ರಾಯಚೂರು –
ರಾಷ್ಟ್ರನಾಯಕನ ಸ್ವಾಮಿ ವಿವೇಕಾನಂದರ ಬಗ್ಗೆ ಅವಹೇಳನಕಾರಿ ಲೇಖನ ಬರೆದು ಆರೋಪದ ಮೇಲೆ ಶಿಕ್ಷಣ ಇಲಾಖೆಯ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಹೌದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಾಟ್ಸಾಪ್ ಗ್ರೂಪ್ ನಲ್ಲಿ ಪೋಸ್ಟ್ ಮಾಡಿದಕ್ಕೆ ಸನಾವುಲ್ಲಾರನ್ನು ಅವರನ್ನು ಅಮಾನತ್ತು ಮಾಡಿ ರಾಯಚೂರು ಡಿಡಿಪಿಐ ವೃಷಭೇಂದ್ರಯ್ಯ ಆದೇಶ ನೀಡಿದ್ದಾರೆ.ರಾಯಚೂರು ಜಿಲ್ಲೆಯ ಲಿಂಗಸುಗೂರು ಶಿಕ್ಷಣ ಇಲಾಖೆ ಅಧಿಕಾರಿ ಸನಾವುಲ್ಲಾರನ್ನು ಕೆಲಸದಿಂದ ಅಮಾನತ್ತು ಮಾಡಲಾಗಿದೆ.

ರಾಷ್ಟ್ರನಾಯಕ ಸ್ವಾಮಿ ವಿವೇ ಕಾನಂದರ ಬಗ್ಗೆ ಅವಹೇಳನಕಾರಿ ಲೇಖನ ಬರೆದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಾಟ್ಸಾಪ್ ಗ್ರೂಪ್ ನಲ್ಲಿ ಪೋಸ್ಟ್ ಮಾಡಿದಕ್ಕೆ ಸನಾವುಲ್ಲಾರಿಗೆ ಈ ಒಂದು ಶಿಕ್ಷೆಯನ್ನು ನೀಡಲಾಗಿದೆ.ಇದೇ ಜನವರಿ 12ರ ವಿವೇಕಾ ನಂದರ 150 ನೇ ಜಯಂತಿಯಂದು ಸನಾವುಲ್ಲಾ ಪೋಸ್ಟ್ ಮಾಡಿದ್ದರು ಸ್ವಾಮಿ ವಿವೇಕಾನಂದರ ಬಾಲ್ಯ ಜೀವನ ಬದುಕಿನ ಬಗ್ಗೆ ಅವಹೇಳನ ಮಾಡಿದ್ದು ಸರ್ಕಾರಿ ನೌಕರ ನಾಗಿ ರಾಷ್ಟ್ರ ನಾಯಕನ ಬಗ್ಗೆ ಅವಹೇಳನ ಮಾಡಿದ ಆರೋಪದಡಿ ಅಮಾನತು ಮಾಡಲಾಗಿದೆ.