ಶಿವಮೊಗ್ಗ –
ಕಲ್ಲು ಗಣಿಗಾರಿಕೆಗೆಂದು ಲಾರಿಯಲ್ಲಿ ಸಾಗಿಸುತ್ತಿದ್ದ ಡೈನಮೈಟ್ ಸ್ಫೋಟಗೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಅಬ್ಬಲಗೇರಿ ಬಳಿ ಈ ಒಂದು ದೊಡ್ಡ ದುರಂತ ನಡೆದಿದೆ.

ವಾಹನದಲ್ಲಿ ಡೈನಮೈಟ್ ಸಾಗಿಸುತ್ತಿದ್ದ ವೇಳೆ ಈ ಒಂದು ದೊಡ್ಡ ಪ್ರಮಾಣದ ಅವಘಡ ಸಂಭವಿಸಿದೆ.ಸ್ಪೋಟದ ತೀವ್ರತೆಗೆ ವಾಹನಗಳು ಮತ್ತು ಅದರಲ್ಲಿದ್ದ ಜನರು ಛಿದ್ರ ಛಿದ್ರವಾಗಿದ್ದಾರೆ ಎನ್ನಲಾಗಿದೆ.

ಸ್ಫೋಟದ ತೀವ್ರತೆಗೆ ವಾಹನ ಸಂಪೂರ್ಣವಾಗಿ ಛಿದ್ರಛಿದ್ರವಾಗಿದೆ. ಸುಮಾರು 6 ಜನರು ಮೃತಪಟ್ಟಿರುವ ಸಾಧ್ಯತೆ ಇದೆ. ಅಲ್ಲಿ ಬಹಳಷ್ಟು ಅನಾಹುತ ಸಂಭವಿಸಿದೆ.

ಘಟನಾ ಸ್ಥಳಕ್ಕೆ ತೆರಳುವುದಕ್ಕೂ ಆಗುತ್ತಿಲ್ಲ. ದಟ್ಟ ಹೊಗೆ ಆವರಿಸಿ ಅಲ್ಲಿಗೆ ತೆರಳುವುದಕ್ಕೂ ಆಗುತ್ತಿಲ್ಲ. ಅಧಿಕಾರಿಗಳು ಅಲ್ಲಿಗೆ ತೆರಳಲು ಮೊದಲು ಸಾಕಷ್ಟು ಪ್ರಮಾಣದಲ್ಲಿ ಪರದಾಡಿದರು ನಂತರ ಸ್ಥಳಕ್ಕೆ ತೆರಳಿದರು.

ಬಹಳ ದೊಡ್ಡ ಮಟ್ಟದ ದುರಂತ ನಡೆದಿದೆ.ಇನ್ನೂ ಸಂಜೆ ಸಮಯದಲ್ಲಿ ಈ ಒಂದು ಶಬ್ದ ದಿಂದ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಬಾರಿ ಶಬ್ದ ಭೂಮಿಯ ಕಂಪನದ ಸುದ್ದಿ ಯಿಂದ ಜನ ಭಯಗೊಂಡಿದ್ದರು.ಇದೆಲ್ಲದರ ನಡುವೆ ದೊಡ್ಡ ಪ್ರಮಾಣದ ಸ್ಫೋಟ ವಾಗಿದೆ. ಸಧ್ಯ 6 ಜನರು ಸಾವಿಗೀಡಾಗಿದ್ದು ಸ್ಥಳದಲ್ಲೇ ಶಿವಮೊಗ್ಗ ಜಿಲ್ಲೆಯ ಅಧಿಕಾರಿಗಳ ಮೊಕ್ಕಾಂ ಹೂಡಿದ್ದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.