ಕೋಟ –
ರಜೆಯಲ್ಲೂ ಕೂಡಾ ತರಗತಿ ಯನ್ನು ನಡೆಸಿ ಪಠ್ಯಕ್ರಮ ವನ್ನು ಪೂರ್ಣಗೊಳಿಸುವಂತೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ. ಉಡುಪಿ ಯ ಕೋಟ ದಲ್ಲಿ ಮಾತನಾಡಿದ ಅವರು ಕೋವಿಡ್ ಕಾರಣ ದಿಂದ ತರಗತಿ ಆರಂಭ ವಿಳಂಬವಾಗಿದ್ದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಠ್ಯಕಡಿತ ಮಾಡುವ ಚಿಂತನೆ ಸರಕಾ ರದ ಮುಂದಿಲ್ಲ.ಮುಂದಿನ ವರ್ಷ ಶೈಕ್ಷಣಿಕ ವೇಳಾಪಟ್ಟಿ ಯಂತೆಯೇ ಪರೀಕ್ಷೆ, ತರಗತಿಗಳನ್ನು ಆರಂಭಿಸಬೇಕು ಎನ್ನುವ ಉದ್ದೇಶವಿದೆ.ಇದಕ್ಕಾಗಿ ಶನಿವಾರ,ರವಿವಾರ ಮತ್ತು ರಜಾ ದಿನಗಳಲ್ಲೂ ತರಗತಿ ಗಳನ್ನು ನಡೆಸಿ ಪಠ್ಯಕ್ರಮವನ್ನು ಆದಷ್ಟು ಶೀಘ್ರ ಪೂರ್ತಿಗೊಳಿಸಬೇಕು ಎಂದು ಶಿಕ್ಷಕ ಮಿತ್ರರಲ್ಲಿ ವಿನಂತಿಸಿ ಕೊಂಡಿದ್ದೇನೆ.ಇದಕ್ಕೆ ಶಿಕ್ಷಕರಿಂದಲೂ ಪೂರಕ ಪ್ರತಿಕ್ರಿಯೆ ಬಂದಿದೆ ಎಂದರು.
ಕೋಟ ಮಣೂರು-ಪಡುಕರೆ ಸರಕಾರಿ ಸಂಯುಕ್ತ ಪ್ರೌಢ ಶಾಲೆಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮ ಗಳೊಂದಿಗೆ ಅವರು ಮಾತನಾಡಿದರು.ಕೋವಿಡ್ ಪರಿಣಾಮದಿಂದಾಗಿ ಪಠ್ಯ ಚಟುವಟಿಕೆಗೆ ಸಾಕಷ್ಟು ಹಿನ್ನಡೆಯಾಗಿದೆ.ಹೀಗಾಗಿ ಪಿಯುಸಿ, ಪದವಿ ತರಗತಿಗಳಿಗೆ ದಸರಾ ರಜೆಯನ್ನು ನೀಡಬಾರದು ಎನ್ನುವುದು ಶಿಕ್ಷಣ ಇಲಾಖೆಯ ಬಯಕೆ ಯಾಗಿತ್ತು.ಆದರೆ ಈಗ ಹಬ್ಬದಲ್ಲಿ ಭಾಗವಹಿಸಬೇಕು ಎನ್ನುವ ಬೇಡಿಕೆ ಕೇಳಿ ಬರುತ್ತಿರುವುದರಿಂದ ರಜೆಯನ್ನು ಈ ವಿಭಾಗಕ್ಕೂ ನೀಡಲಾಗಿದೆ ಎಂದರು.