೆಡಿಸಿಕೊಳ್ಳದ ಮಹಾಶಯ ದೊಡ್ಡ ರಂಪಾಟ ಮಾಡಿದನು
ಅದರಲ್ಲೂ ಈ ಒಂದು ವಿಚಾರ ತಿಳಿದ ಕುಡುಕನ ಹೆಂಡತಿ ಮಗ ಕೂಡಾ ಆಗಮಿಸಿ ಒಂದೆರೆಡು ಕೆನ್ನೆಗೆ ಭಾರಿಸಿರು.
ಕೊನಗೆ ಕುಡುಕ ಹೆಂಡತಿ ಮಗ ಕೆನ್ನೆಗೆ ಬಾರಿಸಿದ್ರು ಅಮಲಿನಲ್ಲಿದ್ದ ಶಿಕ್ಷಕರ ಮೊಬೈಲ್ ಕಸಿದುಕೊಳ್ಳಲು ಮುಂದಾಗಿದ್ದಾನೆ.
ಕೆಳಗಡೆ ಬಿದ್ರು ಮೈಮೇಲೆ ಪ್ರಜ್ಞೆಯಿಲ್ಲದೆ ಶಿಕ್ಷಕ ರೊಂದಿಗೆ ಗಲಾಟೆ ಮಾಡಿಕೊಂಡಿದ್ದಾನೆ.ನಂತರ ಪರಿಸ್ಥಿತಿ ಯನ್ನು ತಿಳಿಗೊಳಿಸಿ ಕಳಿಸಲಾಯಿತು