ಸುದ್ದಿ ಸಂತೆ ನ್ಯೂಸ್ ಡೆಸ್ಕ್ –
ಸಾಮಾನ್ಯವಾಗಿ ಯಾರಿಗಾದರೂ ಎದುರಿಗೆ ಸೌತೆಕಾಯಿ ಕಂಡು ಕಾಣಿಸಿಕೊಂಡರೆ ಸಾಕು ತಟ್ಟನೆ ಕೈಯಲ್ಲಿ ತಗೆದುಕೊಂಡು ಒಮ್ಮೆ ಅದನ್ನು ಸ್ವಚ್ಚ ಮಾಡಿ ತಿನ್ನಲು ಆರಂಭ ಮಾಡುತ್ತೇವೆ ಸರಿ ಆದರೆ ಹೀಗೆ ಸೌತೆಕಾಯಿಯನ್ನು ತಿನ್ನಿ ತಪ್ಪಲ್ಲ ಆದರೆ ಅಪ್ಪಿ ತಪ್ಪಿಯೂ ಈ ಒಂದು ಸೌತೆಕಾಯಿ ಯನ್ನು ತಿನ್ನುವ ಸಮಯದಲ್ಲಿಯೇ ತಿನ್ನಿ ಇಲ್ಲವಾ ದರೆ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಅಂತೆ.
ಹೌದು ಸೌತೆಕಾಯಿಯನ್ನು ತಿನ್ನುವುದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ ಮತ್ತು ಇದು ಸಾಮಾನ್ಯ ವಾಗಿ ಸಲಾಡ್ ಅಥವಾ ತರಕಾರಿಯಲ್ಲಿ ಕಂಡು ಬರುತ್ತದೆ ಇದರಲ್ಲಿ ವಿಟಾಮಿನ್ ಮತ್ತು ಮಿನರಲ್ ಗಳು ಹೇರಳ ಪ್ರಮಾಣದಲ್ಲಿವೆ ಜೊತೆಗೆ ಇದರಲ್ಲಿ ನೀರಿನಂಶವೂ ಅಧಿಕವಾಗಿರು ತ್ತದೆ ಇದು ದೇಹವನ್ನು ಹೈಡ್ರೇಟ್ ಆಗಿ ಇಡಲು ಸಹಾಯ ಮಾಡುತ್ತದೆ, ಆದರೆ ಅನೇಕ ಜನರು ಇದನ್ನು ತಪ್ಪಾಗಿ ಸೇವಿಸುತ್ತಾರೆ.
ನಾವು ಸೌತೆಕಾಯಿಯನ್ನು ಯಾವಾಗ ತಿನ್ನಬಾ ರದು ಎಂಬುದನ್ನು ಗ್ರೇಟರ್ ನೋಯ್ಡಾದ GIMS ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಹಾರ ತಜ್ಞರಾದ ಡಾ. ಆಯುಷಿ ಯಾದವ್ ನಿರಂತವಾಗಿ ಸಂಶೋಧನೆಯನ್ನು ಮಾಡಿ ಈ ಕುರಿತಂತೆ ಹೇಳಿದ್ದಾರೆ. ಸೌತೆಕಾಯಿಯು ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜ ನಕಾರಿಯಾಗಿದೆ ಆದರೆ ಅದನ್ನು ಯಾವಾಗಲೂ ಹಗಲಿನ ಹೊತ್ತು ಸೇವಿಸಬೇಕು ಇದರಿಂದಾಗಿ ದೇಹವು ಅನೇಕ ಪೋಷಕಾಂಶಗಳನ್ನು ಪಡೆಯು ತ್ತದೆ ಆದರೆ ನೀವು ರಾತ್ರಿಯಲ್ಲಿ ಸೇವಿಸಿದರೆ ಇದು ಆರೋಗ್ಯಕ್ಕೆ ಲಾಭ ಕೊಡುವ ಬದಲು ಹಾನಿ ಯನ್ನೇ ಉಂಟುಮಾಡುತ್ತದೆ.
ರಾತ್ರಿಯ ಹೊತ್ತು ಸೌತೆಕಾಯಿಯನ್ನು ಏಕೆ ತಿನ್ನಬಾರದು ಗೊತ್ತಾ
ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಅಂತೆ ಈ ಒಂದು ಸೌತೆಕಾಯಿಯಲ್ಲಿ ಕುಕುರ್ಬಿ ಟಾಸಿನ್ ಇರುತ್ತದೆ ಇದು ನಿಮ್ಮ ಜೀರ್ಣಕ್ರಿಯೆ ಯು ಬಲವಾಗಿದ್ದಾಗ ಮಾತ್ರ ಜೀರ್ಣವಾಗುತ್ತದೆ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಗಳು ಉದ್ಭವಿಸುತ್ತದೆ ವಾಸ್ತವದಲ್ಲಿ ರಾತ್ರಿ ಹೊತ್ತು ಸೌತೆಕಾಯಿಯನ್ನು ತಿನ್ನುವುದರಿಂದ ಹೊಟ್ಟೆಯು ಭಾರವಾಗಲು ಪ್ರಾರಂಭಿಸುತ್ತದೆ ನಂತರ ನೀವು ಮಲಬದ್ಧತೆ ಅಜೀರ್ಣ ಅಥವಾ ಉಬ್ಬುವಿಕೆಯಂ ತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹೀಗಾಗಿ ದಿನದ ಅವಧಿಯಲ್ಲಿ ಮಾತ್ರ ಸೌತೆಕಾ ಯಿಗಳನ್ನು ಸೇವಿಸಿ ಅಂತಾ ಹೇಳಿದ್ದಾರೆ.
ನಿದ್ರೆಯ ಮೇಲೆ ಪರಿಣಾಮಗಳು ಹೌದು ರಾತ್ರಿ ಸೌತೆಕಾಯಿ ತಿಂದರೆ ನೆಮ್ಮದಿಯ ನಿದ್ದೆ ಬರು ವುದು ಕಷ್ಟ ಏಕೆಂದರೆ ಹೊಟ್ಟೆ ಭಾರವಾಗಿರುವು ದರಿಂದ ಮಲಗಲು ಕಷ್ಟವಾಗುತ್ತದೆ ಇದರ ಹೊರತಾಗಿ ಜೀರ್ಣಕ್ರಿಯೆ ಕೆಟ್ಟರೆ ಗ್ಯಾಸ್‌ನಿಂದಾಗಿ ನಿದ್ರೆ ಹಾಳಾಗುತ್ತದೆ ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವಿರುವುದರಿಂದ ರಾತ್ರಿಯಲ್ಲಿ ನೀವು ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ ಇದು ನಿಮ್ಮ ನಿದ್ರೆಗೆ ಭಂಗ ತರುತ್ತದೆ.
ದಿನದ ಅವಧಿಯಲ್ಲಿ ಸೌತೆಕಾಯಿಯನ್ನು ಸೇವಿಸಿ ಹೌದು ಹೆಚ್ಚಿನ ಆರೋಗ್ಯ ತಜ್ಞರು ಸೌತೆಕಾಯಿ ಯನ್ನು ದಿನದ ಅವಧಿಯಲ್ಲಿ ತಿನ್ನಲು ಶಿಫಾರಸು ಮಾಡುತ್ತಾರೆ ಏಕೆಂದರೆ ಇದು ಅನೇಕ ಆರೋಗ್ಯ ಕರ ಪ್ರಯೋಜನಗಳನ್ನು ಹೊಂದಿದೆ ಸೌತೆಕಾಯಿ ಯ ಸೇವನೆಯು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಇದರಲ್ಲಿರುವ ಶೇ.95 ನೀರಿನ ಅಂಶ ದೇಹವನ್ನು ತೆವದಿಂದ ಇಡುತ್ತದೆ ಇದಲ್ಲದೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಬಲವಾದ ಮೂಳೆಗಳಂತಹ ಪ್ರಯೋಜನಗಳು ಸಹ ಈ ತರಕಾರಿ ಹೊಂದಿದೆ.
ಈ ಲೇಖನದಲ್ಲಿ ನೀಡಲಾಗಿರುವ ಮೇಲಿನ ಎಲ್ಲಾ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ.ಇದನ್ನು ಅನುಸರಿ ಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ ಈ ಒಂದು ಮಾಹಿತಿಯನ್ನು ಸುದ್ದಿ ಸಂತೆ ಪುಷ್ಠಿಕರಿಸೊದಿಲ್ಲ