ಬೆಂಗಳೂರು –
ರಾಜ್ಯದ ಶಾಲೆಗಳಲ್ಲಿ ಕರೋನ ಪ್ರಕರಣ ಪತ್ತೆಯಾದರೆ ನಾಲ್ಕು ದಿನ ಶಾಲೆಗಳನ್ನು ಬಂದ್ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು ಬೆಂಗಳೂರಿನಲ್ಲಿ ಮಾತನಾಡಿದ ಅವರು ಶಾಲೆ ಗಳ ಕುರಿತು ಮಹತ್ವದ ಮಾಹಿತಿ ನೀಡಿದರು

ಇನ್ನೂ ಈಗಾಗಲೇ ಬೆಂಗಳೂರು ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರೆಯಲು ಅನುಮತಿ ನೀಡಿದ್ದು ಶಾಲೆಯಲ್ಲಿ ಕೊರೊನಾ ಪ್ರಕರಣ ವರದಿಯಾದರೆ ಮಾತ್ರ ತಾತ್ಕಾಲಿಕವಾಗಿ ಶಾಲೆ ಮುಚ್ಚುವಂತೆ ಸೂಚಿಸಲಾಗಿತ್ತು. ಇದರಂತೆ 27 ಜಿಲ್ಲೆಗಳಲ್ಲಿ 250 ಶಾಲೆಗಳು ಮಾತ್ರ ಬಂದ್ ಆಗಿದ್ದು, ಕೊರೊನಾ ಪ್ರಕರಣ ವರದಿಯಾದ 4 ದಿನ ಮಾತ್ರ ಬಂದ್ ಮಾಡಲಾಗಿದೆ ಬಳಿಕ ಪುನಃ ತರಗತಿಗಳನ್ನು ಎಂದಿ ನಂತೆ ನಡೆಸಲಾಗುತ್ತದೆ ಎಂದರು.