ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ ಶಿಕ್ಷಣ ಸಚಿವರು…..

Suddi Sante Desk
ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ ಶಿಕ್ಷಣ ಸಚಿವರು…..

ಬೆಂಗಳೂರು

ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು ದಿನಕ್ಕೆ ಮೂರು ಬಾರಿ 10 ನಿಮಿಷ ವಿರಾಮ ನೀಡುವ ವಾಟರ್ ಬೆಲ್’ ಯೋಜನೆ ಮರು ಜಾರಿಗೆ ಶಿಕ್ಷಣ ಇಲಾಖೆ ನಿರ್ಧರಿಸಿದೆ.ಈ ಬಗ್ಗೆ ಸರ್ಕಾರ ಶೀಘ್ರದಲ್ಲೇ ಅಧಿ ಸೂಚನೆ ಹೊರಡಿಸಲಿದ್ದು ಬೆಲ್ ಹೊಡೆದ ವೇಳೆ ಮಕ್ಕಳಿಗೆ ನೀರು ಕುಡಿಯಲು ಸೂಚಿಸಿಬೇಕೆಂ ಬುದು ಈ ಯೋಜನೆಯ ಪ್ರಮುಖ ಉದ್ದೇಶವಾ ಗಿದೆ.

ಶಾಲಾ ಅವಧಿಯಲ್ಲಿ ಶುದ್ದವಾದ ಕುಡಿಯುವ ನೀರನ್ನು ಮಕ್ಕಳಿಗೆ ನೀಡಬೇಕು ಕುಡಿಯುವ ನೀರಿನ ಬೆಲ್ ಗೆ ವಿಶೇಷ ಸಮಯ ನಿಗದಿ ಮಾಡು ವಂತೆ ಸೂಚನೆ ನೀಡಲಾಗಿದೆ.

ಬೆಳಗ್ಗೆ 10;35 ಕ್ಕೆ ಹಾಗೂ ಮಧ್ಯಾಹ್ನ 12 ಗಂಟೆ ಹಾಗೂ 2 ಗಂಟೆಗೆ ವಾಟಲ್ ಬೆಲ್ ಮಾಡಲು ಚಿಂತನೆ ನಡೆಸಿದೆ. ಮಕ್ಕಳ ಆರೋಗ್ಯ ದೃಷ್ಟಿ ಯಿಂದ ನೀರು ಬಹಳ ಮುಖ್ಯವಾಗಿದ್ದು ಆದ್ದ ರಿಂದ ಮಕ್ಕಳಿಗೆ ನೀರು ಕುಡಿಯಲು ದಿನಕ್ಕೆ ಮೂರು ಬಾರಿ 10 ನಿಮಿಷ ಬ್ರೇಕ್ ನೀಡಲು ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

ಮಕ್ಕಳು ಸಾಮಾನ್ಯವಾಗಿ ಶಾಲೆಗೆ ವಾಟರ್ ಬಾಟಲ್ ತೆಗೆದುಕೊಂಡು ಹೋಗುತ್ತಾರೆ ಆದರೆ, ಸಮರ್ಪಕವಾಗಿ ನೀರು ಕುಡಿಯುತ್ತಾರೆಯೇ ಈ ಪ್ರಶ್ನೆಗೆ ಬಹುತೇಕ ಪೋಷಕರಲ್ಲಿ ತೃಪ್ತಿಕರ ಪ್ರತಿ ಕ್ರಿಯೆ ಇಲ್ಲ ಶಾಲೆಗಳಲ್ಲಿ ಮಕ್ಕಳು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುತ್ತಿಲ್ಲಎಂಬುದನ್ನು ಮನಗಂಡ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ರಾಜ್ಯದ ಎಲ್ಲಶಾಲೆಗಳಲ್ಲಿಯೂ ಕೇರಳ ಮಾದರಿ ಯಲ್ಲಿ ವಾಟರ್ ಬೆಲ್ ಯೋಜನೆ ಮರು ಜಾರಿ ಗೊಳಿಸುವ ಕುರಿತು ಚಿಂತನೆ ನಡೆಸಿದ್ದಾರೆ.

ವರದಿ – ಚಕ್ರವರ್ತಿ ಜೊತೆಗೆ ಮಂಜುನಾಥ ಬಡಿಗೇರ ಸುದ್ದಿ ಸಂತೆ ನ್ಯೂಸ್ ಂಂಂಂಂಂಂಂಂಂಂಂಂ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.