ಚಾಮರಾಜನಗರ –
ಎರಡು ಭಾರಿ ಕೋವಾರ್ಸಿನ್ ಪಡೆದಿದ್ದ ಡಿವೈಎಸ್ಪಿ ಮತ್ತು ಎಸ್‌ಐಗೆ ಸೋಂಕು ಕಾಣಿಸಿಕೊಂಡಿದ್ದು 90 ಪೊಲಿಸ್ ಸಿಬ್ಬಂದಿಗಳಿಗೂ ಟೆಸ್ಟ್ ಮಾಡಿಸಲಾಗಿದೆ. ಹೌದು ಎರಡು ಭಾರಿ ಕೋ ವಾಕ್ಸಿನ್ ಪಡೆದಿದ್ದ ಜಿಲ್ಲೆಯ ಕೊಳ್ಳೇಗಾಲ ಡಿವೈಎಸ್‌ಪಿ ಹಾಗೂ ಕೊಳ್ಳೇ ಗಾಲ ಪಟ್ಟಣ ಠಾಣೆ ಎಸ್‌ಐಗೆ ಕೊರೊನಾ ಸೋಂಕು ತಗುಲಿದೆ.ಅಲ್ಲದೇ ಈ ಒಂದು ಹಿನ್ನೆಲೆಯಲ್ಲಿ ಗ್ರಾಮಾಂತರ ಮತ್ತು ಪಟ್ಟಣ ಠಾಣೆಯ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಯಿತು.
ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಸಾರಾ ಥಾಮಸ್ ಸೂಚನೆ ನೀಡಿದ ಮೇರೆಗೆ ಎರಡು ಠಾಣೆಗಳ ಸಿಬ್ಬಂದಿ ಹಾಗೂ ಡಿವೈಎಸ್‌ಪಿ ಕಚೇರಿಯ ಸಿಬ್ಬಂದಿ ಸೇರಿದಂತೆ ಒಟ್ಟಾರೆ 90 ಮಂದಿ ಗೆ ಕೋವಿಡ್ ಟೆಸ್ಟ್‌ಗೊಳಪಡಿಸಲಾಯಿತು. ಕೊಳ್ಳೆ ಗಾಲ ಉಪ ವಿಭಾಗದ ಡಿವೈಎಸ್‌ಪಿ ನಾಗರಾಜು ಹಾಗೂ ಕೊಳ್ಳೇಗಾಲ ಪಟ್ಟಣ ಠಾಣೆ ಸಬ್ ಇನ್ಸ್ಪೆಕ್ಟರ್ ತಾಜುದ್ದೀನ್‌ಗೆ ಕೊರೊನಾ ಸೋಂಕು ತಗುಲಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಉಪ ವಿಭಾಗ ಡಿವೈಎಸ್‌ಪಿ ನಾಗರಾಜು ಹಾಗೂ ಪಟ್ಟಣ ಠಾಣೆ ಎಸ್‌ಐ ತಾಜುದ್ದೀನ್ ಅವರು ಎರಡು ಬಾರಿ ಕೋವಿಡ್ ಲಸಿಕೆ ಪಡೆದಿದ್ದರೂ ಸೋಂಕು ತಗುಲಿರು ವುದು ದೃಢಪಟ್ಟಿದೆ.ಹಿರಿಯ ಅಧಿಕಾರಿಗಳಿಗೆ ಸೋಂ ಕು ದೃಢವಾಗಿದ್ದ ಹಿನ್ನೆಲೆಯಲ್ಲಿ ಕಛೇರಿಯ ಸಿಬ್ಬಂದಿ ಗಳಿಗೆ ಸೋಂಕು ಹರಡ ದಂತೆ ತಡೆಯಲು ಸಾಮೂ ಹಿಕವಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ.ಈ ಹಿಂದೆ ಜಿಲ್ಲಾಧಿಕಾರಿ ರವಿ ಅವರಿಗೂ 2ನೇ ಬಾರಿ ವ್ಯಾಕ್ಸಿನ್ ಪಡೆದಿದ್ದರೂ ಸೋಂಕು ಕಾಣಿಸಿಕೊಂಡಿತ್ತು.ಇದೀಗ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಗುಣಮುಖರಾಗಿ ದ್ದಾರೆ