ಬೆಂಗಳೂರು –
ರಾಜ್ಯದಲ್ಲಿ ಶಾಲಾ ಶಿಕ್ಷಕರಿಗೆ ಸಮವಸ್ತ್ರ ವನ್ನು ಕಡ್ಡಾಯ ಮಾಡಲಾಗುತ್ತದೆ ಎಂಬ ಪ್ರಶ್ನೆಗೆ ರಾಜ್ಯದ ನೂತನ ಶಿಕ್ಷಣ ಸಚಿವರು ಸ್ಪಷ್ಟ ತೆ ನೀಡಿದ್ದಾರೆ ಹೌದು ಶಾಲಾ ಶಿಕ್ಷಕರಿಗೆ ಸಮವಸ್ತ್ರ ನಿಗದಿಪಡಿಸ ಬೇಕೆಂಬ ಸದಸ್ಯರ ಮನವಿಗೆ ಉತ್ತರಿಸಿದ ಸಚಿವ ಮಧುಬಂಗಾರಪ್ಪ, ಸದ್ಯಕ್ಕೆ ನಮ್ಮ ಮುಂದೆ ಅಂಥಹ ಪ್ರಸ್ತಾವನೆ ಇಲ್ಲ ಎಂದರು
ಶಿಕ್ಷಕರು ಮಕ್ಕಳ ಪಾಠ ಪ್ರವಚನಗಳಿಗೆ ತೊಂದರೆ ಯಾಗದಂತೆ ಸಮವಸ್ತ್ರ ಧರಿಸಬೇಕು.ಮುಂದಿನ ದಿನಗಳಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡ ಲಾಗುವುದು ಎಂದರು
240ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾತಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಒಂದು ವಿಶೇಷ ಶಿಕ್ಷಕರ ಹುದ್ದೆಯನ್ನು ನೇಮಕಾತಿ ಮಾಡಲಾಗಿದೆ.ಇದರಲ್ಲಿ 258 ಸಂಗೀತ ಶಿಕ್ಷಕರ ಹುದ್ದೆಗಳು ಮಂಜೂರಾತಿಯಾಗಿದ್ದರೆ, ಪ್ರಸ್ತುತ 177 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು 81 ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿಯನ್ನು ನೀಡಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..