ದುರ್ಗಾ ಕಾಲೋನಿ ಸರಕಾರಿ ಶಾಲಾ ಕೊಠಡಿ ಕಟ್ಟಡ ಕಾಮಗಾರಿಗೆ ಚಾಲನೆ – ಶ್ರೀಮತಿ ಶೀವಲೀಲಾ ಕುಲಕರ್ಣಿ ಅವರಿಗೆ ಸಾಥ್ ನೀಡಿದ ಶಾಲೆಯ ಶಿಕ್ಷಕ ಬಳಗ ಇಲಾಖೆಯ ಅಧಿಕಾರಿಗಳು…..

Suddi Sante Desk
ದುರ್ಗಾ ಕಾಲೋನಿ ಸರಕಾರಿ ಶಾಲಾ ಕೊಠಡಿ ಕಟ್ಟಡ ಕಾಮಗಾರಿಗೆ ಚಾಲನೆ – ಶ್ರೀಮತಿ ಶೀವಲೀಲಾ ಕುಲಕರ್ಣಿ ಅವರಿಗೆ ಸಾಥ್ ನೀಡಿದ ಶಾಲೆಯ ಶಿಕ್ಷಕ ಬಳಗ ಇಲಾಖೆಯ ಅಧಿಕಾರಿಗಳು…..

ಧಾರವಾಡ -ದು

ರ್ಗಾ ಕಾಲೋನಿ ಸರಕಾರಿ ಶಾಲಾ ಕೊಠಡಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ *ಶ್ರೀಮತಿ ಶೀವಲೀಲಾ ಕುಲಕರ್ಣಿ ಹೌದು ಶಾಸಕರಾದ ವಿನಯ್ ಕುಲಕರ್ಣಿ ಅವರ ಪತ್ನಿ  ಶ್ರೀಮತಿ ಶಿವಲೀಲಾ ಕುಲಕರ್ಣಿ ಅವರು ಧಾರವಾಡ ಶಹರದ ಹೆಬ್ಬಳ್ಳಿ ರಸ್ತೆಯಲ್ಲಿರುವ ದುರ್ಗಾ ಕಾಲೋನಿ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಯ ಎರಡು ಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಅವರು ಸಮು ದಾಯದ ಸಹಭಾಗಿತ್ವ  ಇಲಾಖೆ ಅಧಿಕಾರಿ ಗಳ ಉತ್ತಮ ಮಾರ್ಗದರ್ಶನ,ಶಿಕ್ಷಕರ ಕ್ರಿಯಾ ಶೀಲತೆಯಿಂದ ಈ ಶಾಲೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ.ಚಿಕ್ಕ ಶಾಲೆಯಾದರೂ ಇಲ್ಲಿಯ ಮಕ್ಕಳ ಶೈಕ್ಷಣಿಕ ಗುಣಮಟ್ಟ ಮತ್ತು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಉತ್ತಮ ವಾಗಿರುವುದು ಸಂತೋಷ.

ಈ ಶಾಲೆಗೆ ಬೇಕಾಗಿರುವ ಭೌತಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ನಾವೆಲ್ಲ ಸದಾ ತಮ್ಮೊಂದಿಗೆ ಇರುತ್ತೇವೆ ಎಂದರು ಶ್ರೀಮತಿ ಶಿವಲೀಲಾ ಕುಲಕರ್ಣಿ* ಯವರು ಕಟ್ಟಡ ಕಾಮಗಾರಿಗೆ ಚಾಲನೆ ನೀಡುತ್ತಾ ಮಾತನಾಡಿದರು

ಮಕ್ಕಳ ಸಂಖ್ಯೆ ಇನ್ನೂ ಹೆಚ್ಚು ಆದಂತೆ ಸರ್ಕಾರಿ ಸೌಲಭ್ಯಗಳು ಇನ್ನೂ ಹೆಚ್ಚಿಗೆ ಬರಲು ಸಾಧ್ಯ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ತಾವೆಲ್ಲ ಮಾಡುತ್ತಿದ್ದೀರಿ ಈ ಶಾಲೆಯನ್ನು ಇನ್ನೂ ಉನ್ನತ ಮಟ್ಟಕ್ಕೆ ನಾವು ನೀವೆಲ್ಲ ಕೊಂಡೊಯ್ಯುವ ಪ್ರಯತ್ನ ಮಾಡೋಣ ಎಂದರು ಇನ್ನೂ ಪ್ರಾಸ್ತಾವಿಕ ವಾಗಿ ಕ್ಷೇತ್ರಸಮನ್ವಯಾಧಿಕಾರಿ ಗಳಾದ ಮಂಜುನಾಥ ಅಡಿವೇರ ಮಾತನಾಡಿ ದರು.

ಕಾರ್ಯಕ್ರಮದಲ್ಲಿ ಏಳನೇ ವಾರ್ಡಿನ ಮಹಾನ ಗರ ಪಾಲಿಕೆ ಸದಸ್ಯರಾದ ಶ್ರೀಮತಿ ದೀಪಾ ಸಂತೋಷ್ ನಿರಲಕಟ್ಟಿ CRP ಗಳಾದ ಶ್ರೀಮತಿ ರೇಣುಕಾ ಜಗ್ಗಲ್* ,ಶಾಲಾ SDMC ಅಧ್ಯಕ್ಷರಾದ ಮಲ್ಲಿಕ್ ಅಹ್ಮದ್ ಬಿಸ್ತಿ, ಕಾಲೋನಿಯ ಹಿರಿಯ ರಾದ ರಾಮಚಂದ್ರ ಸಾಳುಂಕೆ ,ಮಕ್ಬುಲ್ ಮುಸ್ತಫಾ

ತಿಪ್ಪಣ್ಣ ಕಿಟ್ಲಿ, ಲವಾ ಬೆಳವಡಿ ,ಕಾಂತು ತಾಯನ್ನ ವರ, ಪ್ರಕಾಶ ಪಟ್ಟಣಶೆಟ್ಟಿ, ಶ್ರೀಶೈಲ್ ಭಾವಿಕಟ್ಟಿ, ಅಲ್ತಾಫ್ ಮಕಾಂದಾರ, ಅಶೋಕ ಗರಗದ, ಗದಿಗೆಪ್ಪ ಈಟಿ ,ಧಾರವಾಡ ಫಾರ್ಮ್ ಶಾಲೆಯ ಮುಖ್ಯ ಗುರು ಮೌನೇಶ್ವರ ಕಮ್ಮಾರ, ರೇಣಮ್ಮ ಗಾಳಿ, ಸುಮಿತ್ರವ್ವ ಬೆಳವಡಿ, ಬಸಿರಾ ಗೋಕಾಕ್ ,ಶಮಶಾದ್ ಸೇರವಾಲೆ,ಮಂಜುಳಾ ಪೂಜಾರಿ, ಮಲ್ಲವ್ವ ಗರಗದ,ಗುತ್ತಿಗೆದಾರ ಗೋಡ್ಸೆ ಅಂಗನ ವಾಡಿ ಹಾಗೂ ಪ್ರಾಥಮಿಕ ಶಾಲೆಯ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶಿವಲೀಲಾ ಕುಲಕರ್ಣಿ ಯವರಿಗೆ ಶಾಲೆಯ ಹಾಗೂ ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು. ಶಾಲಾ ಶಿಕ್ಷಕಿ ಶ್ರೀಮತಿ ವಾಣಿಶ್ರೀ ಕುಲಕರ್ಣಿ ಅವರು ಪ್ರಾರ್ಥಿಸಿ ವಂದಿಸಿದರು ಶಾಲಾ ಪ್ರಧಾನ ಗುರು ಎನ್. ಬಿ. ದ್ಯಾಪೂರ ಸ್ವಾಗತಿಸಿ ನಿರೂಪಿಸಿದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.