ಬೆಂಗಳೂರು –
ಶಿಕ್ಷಕರು ಮೌಲ್ಯ ಮಾಪನ ಮಾಡುವಾಗ ಬಹಳ ಎಚ್ಚರಿಕೆಯಿಂದಿರಬೇಕು ಇಲ್ಲವಾದಲ್ಲಿ ಬಹಳ ಬೆಲೆ ತೆರಬೇಕಾಗುತ್ತದೆ.ಮೌಲ್ಯಮಾಪನದ ವೇಳೆ ನಿರ್ಲಕ್ಷ್ಯ ವಹಿಸಿದ್ರೆ ಕೆಲಸಕ್ಕೆ ಕುತ್ತು ಬರಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಇನ್ನು ಮುಂದೆ ಮೌಲ್ಯಮಾಪನದಲ್ಲಿ ನಿರ್ಲಕ್ಷ್ಯ ತೋರಿಸಿದ ಉಪನ್ಯಾಸಕರಿಗೆ ದಂಡದ ಜೊತೆ ಅಮಾನತಿನ ಶಿಕ್ಷೆ ನೀಡಲು ಇಲಾಖೆ ಮುಂದಾಗಿದೆ ಹೌದು 2021-22 ರಲ್ಲಿ ಎಂಟು ಉಪನ್ಯಾಸಕರು ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ್ದರು
ಇಂಗ್ಲೀಷ್ ಹಾಗೂ ಭೌತ ಶಾಸ್ತ್ರ ಮರು ಮೌಲ್ಯ ಮಾಪನ ಮಾಡುವಾಗ ಒಂಬತ್ತು ಪುಟಗಳನ್ನು ತಿದ್ದಿರಲಿಲ್ಲ ಈ ಹಿನ್ನೆಲೆಯಲ್ಲಿ ಎಂಟು ಉಪನ್ಯಾ ಸಕರನ್ನು ಅಮಾನತು ಮಾಡುವ ನಿರ್ಧಾರಕ್ಕೆ ಬರಲಾಗಿದೆ.ಅದೇ ರೀತಿ ಇನ್ನು ಮುಂದೆ ಮೌಲ್ಯ ಮಾಪನದಲ್ಲಿ ನಿರ್ಲಕ್ಷ್ಯ ತೋರಿಸಿದ ಉಪನ್ಯಾಸ ಕರಿಗೆ ದಂಡದ ಜೊತೆ ಅಮಾನತಿನ ಶಿಕ್ಷೆ ನೀಡಲು ಇಲಾಖೆ ಮುಂದಾಗಿದೆ.
ಈ ನಿರ್ಧಾರ 2022-23 ನೇ ಸಾಲಿಗೂ ಅನ್ವಯ ವಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ ಹೀಗಾಗಿ ಸಧ್ಯ ಈ ಒಂದು ನಿರ್ಧಾರ ದಿಂದ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಚಕ್ರವರ್ತಿ ಜೊತೆ ಸುದ್ದಿ ಸಂತೆ ನ್ಯೂಸ್ ಬೆಂಗಳೂರು