ಬೆಂಗಳೂರು –
ಕೋವಿಡ್ ಕಾರ್ಯದಲ್ಲಿ ನಿರತರಾಗಿ ಹಾಗೂ ಉಪ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿ ರಾಜ್ಯದಲ್ಲಿ ಹಲವು ಶಿಕ್ಷಕರು ಹಾಗೂ ಪದವಿ ಪೂರ್ವ ಉಪನ್ಯಾ ಸಕರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿನ ಶಿಕ್ಷಕರ ಸಾವಿ ನ ಸರಣಿ ಕುರಿತಂತೆ ನಿಮ್ಮ ಸುದ್ದಿ ಸಂತೆ ನ್ಯೂಸ್ ಕೂಡಾ ನಿರಂತರವಾಗಿ ವರದಿಗಳನ್ನು ಪ್ರಸಾರ ಮಾಡುತ್ತಲೆ ಬಂದಿದ್ದು ಈಗಲೂ ಬರುತ್ತಿದೆ. ಇನ್ನೂ ಇತ್ತ ಈ ಕುರಿತಂತೆ ರಾಜ್ಯ ಮಟ್ಟದಲ್ಲಿ ಸದಾ ಯಾವಾ ಗಲೂ ಶಿಕ್ಷಕರ ಪರವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಧ್ವನಿಯಾಗಿ ಕೆಲಸ ಮಾಡುತ್ತಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೂಗಿಗೆ ಶಿಕ್ಷಣ ಸಚಿವ ಸುರೇಶ ಕುಮಾರ್ ಸ್ಪಂದಿಸಿದ್ದಾರೆ.

ಹೌದು ಕಳೆದ ಹದಿನೈದು ದಿನಗಳಿಂದ ನಿರಂತರವಾ ಗಿ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮತ್ತು ಸರ್ವ ಸದಸ್ಯರ ಮನವಿಗೆ ಸ್ಪಂದಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜ್ಯದಲ್ಲಿ ಕೋವಿಡ್ ನಿಂದಾಗಿ ಮೃತರಾದ ಶಿಕ್ಷಕರ ಮಾಹಿತಿ ಪಡೆದು ಕೂಡಲೇ ಸಲ್ಲಿಸುವಂತೆ ಸೂಚನೆ ನೀಡಿ ದ್ದಾರೆ.

ಹೌದು ಕಳೆದ ಏಪ್ರೀಲ್ ನಿಂದ ಇಲ್ಲಿಯವರೆಗೆ ನಿಧನ ರಾದ ಶಿಕ್ಷಕರ ಉಪನ್ಯಾಸಕರ ವಿವರವನ್ನು ಪಡೆದು ಜಿಲ್ಲಾವಾರು ಮಾಹಿತಿಯೊಂದಿಗೆ ತಮಗೆ ನೀಡುವಂ ತೆ ಸರ್ಕಾರದ ಅಪರ ಕಾರ್ಯದರ್ಶಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಇವರಿಗೆ ಸೂಚನೆ ನೀಡಿದ್ದಾರೆ.

ಇನ್ನೂ ಈ ಕುರಿತಂತೆ ಮೃತರಾದ ಶಿಕ್ಷಕರಿಗೆ ಕೂಡಲೇ ಸೂಕ್ತವಾದ ಪರಿಹಾರವನ್ನು ನೀಡುವಂತೆ ಕಳೆದ ಹದಿನೈದು ದಿನಗಳಿಂದ ನಿರಂತವಾಗಿ ಹೋರಾಟ ಮಾಡುತ್ತಿದ್ದ ಸಂಘಕ್ಕೆ ಅದರಲ್ಲೂ ಅಧ್ಯಕ್ಷ ಶಂಭು ಲಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದ ರ್ಶಿ ಚಂದ್ರಶೇಖರ ನುಗ್ಗಲಿ ಮತ್ತು ಸರ್ವ ಸದಸ್ಯರ ಹೋರಾಟದ ಫಲವಾಗಿ ಈ ಒಂದು ಕಾರ್ಯವಾ ಗಿದ್ದು ಸಂಘದ ಮನವಿಗೆ ಸ್ಪಂದಿಸಿದ ಶಿಕ್ಷಣ ಸಚಿವ ರಿಗೆ ಸಂಘದ ಸರ್ವ ಸದಸ್ಯರು ಧನ್ಯವಾದಗಳನ್ನು ಹೇಳಿದ್ದಾರೆ.