ಚಿಕ್ಕಬಳ್ಳಾಪುರ –
ಒಂದನೇ ತರಗತಿ ಆರಂಭಿಸುವ ವಿಚಾರ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾತನಾಡಿದ್ದಾರೆ.ಚಿಕ್ಕಬಳ್ಳಾಪುರ ದಲ್ಲಿ ಮಾತನಾಡಿದ ಅವರು ತಜ್ಞರ ಅಭಿಪ್ರಾಯ ಪಡೆದು ಪ್ರಾಥಮಿಕ ಶಾಲೆ ತೆರೆಯಲು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸಧ್ಯ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತುಂಬಾ ಇದೆ.ಆದರೆ ಮಕ್ಕಳ ಬೋದನೆಗೆ ಕೊರತೆ ಯಾಗಿಲ್ಲ ಎಂದರು.ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಇನ್ನೂ ಒಂದನೇ ತರಗತಿಯಿಂದ ಶಾಲೆ ತೆರೆಯಲು ಅತಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು