ಬೆಂಗಳೂರು –
ರಾಜ್ಯದ ಯಾವುದೇ ಇಲಾಖೆಗೆ ಇಲ್ಲದ ನೀತಿ ನಿಯಮ ಗಳು ವರ್ಗಾವಣೆ ನೀತಿ ಶಿಕ್ಷಣ ಇಲಾಖೆಗೆ ಇದೆ.ಈ ಒಂದು ಇಲಾಖೆಯಲ್ಲಿ ವರ್ಗಾವಣೆ ಆಗಬೇಕು ಭಡ್ತಿ ಪಡೆಯಬೇಕು ಎಂದರೆ ಸಾಮಾನ್ಯದ ಮಾತಲ್ಲ.ಹೌದು ಈ ಒಂದು ಮಾತಿಗೆ ಸಧ್ಯ ಮತ್ತೊಂದು ವಿಚಾರವೇ ಸಾಕ್ಷಿಯಾಗಿದ್ದು ಇದನ್ನು ಶಿಕ್ಷಣ ಸಚಿವರೇ ಹೇಳಿದ್ದಾರೆ.ಈಗಾಗಲೇ ವಿವಿಧ ಇಲಾಖೆ ಗಳಲ್ಲಿ ಇಲಾಖೆಯ ಪರೀಕ್ಷೆಯ ನಂತ್ರ ಬಡ್ತಿ ಸೇರಿದಂತೆ ವಿವಿಧ ಸೌಲಭ್ಯಕ್ಕೆ ಅರ್ಹತೆಗೊಳಿಸಲಾಗುತ್ತಿದೆ.
ಇದೇ ಮಾದರಿಯಲ್ಲಿಯೇ ರಾಜ್ಯದಲ್ಲಿನ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ಶಿಕ್ಷಕರು, ಬಡ್ತಿ ಪಡೆಯಲು ಪರೀಕ್ಷೆ ಎದುರಿಸೋದು ಅನಿವಾರ್ಯವಾಗಿದೆ. ಇದನ್ನು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.ಬೆಂಗಳೂರಿನಲ್ಲಿ ಮಾತನಾಡಿದ ಅವರು ಶಿಕ್ಷಕರು ನೂತನ ಸಿ ಅಂಡ್ ಆರ್ ನಿಯಮದ ಪ್ರಕಾರ ಬಡ್ತಿಗೆ ಪರೀಕ್ಷೆ ಎದುರಿಸುವುದು ಅನಿವಾರ್ಯವಾಗಿದೆ.ಶಿಕ್ಷಕರು ಪರೀಕ್ಷೆ ಎದುರಿಸಲು ಧೈರ್ಯ ಮಾಡಬೇಕು.
ಈ ವಿಷಯದಲ್ಲಿ ಇಲಾಖೆಗೆ ಸಹಕಾರ ನೀಡಬೇಕೆಂ ದರು.ಶಿಕ್ಷಕರು ಪರೀಕ್ಷೆ ಬರೆಯದೇ ಬಡ್ತಿ ಪಡೆಯುವಂತೆ ಮಾಡುವುದು ತಪ್ಪಾಗುತ್ತದೆ.ನೀವು 1 ರಿಂದ 8ನೇ ತರಗತಿ ವರೆಗೆ ಪಾಠ ಮಾಡಲು ಅವಕಾಶ ಕೇಳ್ತೀರಿ,ನಿವೇ ಪರೀಕ್ಷೆ ಬೇಡ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.ಈ ವಿಷಯದ ಬಗ್ಗೆ ಅನೇಕ ಬಾರಿ ಶಿಕ್ಷಕರ ಸಂಘದೊಂದಿಗೆ ಚರ್ಚೆ ನಡೆದಿದೆ ಆದ್ರೇ ಪರೀಕ್ಷೆ ಇಲ್ಲದೇ ಬಡ್ತಿ ಕಷ್ಟ.ನಿಮಗೆ ಪರೀಕ್ಷೆ ಹೇಗಿರಬೇಕೆಂದು ಬೇಕಾದರೆ ಹೇಳಿ. ಹಾಗೆ ಮಾಡೋಣ ಎಂದು ಸಂಘವನ್ನು ಮನವೊಲಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಶಿಕ್ಷಣ ಸಚಿವರ ಈ ಒಂದು ಮಾತಿನಿಂದಾಗಿ ಭಡ್ತಿ ನಿರೀಕ್ಷೆ ಯಲ್ಲಿದ್ದ ನಾಡಿದ ಅದೇಷ್ಟೋ ಶಿಕ್ಷಕರು ಆತಂಕಗೊಂಡಿದ್ದು ಈಗಾಗಲೇ ವರ್ಗಾವಣೆಯ ವಿಚಾರದಲ್ಲಿ ಕಂಗಾಲಾಗಿರುವ ಶಿಕ್ಷಕರಿಗೆ ಶಿಕ್ಷಣ ಸಚಿವರು ಈಗ ಮತ್ತೊಂದು ಆತಂಕವನ್ನು ತಂದಿಟ್ಟಿದ್ದು ಈ ಒಂದು ವಿಚಾರ ಕುರಿತಂತೆ ನಾಡಿನ ಶಿಕ್ಷಕರ ಧ್ವನಿಯಾಗಿರುವ ಶಿಕ್ಷಕರ ಸಂಘಟನೆಯ ನಾಯಕರು ಧ್ವನಿ ಎತ್ತುತ್ತಾರೆನಾ ಅಥವಾ ಸುಮ್ಮನೆ ಕಾದು ನೋಡುತ್ತಾರೆ ಇಲ್ಲವೇ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.