ಮಂಗಳೂರು –
ಕೋವಿಡ್ ಅಬ್ಬರ ಮುಗಿದು ಇನ್ನೇನು ರಾಜ್ಯಾದ್ಯಂತ ಶಾಲೆಗಳನ್ನು ಆರಂಭಿಸಲು ಎಲ್ಲಾ ಸಿದ್ದತೆ ಮಾಡಲಾ ಗುತ್ತಿದೆ.ಅತ್ತ ಶಾಲೆಗಳ ಆರಂಭಕ್ಕೆ ಸಿದ್ಧತೆ ನಡೆಯು ತ್ತಿದ್ದರೆ ಇತ್ತ ಇನ್ನೂ ಪಠ್ಯಪುಸ್ತಕಗಳು ಮಾತ್ರ ಮುದ್ರ ಣಕ್ಕೇ ಹೋಗಿಲ್ಲವಂತೆ.ಹೌದು ಈವರೆಗೆ ಇನ್ನೂ ಮುದ್ರಣ ಕ್ಕೇ ಕಳಿಸಿಲ್ಲವಂತೆ ಹೀಗಾಗಿ ಈ ಬಾರಿ ಪುಸ್ತಕಗಳ ಸರಬರಾಜು ವಿಳಂಬ ಬಹುತೇಕ ಖಚಿತ ವಾದಂತೆ ಕಂಡು ಬರುತ್ತಿದೆ

ಹೌದು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಒಟ್ಟು 77,738 ಶಾಲೆಗಳ 54,17,409 ಬಾಲಕರು ಮತ್ತು 50,39,241 ಬಾಲಕಿಯರು ಸೇರಿ 1.04 ಕೋಟಿ ಮಕ್ಕಳಿಗೆ ಪಠ್ಯಪುಸ್ತಕ ಕೈ ಸೇರಬೇಕಿದೆ ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಹುತೇಕ ಮುದ್ರಣಾಲಯ ಗಳಿಗೆ ಬೀಗ ಬಿದ್ದಿರುವುದೇ ವಿಳಂಬವಾಗಲು ಕಾರಣ ಎನ್ನುವುದು ಶಿಕ್ಷಣ ಇಲಾಖೆಯ ಮಾತಾಗಿದ್ದು ಹೀಗಾಗಿ ಮುದ್ರಣ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ

ಇನ್ನೂ ಈ ಬಾರಿ ಪಠ್ಯಪುಸ್ತಕ ವಿಳಂಬವಾಗುವ ಬಗ್ಗೆ ಮೊದಲೇ ಮಾಹಿತಿ ತಿಳಿದ ಶಿಕ್ಷಣ ಇಲಾಖೆ ಕಳೆದ ಬಾರಿಯಂತೆ ಈ ಹಿಂದಿನ ಸಾಲಿನ ಪಠ್ಯಪುಸ್ತಕಗಳ ಬಳಕೆಗೆ ನಿರ್ಧರಿಸಿದೆಯಂತೆ.ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾದ ಪಠ್ಯಪುಸ್ತಕ ಗಳಲ್ಲಿ ಸುಸ್ಥಿತಿಯಲ್ಲಿರುವ ಪುಸ್ತಕಗಳನ್ನು ಆಯಾ ಶಾಲೆಗಳ ಬುಕ್ ಬ್ಯಾಂಕ್ ನಲ್ಲಿ ಸಂಗ್ರಹಿಸುವಂತೆ ಮತ್ತು ಅಗತ್ಯನುಸಾರ ಬಳಸುವಂತೆ ಬಿಇಒ ಗಳಿಗೆ ಸೂಚಿ ಸಿದೆ.

ಆದರೆ ಸದ್ಯ ಆನ್‌ಲೈನ್‌ನಲ್ಲಿ ತರಗತಿ ನಡೆಯುವುದ ರಿಂದ ಪಠ್ಯಪುಸ್ತಕ ಸಕಾಲಕ್ಕೆ ದೊರೆಯದಿದ್ದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗಲಿದೆ ಎಂಬುದು ಪೋಷಕರ ಆತಂಕವಾಗಿದೆ. ಸಾಮಾನ್ಯ ವಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಪಠ್ಯಪುಸ್ತಕಗಳಿಗೆ ಸಂಬಂಧಿಸಿದ ಕಾರ್ಯ ವಿಧಾನ ಗಳನ್ನು ಹಿಂದಿನ ಆರ್ಥಿಕ ವರ್ಷದಿಂದಲೇ ಪ್ರಾರಂಭಿ ಸಲಾಗುತ್ತದೆ.ಆದರೆ ಮೊದಲಿಗೆ 1ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬೇಕಾ ಗುವ ಪಠ್ಯಪುಸ್ತಕಗಳ ಅಂಕಿ-ಅಂಶಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆಯಲಾಗುತ್ತದೆ. ಅದರಂ ತೆ ಮುದ್ರಿಸಿ ಬಿಇಒ ಕಚೇರಿಗೆ ತಲುಪಿಸಲಾಗುತ್ತದೆ. ಈ ಮಧ್ಯೆ ಕೇಂದ್ರ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಜೂ. 15 ರಿಂದ ಆರಂಭವಾಗಿ ದ್ದು ಕೆಲವರಿಗೆ ಪಠ್ಯಪುಸ್ತಕ ದೊರೆತಿದೆ. ಉಳಿದವರಿ ಗೆ ವಾರದೊಳಗೆ ದೊರೆಯುವ ನಿರೀಕ್ಷೆಯಿದೆ. ಒಟ್ಟಾ ರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪುಸ್ತಕಗಳ ಮುದ್ರಣ ಸರಬರಾಜು ಕೊಂಚ ವಿಳಂಬವಾಗಿರುವುದು ಹೌದು ಇದೀಗ ಟೆಂಡರ್ ಅಂತಿಮಗೊಳಿಸಿದ್ದು ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡೊದು ಇಲಾಖೆಯ ದೊಡ್ಡ ಜವಾಬ್ದಾರಿಯ ಕೆಲಸ