ಶೀಘ್ರದಲ್ಲೇ ಪ್ರಾಥಮಿಕ ಹಂತದ ಶಾಲೆಗಳು ಆರಂಭ – ಹಾವೇರಿ ಯಲ್ಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾಹಿತಿ…..

Suddi Sante Desk

ಹಾವೇರಿ –

ಮಹಾಮಾರಿ ಕರೋನಾದ ನಡುವೆಯೂ ಕೂಡಾ ರಾಜ್ಯದಲ್ಲಿ 23 ನೇ ತಾರೀಖಿನಿಂದ ಶಾಲೆ ಪ್ರಾರಂಭಿ ಸಿದ್ದೇವೆ ತುಂಬಾ ಒಳ್ಳೆ ರೆಸ್ಪಾನ್ಸ್ ನಮಗೆ ಸಿಕ್ಕಿದೆ. ಇನ್ನೂ 6,7,8 ನೇ ತರಗತಿ ಸೋಮವಾರ ಪ್ರಾರಂಭ ವಾಗ್ತಿವೆ ಪೋಷಕರು ಶಾಲೆಗಳಿಗೆ ಬಂದು ಒಂದನೇ ತರಗತಿಯಿಂದಲೇ ಶಾಲೆ ಪ್ರಾರಂಭಿಸಿ ಎಂದು ಹೇಳಿದ್ದಾರೆ.

ಪೂರ್ಣ ಪ್ರಮಾಣದ ಶಾಲೆ ಆರಂಭಿಸಿ ಆನ್ ಲೈನ್ ಕ್ಲಾಸ್ ನಿಂದ ನಮಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳೂ ಕೂಡಾ ಹೇಳಿದ್ದಾರೆ ಒಂದು ವಾರ ಅಥವಾ 10 ದಿನ ಕಾಯ್ದು ನೋಡ್ತೀವಿ ಎಂದು ಪ್ರಾಥಮಿಕ ಮತ್ತ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.

ಹಾವೇರಿಯಲ್ಲಿ ಮಾತನಾಡಿದ ಅವರು ಮೂರನೇ ಅಲೆ ಬಗ್ಗೆ ಚರ್ಚೆ ಆಗ್ತಿದೆ ಹೀಗಾಗಿ ಮಕ್ಕಳ ಆರೋಗ್ಯ ದ ಮೇಲೆ ಕಾಳಜಿ ವಹಿಸಲಾಗ್ತಿದೆ ಮಕ್ಕಳ ಇಚ್ಚೆ ನೋಡಿಕೊಂಡೇ ಮುಂದಿನ ದಿನಗಳಲ್ಲಿ 1 ರಿಂದ 5 ರವರಗೆ ಶಾಲೆ ಆರಂಭ ಮಾಡುತ್ತೇವೆ ಎಂದರು.

ಇದರೊಂದಿಗೆ ಹೆಚ್ಚಿನ ಶುಲ್ಕ ವಸೂಲಿ ಕೆಲವು ಖಾಸಗಿ ಶಾಲೆಗಳು ಮಾಡ್ತಿವೆ ಅರ್ಬನ್ ಏರಿಯಾ ಗಳಲ್ಲಿ ಖಾಸಗಿ ಶಾಲೆಗಳಿಂದ ಈ ರೀತಿ ಸಮಸ್ಯೆ ಆಗ್ತಿದೆ ಆಂದ್ರದಲ್ಲಿ ಈಗಾಗಲೇ ಒಂದು ಕಾನೂನು ತಂದಿದ್ದಾರೆ.ಆಂದ್ರ ಮಾದರಿಯಲ್ಲಿ ಕಾನೂನು ರೂಪಿಸುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡ್ತೀವಿ ಎಂದರು.

ಇದರೊಂದಿಗೆ ಇತ್ತೀಚಿಗೆ ಜಾರಿಗೆ ಬಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಬಸವರಾಜ ಹೊರಟ್ಟಿ ಅಸಮಾಧಾನವನ್ನು ವ್ಯಕ್ತಪಡಿಸಿದ ವಿಚಾರ ಕುರಿತಂತೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು 2030 ರವೆಗೆ ಕ್ರಮೇಣವಾಗಿ ಇಂಪ್ಲಿಮೆಂಟ್ ಮಾಡಬೇಕು ಅಂತ ಮೋದಿ ಸರ್ಕಾರ ಹೇಳಿದೆ ಗಾಂಧೀಜಿಯವರೇ ಈ ದೇಶಕ್ಕೆ ತಕ್ಕನಾದ ಶಿಕ್ಷಣ ನೀತಿಯೇ ಇರಬೇಕು ಎಂದು ಹೇಳಿದ್ದಾರೆ

ಎಲ್ಲೂ ಲೋಪ ಆಗಬಾರದು ನಾಳೆ ಬೆಳಿಗ್ಗೆನೇ ಇದನ್ನು ತರಬೇಕು ಅಂತ ಏನೂ ಇಲ್ಲ 2030 ರವರೆಗೂ ಟೈಂ ಇದೆ ಎನ್ ಇ ಪಿ ನಲ್ಲಿ ಮಾತೃ ಭಾಷೆಗೆ ಒತ್ತು ನೀಡಲಾಗ್ತಿದೆ 0 to 5 ಮಾತೃ ಭಾಷೆಯಲ್ಲಿಯೇ ಶಿಕ್ಷಣ ಕೊಡ್ತೇವೆ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.