ನಾಳೆಯಿಂದ ದಸರಾ ರಜೆ ಆರಂಭ – 17 ದಿನಗಳ ದಸರಾ ರಜೆಯ ಕುರಿತಂತೆ ಒಂದಿಷ್ಟು ಮಾಹಿತಿ…..

Suddi Sante Desk
ನಾಳೆಯಿಂದ ದಸರಾ ರಜೆ ಆರಂಭ – 17 ದಿನಗಳ ದಸರಾ ರಜೆಯ ಕುರಿತಂತೆ ಒಂದಿಷ್ಟು ಮಾಹಿತಿ…..

ಬೆಂಗಳೂರು

ನಾಳೆಯಿಂದ ದಸರಾ ರಜೆ ಆರಂಭ – 17 ದಿನಗಳ ದಸರಾ ರಜೆಯ ಕುರಿತಂತೆ ಒಂದಿಷ್ಟು ಮಾಹಿತಿ

ನಾಳೆಯಿಂದ ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ `ದಸರಾ ರಜೆ ಘೋಷಣೆ ಆರಂಭವಾಗಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ಅಕ್ಟೋಬರ್ 3 ರಿಂದ 20 ತನಕ ದಸರಾ ರಜೆ ಘೋಷಿಸಿದ್ದು ಶಿಕ್ಷಣ ಇಲಾಖೆಯ ಆದೇಶದ ಪ್ರಕಾರ ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆಯೂ ಈ ಒಂದು ಬಾರಿ ಒಟ್ಟು 17 ದಿನ ಇರಲಿದೆ.

2024-25ನೇ ಶೈಕ್ಷಣಿಕ ಸಾಲಿನ ದಸರಾ ರಜೆ ಅಕ್ಟೋಬರ್ 3 ರಿಂದ 20 ರವರೆಗೆ ಇರಲಿದ್ದು ಶಿಕ್ಷಣ ಇಲಾಖೆಯ ಆದೇಶದ ಪ್ರಕಾರ ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆಯೂ ಒಟ್ಟು 17 ದಿನ ಇರಲಿದೆ.ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ಕಾರ್ಯಕ್ರಮದ ನಂತರ ರಜೆ ಆರಂಭವಾಗಲಿದೆ.ಅಕ್ಟೋಬ‌ರ್ 21ರಿಂದ 2ನೇ ಅವಧಿಯು ಪ್ರಾರಂಭವಾಗಲಿದ್ದು 2025ರ ಏಪ್ರಿಲ್ 10 ತನಕ ಶಾಲೆ ನಡೆಯಲಿದೆ.

2024- 2025ರ ಶೈಕ್ಷಣಿಕ ವರ್ಷದ ಶಾಲಾ ಅವಧಿಯ ಮಾರ್ಗದರ್ಶಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಗಳು ಆರಂಭಕ್ಕೂ ಮುನ್ನ ಪ್ರಕಟಣೆ ಹೊರಡಿಸಿತ್ತು. ಅದರ ನಿಯಮಾನುಸಾ ರದಂತೆ ರಜೆಗಳು ಘೋಷಣೆಯಾಗಿವೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.