ರಾಯಚೂರು –
ಜಾತ್ರೆ ವೇಳೆ ಭಕ್ತರ ಮೇಲೆ ಲಘು ಲಾಠಿ ಪ್ರಹಾರವನ್ನು ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.ರಾಯಚೂರು ತಾಲೂಕಿನ ಮಟಮಾರಿ ಯಲ್ಲಿ ಈ ಒಂದು ಘಟನೆ ನಡೆದಿದೆ.

ಕೋವಿಡ್ ಹಿನ್ನೆಲೆ ವಿಜೃಂಭಣೆ ಜಾತ್ರೆ ಆಚರಣೆಗೆ ಅನುಮತಿ ನೀಡಿರಲಿಲ್ಲ.ಸೂಚನೆ ಮೀರಿ ನಡೆದ ರಥೋತ್ಸವದ ವೇಳೆಯಲ್ಲಿ ಹಗ್ಗ ತುಂಡಾಗಿದೆ.ಈ ಒಂದು ಹಗ್ಗ ತುಂಡಾಗಿ ಪೊಲೀಸ್ ವಾಹನದೆಡೆಗೆ ನುಗ್ಗಿದೆ ರಥ ಇದರಿಂದ ಸ್ವಲ್ಪದರಲ್ಲೇ ದೊಡ್ಡ ಪ್ರಮಾಣದ ಅನಾಹುತ ತಪ್ಪಿದಂತಾಗಿದೆ.ಇದನ್ನು ಅರಿತ ಪೊಲೀಸರು ಭಕ್ತರನ್ನ ಚದುರಿಸಲು ಲಘುಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದ್ದಾರೆ.