ಬೆಂಗಳೂರು –
ಇಂದಿನಿಂದ ರಾಜ್ಯದಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ ದೊಂದಿಗೆ ಶಾಲೆಗಳು ಆರಂಭವಾಗುತ್ತಿದ್ದು ಈ ಒಂದು ಕಾರ್ಯಕ್ರಮ ವನ್ನು ಅನುಷ್ಠಾನ ಮಾಡುವ ಜವಾಬ್ದಾರಿ ಯನ್ನು ಡಿಡಿಪಿಐ ಮತ್ತು ಬಿಇಒಗಳಿಗೆ ನೀಡಲಾಗಿದೆ.ಈ ಶೈಕ್ಷಣಿಕ ವರ್ಷ ಮೇ 16 ರಿಂದ ಪ್ರಾರಂಭವಾಗಲಿದ್ದು ವಿದ್ಯಾರ್ಥಿಗಳ ಕಲಿಕಾ ನ್ಯೂನ್ಯತೆಯನ್ನು ಸರಿದೂಗಿಸುವ ಸಲುವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಯೋಜನೆಯನ್ನು ಹಾಕಿಕೊಳ್ಳಲಾ ಗದೆ.ಶಾಲಾ ಹಂತದಲ್ಲಿ ನಡೆಯಲಿರುವ ಕಲಿಕಾ ಚೇತರಿ ಕೆಯ ಮಾಹಿತಿಯನ್ನು ಸಿಆರ್ ಪಿಗಳ ಮೂಲಕ ತರಿಸಿ ಕೊಂಡು ಡಿಡಿಪಿಐ ಮತ್ತು ಬಿಇಒಗಳು ಪರಿಶೀಲಿಸಲಿದ್ದಾರೆ.
ಎರಡು ಶೈಕ್ಷಣಿಕ ವರ್ಷ ವಿದ್ಯಾರ್ಥಿಗಳ ಕೌಶಲ್ಯವನ್ನೇ ಕಸಿದುಕೊಂಡಿದೆ.ಇದರಿಂದಾಗಿ ಕಲಿಕಾ ಚೇತರಿಕೆಯ ಕಾರ್ಯಕ್ರಮದ ಮಹತ್ವವನ್ನು ಪೋಷಕರಿಗೆ ಮನವರಿಕೆ ಮಾಡಿಕೊಡುವ ಮೂಲಕ ವಿದ್ಯಾರ್ಥಿಗಳನ್ನು ಶಾಲೆಯ ಕೊಠಡಿಗಳಿಗೆ ಬರುವಂತೆ ಮಾಡುವುದು ಹಾಗೂ ಮಕ್ಕಳ ಕಲಿಕೆಯ ನ್ಯೂನ್ಯತೆಯನ್ನು ಪತ್ತೆ ಮಾಡಿ ಉತ್ತಮ ಶಿಕ್ಷಣ ವನ್ನು ನೀಡಬೇಕಾಗಿದೆ.ಇನ್ನು ಮೇ 16 ರಿಂದ ಶಾಲೆಗಳು ಪ್ರಾರಂಭವಾಗಲಿವೆ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ತಿಳಿಸಿದ್ದು ಸರ್ವರು ಶಾಲೆಗೆ ಬನ್ನಿ ಮಕ್ಕಳನ್ನು ಕರೆತನ್ನಿ ಎಂದು ಕೋರಿದ್ದಾರೆ.