ಬೆಂಗಳೂರು –
ಶಿಕ್ಷಕರಿಗೆ ಅವಮಾನ ಮಾಡಿದ ಶಿಕ್ಷಣ ಇಲಾಖೆ ತರಾತುರಿಯಲ್ಲಿ ಹೀಗೆ ಮಾಡಿ ಶಿಕ್ಷಕರಿಗೆ ಅವಮಾ ನಿಸಿದ ಅಧಿಕಾರಿಗಳ ವಿರುದ್ದ CM ಗೆ ದೂರು ನೀಡಲು ಚಿಂತನೆ ಹೌದು
ಎಸ್ ಎಸ್ ಎಲ್ ಸಿ ಪರೀಕ್ಷಾ ಮೇಲ್ವಿಚಾರಣೆಯ ವಿಚಾರದಲ್ಲಿ ಶಿಕ್ಷಣ ಇಲಾಖೆ ಶಿಕ್ಷಕರಿಗೆ ಅವಮಾನ ವನ್ನು ಮಾಡಿದೆ ಎಂದು ರೂಪ್ಸಾ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಗಟ್ಟೆ ಹೇಳಿದ್ದಾರೆ.ಪತ್ರಿಕಾ ಪ್ರಕಟಣೆಯ ಮೂಲಕ ಶಿಕ್ಷಣ ಇಲಾಖೆಯ ಮತ್ತು ಅಧಿಕಾರಿಗಳ ವಿರುದ್ದ ಅಸಮಾಧಾನವನ್ನು ಹೊರಹಾಕಿದ್ದಾರೆ.
ಎಸ್ ಎಲ್ ಸಿ ಪರೀಕ್ಷೆ ಗಾಗಿ ಮೇಲ್ವಿಚಾರಕರನ್ನಾಗಿ ಮೊದಲು ಪ್ರಾಥಮಿಕ ಶಾಲಾ ಶಿಕ್ಷಕರನ್ನು ಇಲಾಖೆ ನೇಮಿಸಿದರು.ನಂತರ ಅವರಿಗೆ ಪರೀಕ್ಷಾ ವಿಚಾರ ಕುರಿತಂತೆ ಅವರಿಗೆ ಸೂಕ್ತವಾದ ತರಬೇತಿಯನ್ನು ಸಹ ನೀಡಲಾಯಿತು.ತರಬೇತಿಯ ನಂತರ ಇವರನ್ನು ಕೈಬಿಟ್ಟು ಅನಂತರ ಪ್ರೌಢಶಾಲಾ ಶಿಕ್ಷಕರನ್ನು ನೇಮಿಸಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅವಮಾನಿಸಲಾಯಿತು.
ಈಗ ತರಾತುರಿಯಲ್ಲಿ ಹೊಸದಾಗಿ ಸರ್ಕಾರಿ ಅನುದಾನಿತ ಶಾಲಾ ಶಿಕ್ಷಕರನ್ನು ಮಾತ್ರ ನೇಮಿಸಿ ಕೊಂಡು ಅವರಿಗೆ ತರಬೇತಿ ನೀಡಲಾಗಿದೆ.ಆದರೆ ಅನುದಾನ ರಹಿತ ಶಾಲಾ ಶಿಕ್ಷಕರನ್ನು ದೂರ ಇಟ್ಟು ತರಬೇತಿ ಹೆಸರಿನಲ್ಲಿ ಸಾರ್ವಜನಿಕರ ಹಣವನ್ನು ಇಲಾಖೆಯ ಅಧಿಕಾರಿಗಳು ಪೋಲೂ ಮಾಡಿ ದ್ದಾರೆ ಹೀಗಾಗಿ ಈ ಒಂದು ವಿಚಾರ ಕುರಿತಂತೆ ಮುಖ್ಯಮಂತ್ರಿಯವರನ್ನು ಶೀಘ್ರದಲ್ಲೇ ಭೇಟಿ ಯಾಗಿ ಇಲಾಖೆಯ ಕುರಿತಂತೆ ದೂರನ್ನು ನೀಡಿ ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯವನ್ನು ಮಾಡೊದಾಗಿ ಹೇಳಿದ್ದಾರೆ.
ಅಲ್ಲದೇ ಶಿಕ್ಷಕರಿಗೆ ಅವಮಾನವನ್ನು ಮಾಡಿದವರ ಮೇಲೆ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯವನ್ನು ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..